ಸಿನಿಮಾ ಮುಹೂರ್ತ: 'ಲವ್ ಮಾಕ್ ಟೇಲ್' ಬಳಿಕ ಹೊಸ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ

ಲಾಕ್ ಡೌನ್ ಸಡಿಲಿಕೆ ಆಗುತ್ತಿದಂತೆ ಸಿನಿಮಾ ಕೆಲಸಗಳು ಪ್ರಾರಂಭವಾಗುತ್ತಿವೆ. ಈಗಾಗಲೆ ಚಂದನವನದಲ್ಲಿ ಸಿನಿಮಾ ಮುಹೂರ್ತ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇತ್ತೀಚಿಗೆ ಡಾರ್ಲಿಂಗ್ ಕೃಷ್ಣ ಅಭಿನಯದ ಶ್ರೀಕೃಷ್ಣ@gmail.com (ಶ್ರೀಕೃಷ್ಣ@gmail.com) ಚಿತ್ರದ ಮುಹೂರ್ತ ನೆರವೇರಿದೆ. ಬೆಂಗಳೂರಿನ ಅರ್ಜುನ್ ಜನ್ಯ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ಸಿಂಪಲ್ ಆಗಿ ಮುಹೂರ್ತ ಮಾಡಿ ಮುಗಿಸಿದೆ ಸಿನಿಮಾತಂಡ.

Recommended Video

ಸುಶಾಂತ್ ಗೆಳತಿ ಜೊತೆ 10 ಗಂಟೆ ವಿಚಾರಣೆ ನಡೆಸಿದ ಪೊಲೀಸ್ | Rhea Chakraborty | FILMIBEAT KANNADA

ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು. ಪ್ರಮುಖ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿದ್ದಾರೆ. ಇಂದು ನಡೆದ ಮುಹೂರ್ತ ಸಮಾರಂಭದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಭಾವಿ ಪತ್ನಿ ಮಿಲನಾ ನಾಗರಾಜ್, ಅರ್ಜುನ್ ಜನ್ಯ, ನಿರ್ದೇಶಕ ನಾಗಶೇಖರ್ ಸೇರಿದ್ದಂತೆ ಇಡೀ ಸಿನಿಮಾತಂಡ ಭಾಗಿಯಾಗಿತ್ತು.

ಲಾಕ್ ಡೌನ್ ನಲ್ಲಿ ಸಿನಿಮಾ ಕಥೆ ಮಾಡಿಮುಗಿಸಿರುವ ನಿರ್ದೇಶಕ ನಾಗಶೇಖರ್ ಈಗ ಮುಹೂರ್ತ ಸಹ ಮಾಡಿ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಮತ್ತು ರಾಧಿಕಾ ತೆರೆ ಮೇಲೆ ಮಿಂಚುತ್ತಿದ್ದಾರೆ.

Darling Krishna Starrer Shrikrishna@gmail.co Movie Murtha

ನಿರ್ದೇಶಕ ನಾಗಶೇಖರ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಕೃಷ್ಣ@gmail.com (ಶ್ರೀಕೃಷ್ಣ@gmail.com) ಸಿನಿಮಾ ಜೊತೆಗೆ ತಮಿಳಿನಲ್ಲಿಯೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಲವ್ ಮಾಕ್ ಟೇಲ್ ತೆಲುಗು ರಿಮೇಕ್ ಗೂ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲಾ ಸಿನಿಮಾಗಳನ್ನು ಒಟ್ಟಿಗೆ ಮಾಡಿಮುಗಿಸುವ ಪ್ಲಾನ್ ನಾಗಶೇಖರ್ ಅವರದ್ದು.

More from Filmibeat

English summary
Darling Krishna starrer Shri Krishnagmail.com movie murtha held in Arjun Janya recording studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X