ಡಾರ್ಲಿಂಗ್ ಕೃಷ್ಣಗೆ ನಾಗಶೇಖರ್ ನಿರ್ದೇಶನ: ಚಿತ್ರದ ನಾಯಕಿ ಮತ್ತು ಹೆಸರು ಬಹಿರಂಗ

ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದ ಸಿನಿಮಾ ಲವ್ ಮಾಕ್ ಟೇಲ್. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ಅಭಿನಯದ ಈ ಸಿನಿಮಾ ಕನ್ನಡ ಚಿತ್ರಪ್ರಿಯರ ಮನಗೆದ್ದಿದೆ. ಈ ಸಿನಿಮಾ ನಂತರ ಕೃಷ್ಣ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಲ್ಲದೆ, ಬೇಡಿಕೆಯ ನಿರ್ದೇಶಕರಾಗಿದ್ದಾರೆ. ಲವ್ ಮಾಕ್ ಟೇಲ್ ನಂತರ ಕೃಷ್ಣ ಪಾರ್ಟ್-2ನಲ್ಲಿ ಕೃಷ್ಣ ಬ್ಯುಸಿಯಾಗಿದ್ದಾರೆ.

Recommended Video

ಮತ್ತೊಂದು ಖುಷಿಯನ್ನು ಶೇರ್ ಮಾಡಿದ 'ಲವ್ ಮಾಕ್ ಟೇಲ್' ಚಿತ್ರತಂಡ..? | Milana Nagaraj | Darling Krishna

ಇದರ ನಡುವೆ ಈಗ ಕೃಷ್ಣ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಡಾರ್ಲಿಂಗ್ ಕೃಷ್ಣ ಸದ್ಯ ನಿರ್ದೇಶಕ ನಾಗಶೇಖರ್ ಜೊತೆ ಸೇರಿಕೊಂಡಿದ್ದಾರೆ. ರೊಮ್ಯಾಂಟಿಕ್ ಸಿನಿಮಾಗಳ ನಿರ್ದೇಶಕ ಅಂತನೆ ಖ್ಯಾತಿಗಳಿಸಿರುವ ನಾಗಶೇಖರ್ ಈಗ ಕೃಷ್ಣಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಒಂದಾಗುತ್ತಿರುವ ಕೃಷ್ಣ ಮತ್ತು ನಾಗಶೇಖರ್ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ವಿಶೇಷ ಅಂದರೆ ಚಿತ್ರಕ್ಕೆ ವಿಭಿನ್ನವಾದ ಟೈಟಲ್ ಇಟ್ಟಿದ್ದಾರೆ. ಮುಂದೆ ಓದಿ..

Srikrishna@gmail.com ಟೈಟಲ್

[email protected] ಟೈಟಲ್

[email protected] ಇದು ಡಾರ್ಲಿಂಗ್ ಕೃಷ್ಣ ಜಿಮೇಲ್ ಅಕೌಂಟ್ ಅಂತ ಅನ್ಕೋಬೇಡಿ. ಇದು ನಾಗಶೇಖರ್ ಮತ್ತು ಡಾರ್ಲಿಂಗ್ ಕೃಷ್ಣ ಸಿನಿಮಾದ ಟೈಟಲ್. ವಿಭಿನ್ನವಾದ ಹೆಸರಿನ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿರುವ ಈ ಹೊಸ ಜೋಡಿಯ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಟೈಟಲ್ ನೋಡಿದ್ರೆ ಸೈಬರ್ ಲೋಕದ ಬಗ್ಗೆ ಇರುವ ಸಿನಿಮಾ ಅಂತ ಮೇಲ್ನೋಟಕ್ಕೆ ಅನಿಸುತ್ತೆ. ಆದರೆ ಈ ಬಗ್ಗೆ ಯಾವುದೆ ಸುಳಿವು ಬಿಟ್ಟುಕೊಟ್ಟಿಲ್ಲ ನಿರ್ದೇಶಕ ನಾಗಶೇಖರ್.

