ಡಾರ್ಲಿಂಗ್ ಕೃಷ್ಣ ನಟನೆಯ 'ಶುಗರ್ ಫ್ಯಾಕ್ಟರಿ' ಚಿತ್ರದ ಮುಹೂರ್ತ

ಮದುವೆ ತಯಾರಿಯಲ್ಲಿರುವ ಡಾರ್ಲಿಂಗ್ ಕೃಷ್ಣ ಅವರ ಹೊಸ ಪ್ರಾಜೆಕ್ಟ್ ಶುರುವಾಗಿದೆ. ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಪಂಚಮುಖಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ಶುಗರ್ ಫ್ಯಾಕ್ಟರಿ ಚಿತ್ರದ ಮುಹೂರ್ತ ನಡೆದಿದೆ.

ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಚಿತ್ರಕ್ಕೆ ಶುಭಹಾರೈಸಿದರು.

ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸು ಈ ಚಿತ್ರ ನಿರ್ದೇಶಿಸುತ್ತಿದ್ದು, ಅಮೂಲ್ಯ ಹಾಗೂ ಜಗದೀಶ್ ದಂಪತಿ ಸಹ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಮುಂಚೆ ಮನಸಾಲಜಿ ಚಿತ್ರವನ್ನು ದೀಪಲ್ ಅರಸು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಅಮೂಲ್ಯ ಮತ್ತು ರಾಕೇಶ್ ಅಡಿಗ ನಟಿಸಿದ್ದರು.

Darling Krishna Starrer Sugar Factory Movie Muhurath Held Today

'ಲವ್ ಮಾಕ್ಟೈಲ್' ಸಿನಿಮಾದ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣ 'ಲವ್ ಮಾಕ್ಟೈಲ್ 2 ಸಿನಿಮಾ ಆರಂಭಿಸಿದ್ದರು. ಇದೀಗ, ಶುಗರ್ ಫ್ಯಾಕ್ಟರಿ ಚಿತ್ರಕ್ಕೂ ಚಾಲನೆ ನೀಡಿದ್ದಾರೆ.

ಅಂದ್ಹಾಗೆ, ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಮೂವರು ನಾಯಕಿಯರು. 'ಪಂಚತಂತ್ರ' ಖ್ಯಾತಿಯ ಸೋನಲ್ ಮೊಂಥೆರೋ, ಅದ್ವಿತಿ ಶೆಟ್ಟಿ ಹಾಗೂ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

Darling Krishna Starrer Sugar Factory Movie Muhurath Held Today

ಇಂದಿನಿಂದಲೇ ಶುಗರ್ ಫ್ಯಾಕ್ಟರಿ ಸಿನಿಮಾದ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ನಂತರ ಗೋವಾ, ಮೈಸೂರು ಹಾಗೂ ವಿದೇಶಗಳಲ್ಲಿಯೂ ಕೆಲವು ದೃಶ್ಯಗಳನ್ನು ಶೂಟ್ ಮಾಡುವ ಪ್ಲಾನ್ ಹೊಂದಿದ್ದಾರಂತೆ. ಇನ್ನು ಫೆಬ್ರವರಿ 14 ರಂದು ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನ ನಾಗರಾಜ್ ಅವರ ವಿವಾಹ ಜರುಗಲಿದೆ.

More from Filmibeat

English summary
Darling Krishna and adhvithi shetty starrer Sugar Factory movie muhurath held today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X