twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿಮಾ ಮಾಡೋದೆ ತಪ್ಪಾ?: ಕೃಷ್ಣ, ರಘು ದೀಕ್ಷಿತ್ ಬೇಸರ!

    |

    ಒಳ್ಳೆ ಸಿನಿಮಾ ಮಾಡಿದ್ರೆ, ಜನ ಯಾವತ್ತು ಕೈ ಬಿಡಲ್ಲ.. ಒಳ್ಳೆಯ ಸಿನಿಮಾ ಗೆದ್ದೇ ಗೆಲ್ಲುತ್ತೇ ಅಂತಾರೆ.. ಆದರೆ, ಕೆಲವು ಬಾರಿ ಈ ಮಾತು ಸುಳ್ಳಾಗಿ ಬಿಡುತ್ತದೆ.

    ಕನ್ನಡದಲ್ಲಿ ಕೆಲವು ಒಳ್ಳೆಯ ಸಿನಿಮಾಗಳು ಸೋಲಬೇಕಾದ ಪರಿಸ್ಥಿತಿ ಆಗಾಗ ಬರುತ್ತದೆ. ಚಿತ್ರ ನೋಡಿ, ಒಳ್ಳೆಯ ಸಿನಿಮಾ ಎಂಬ ಮಾತು ಶುರುವಾಗಿ, ನಿಧಾನವಾಗಿ ಚಿತ್ರಮಂದಿರ ತುಂಬಿವುದರೊಳಗೆ ಚಿತ್ರಮಂದಿರದಿಂದ ಸಿನಿಮಾವನ್ನು ತೆಗೆಯುತ್ತಾರೆ.

    Love Mocktail Review: ಬಹಳ ದಿನಗಳ ನಂತರ ಬಂದ ಒಂದೊಳ್ಳೆ ಪ್ರೇಮಕಥೆLove Mocktail Review: ಬಹಳ ದಿನಗಳ ನಂತರ ಬಂದ ಒಂದೊಳ್ಳೆ ಪ್ರೇಮಕಥೆ

    ಇಂತಹ ಪರಿಸ್ಥಿತಿಯಲ್ಲಿ ಸದ್ಯ ಡಾರ್ಲಿಂಗ್ ಕೃಷ್ಣ ನಟನೆ ಹಾಗೂ ನಿರ್ದೇಶನದ 'ಲವ್ ಮಾಕ್ ಟೈಲ್' ಸಿನಿಮಾಗೆ ಬಂದಿದೆ. ಕಳೆದ ಶುಕ್ರವಾರ ಬಿಡುಗಡೆಯಾದ ಈ ಸಿನಿಮಾ ಸದ್ಯ, ಬೆಂಗಳೂರಿನಲ್ಲಿ ಒಂದೇ ಒಂದು ಚಿತ್ರಮಂದಿರದಲ್ಲಿ ಇದೆ. ಕಷ್ಟಪಟ್ಟು ಸಿನಿಮಾ ಮಾಡಿ, ಆ ಸಿನಿಮಾವನ್ನು ಜನ ಇಷ್ಟಪಟ್ಟರೂ ಥಿಯೇಟರ್ ನಲ್ಲಿ ಭದ್ರವಾಗಿ ನಿಲ್ಲಲು ಆಗುತ್ತಿಲ್ಲ.

    ತಮ್ಮ ಈ ಪರಿಸ್ಥಿತಿ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಬೇಸರಗೊಂಡಿದ್ದಾರೆ. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.

    ಇದು ಕನ್ನಡ ಸಿನಿಮಾದ ಹಣೆಬರಹ

    ಇದು ಕನ್ನಡ ಸಿನಿಮಾದ ಹಣೆಬರಹ

    ''ಇದು ನಮ್ಮ ಕನ್ನಡದ ಸಿನಿಮಾದ ಹಣೆಬರಹ'' ಹೀಗೆಂದು ಒಂದೇ ಮಾತಿನಲ್ಲಿ ತಮ್ಮ ಬೇಸರವನ್ನು ಕೃಷ್ಣ ಹೇಳಿಕೊಂಡರು. ಕಳೆದ ವಾರ 'ಲವ್ ಮಾಕ್ ಟೈಲ್' ಸಿನಿಮಾ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಜನರು ಹಾಗೂ ವಿಮರ್ಶಕರು ಇಬ್ಬರು ಸಿನಿಮಾ ಮೆಚ್ಚಿಕೊಂಡಿದ್ದರು. ಒಳ್ಳೆಯ ಮಾತು ಪಡೆದ ಸಿನಿಮಾಗೆ ನಿಧಾನವಾಗಿ ಜನ ಬರುತ್ತಿದ್ದರು. ಆದರೆ, ಒಂದೇ ವಾರದಲ್ಲಿ ಎಲ್ಲ ಕಡೆ ಸಿನಿಮಾವನ್ನು ತೆಗೆದಿದ್ದಾರೆ ಎಂದು ಕೃಷ್ಣ ಬೇಸರ ಹಂಚಿಕೊಂಡಿದ್ದಾರೆ.

    ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್

    ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್

    ''ಈ ವಾರ 10 ಚಿತ್ರಗಳು ಬಿಡುಗಡೆಯಾಗಿದೆ. ಸಿಂಗಲ್ ಸ್ಕ್ರೀನ್ ನಲ್ಲಿ ನಮ್ಮ ಸಿನಿಮಾ ಉಳಿಸಿಕೊಳ್ಳಲು ಬಾಡಿಗೆ ನೀಡಬೇಕು. ಮಲ್ಟಿಪ್ಲೆಕ್ಸ್ ನಲ್ಲಿ ಶುಕ್ರವಾರದಿಂದ ಗುರುವಾರದವರೆಗೆ ಬಂದ ಪ್ರೇಕ್ಷಕರನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಆದರೆ, ದಿನದಿಂದ ದಿನಕ್ಕೆ ಜನ ಹೆಚ್ಚಾಗುತ್ತಿರುವುದನ್ನು ಗಮನಿಸುವುದಿಲ್ಲ. ನಿನ್ನೆ ಬನ್ನೇರುಘಟ್ಟ ಪಿವಿಆರ್ ನಲ್ಲಿ ಸಿನಿಮಾ ಹೌಸ್ ಫುಲ್ ಆಗಿದೆ ಆದರೆ, ಇಂದು ತಮ್ಮ ಸಿನಿಮಾವೇ ಇಲ್ಲ ಎಂದರು ಕೃಷ್ಣ.

    ಜಾಕ್ ಮಂಜು ಭರವಸೆ

    ಜಾಕ್ ಮಂಜು ಭರವಸೆ

    ಈ ವಾರ ಬಿಡುಗಡೆಯಾದ ಸಿನಿಮಾಗಳ ಫಲಿತಾಂಶ ನೋಡಿಕೊಂಡು, ಮುಂದಿನ ವಾರ ಮತ್ತೆ 'ಲವ್ ಮಾಕ್ ಟೈಲ್'ಗೆ ಚಿತ್ರಮಂದಿರಗಳನ್ನು ನೀಡುವ ಭರವಸೆಯನ್ನು ವಿತರಕ ಜಾಕ್ ಮಂಜು ನೀಡಿದ್ದಾರಂತೆ. ಒಳ್ಳೆಯ ಸಿನಿಮಾ ಎಂದು ಜನರಿಂದ ಮೆಚ್ಚುಗೆ ಪಡೆದ ಮೇಲೆ ಚಿತ್ರಮಂದಿರದವರು ಸಿನಿಮಾ ಉಳಿವಿಗೆ ಸಹಕಾರ ನೀಡಬೇಕು ಎನ್ನುವುದು ಕೃಷ್ಣ ಮನವಿಯಾಗಿದೆ.

    ರಘು ದೀಕ್ಷಿತ್ ಬೇಸರ

    ರಘು ದೀಕ್ಷಿತ್ ಬೇಸರ

    ರಘು ದೀಕ್ಷಿತ್ ಈ ಬಗ್ಗೆ ಮಾತನಾಡಿದ್ದು, ''ಸಿನಿಮಾವನ್ನು ಜನರು ಹಾಗೂ ಮಾಧ್ಯಮದವರು ಇಬ್ಬರೂ ಇಷ್ಟಪಟ್ಟಿದ್ದಾರೆ. ಆದರೆ, ಇಂದು ಸಿನಿಮಾಗೆ ಕೇವಲ ಒಂದೇ ಚಿತ್ರಮಂದಿರದಲ್ಲಿ ಇದೆ.

    ಈ ಸಿನಿಮಾ ನಿಮಗೆ ಇಷ್ಟ ಆಗಲಿಲ್ಲ ಎಂದರೆ ನಾನು ಹಣವನ್ನು ವಾಪಸ್ ನೀಡುತ್ತೇನೆ. ನಿಜವಾಗಿಯೂ ನನ್ನ ಅಭಿಮಾನಿಯಾಗಿದ್ದರೆ, ಸಿನಿಮಾ ನೋಡಿ. ಬೇರೆ ಭಾಷೆಯಲ್ಲಿ ಇದೇ ಸಿನಿಮಾ ಬಂದಿದ್ದರೆ ಎಲ್ಲರೂ ನೀಡುತ್ತಿದ್ದರು. ಆದರೆ, ಕನ್ನಡ ಸಿನಿಮಾ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೀರKEY'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    English summary
    Kannada actor Darling Krishna unhappy about theater owners.
    Friday, February 7, 2020, 18:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X