ಲಾಕ್ ಡೌನ್ ನಲ್ಲಿ ಕಥೆ ಮಾಡಿ ಮುಗಿಸಿರುವ ನಾಗಶೇಖರ್

ಲಾಕ್ ಡೌನ್ ನಲ್ಲಿ ಕಥೆ ಮಾಡಿ ಮುಗಿಸಿರುವ ನಾಗಶೇಖರ್

ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣ, ಪ್ರದರ್ಶನ ಸೇರಿದಂತೆ ಸಿನಿಮಾರಂಗ ಸ್ಥಬ್ದವಾಗಿದ್ದರೆ, ಸಾಕಷ್ಟು ನಿರ್ದೇಶಕರು ಮುಂದಿನ ಸಿನಿಮಾಗೆ ಕಥೆ ತಯಾರಿಸಿದ್ದಾರೆ. ನಿರ್ದೇಶಕ ನಾಗೇಖರ್ ಸಹ ಲಾಕ್ ಡೌನ್ ನಲ್ಲಿ ಕಥೆ ಸಿದ್ಧಮಾಡಿ ಕೃಷ್ಣ ಜೊತೆ ಸಿನಿಮಾ ಮಾಡಲು ತಯಾರಾಗಿದ್ದಾರೆ. ಈಗಾಗಲೆ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ನಾಗಶೇಖರ್ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನಾಯಕಿ

ರಾಧಿಕಾ ಕುಮಾರಸ್ವಾಮಿ ನಾಯಕಿ

ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರತಂಡ ರಾಧಿಕ ಜೊತೆ ಫೋನಿನಲ್ಲಿ ಮಾತುಕತೆ ನಡೆಸಿದೆಯಂತೆ. ನಾಗಶೇಖರ್ ಕಥೆ ಕೇಳಿ ರಾಧಿಕಾ ಗ್ರೀನ್ ಸಿಗ್ನಲ್ ನೀಡಿದ್ದು ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಮೊದಲ ಬಾರಿಗೆ ಕೃಷ್ಣ ಮತ್ತು ರಾಧಿಕಾ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಜೆಸ್ಸಿ ಗಿಫ್ಟ್ ಸಂಗೀತ, ಸತ್ಯ ಹೆಗ್ಡೆ ಕ್ಯಾಮರಾ

ಜೆಸ್ಸಿ ಗಿಫ್ಟ್ ಸಂಗೀತ, ಸತ್ಯ ಹೆಗ್ಡೆ ಕ್ಯಾಮರಾ

ನಾಗಶೇಖರ್ ಸಿನಿಮಾ ಅಂದ್ಮೇಲೆ ಮ್ಯೂಸಿಕ್ ಎಲ್ಲರ ಗಮನ ಸೆಳೆಯುತ್ತೆ. ಸಂಗೀತಕ್ಕೆ ಹೆಚ್ಚು ಒತ್ತು ಕೊಡುವ ನಾಗಶೇಖರ್ ಈ ಸಿನಿಮಾದಲ್ಲೂ ಮೆಲೋಡಿಗಳ ಹಾಡುಗಳ ಅಬ್ಬರ ಇರಲಿದೆ. ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಹಿಂದೆ ಸಂಜು ವೆಡ್ಸ್ ಗೀತಾ ಮತ್ತು ಮೈನಾ ಸಿನಿಮಾಗಳಿಗೆ ಸಂಗೀತ ನೀಡಿದ್ದ ಜೆಸ್ಸಿ ಗಿಫ್ಟ್ ಈಗ ಮತ್ತೆ ನಾಗಶೇಖರ್ ಜೊತೆ ಸೇರಿದ್ದಾರೆ. ಇನ್ನೂ ಸತ್ಯಾ ಹೆಗ್ಡೆ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.

ತಮಿಳು ಸಿನಿಮಾದಲ್ಲಿ ನಾಗಶೇಖರ್

ತಮಿಳು ಸಿನಿಮಾದಲ್ಲಿ ನಾಗಶೇಖರ್

ನಾಗಶೇಖರ್ ಸದ್ಯ ತಮಿಳು ಸಿನಿಮಾದಲ್ಲಿ ಬ್ಯುಸಿ ಇದ್ದರು. 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಸಿನಿಮಾ ನಿರ್ದೇಶನ ಮಾಡುವ ಜೊತೆಗೆ ನಾಗಶೇಖರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 60ರಷ್ಟು ಚಿತ್ರೀಕರಣ ಮುಗಿಸಿರುವ ನಾಗಶೇಖರ್ ಅಂಡ್ ಟೀಂ ಲಾಕ್ ಡೌನ್ ಮುಗಿಯುತ್ತಿದ್ದಂತೆ ಎರಡೂ ಸಿನಿಮಾವನ್ನು ಪ್ರಾರಂಭಿಸಲಿದ್ದಾರೆ.

More from Filmibeat

English summary
Darling krishna team up with director Nagashekar for next title Srikrishnagmail.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X