ಚಿತ್ರೀಕರಣ ಮುಗಿಸಿದ 'ಲವ್ ಮಾಕ್ಟೆಲ್ 2' ಖುಷಿಯಲ್ಲಿ ಆದಿ-ನಿಧಿಮಾ

ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ಗೆ ಮುಂಚೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಒಂದೊಳ್ಳೆ ಸಿನಿಮಾ ಎನಿಸಿಕೊಂಡಿದ್ದ 'ಲವ್ ಮಾಕ್ಟೆಲ್' ಲಾಕ್‌ಡೌನ್ ನಂತರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿತ್ತು.

ಸಿನಿಮಾಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ಕಂಡು ಲಾಕ್‌ಡೌನ್‌ ಅವಧಿಯಲ್ಲಿಯೇ 'ಲವ್ ಮಾಕ್ಟೆಲ್' ಸಿನಿಮಾದ ಮುಂದಿನ ಭಾಗ 'ಲವ್ ಮಾಕ್ಟೆಲ್ 2' ಅನ್ನು ನಿರ್ದೇಶನ, ನಟ ಡಾರ್ಲಿಂಗ್ ಕೃಷ್ಣ ಘೋಷಿಸಿದ್ದರು. ಕೊರೊನಾ ಲಾಕ್‌ಡೌನ್ ಅಂತ್ಯವಾದ ಬಳಿಕ ಚಿತ್ರೀಕರಣ ಪ್ರಾರಂಭಿಸಿದ್ದ ತಂಡ ಇಂದು ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ.

ಚಿತ್ರೀಕರಣ ಅಂತ್ಯವಾದ ಖುಷಿಯನ್ನು ಸಿನಿಮಾದ ನಾಯಕ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಾಗೂ ಸಿನಿಮಾದ ನಾಯಕಿ ಮಿಲನಾ ನಾಗರಾಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭವಾಗಲಿದ್ದು, ಸಿನಿಮಾವನ್ನು ಶೀಘ್ರ ಪ್ರೇಕ್ಷಕರ ವೀಕ್ಷಣೆಗೆ ನೀಡುವುದು ಚಿತ್ರತಂಡದ ಉಮೇದು.

Darlink Krishhna, Milana Nagrajs Love Mocktail 2 Movie Shooting Complete

'ಲವ್ ಮಾಕ್ಟೆಲ್' ಸಿನಿಮಾ ಚಿತ್ರಮಂದಿರಕ್ಕಿಂತಲೂ ಅಮೆಜಾನ್ ಪ್ರೈಂನಲ್ಲಿ ದೊಡ್ಡ ಹಿಟ್ ಆಗಿತ್ತು, ಹಾಗಾಗಿ 'ಲವ್ ಮಾಕ್ಟೆಲ್ 2' ಅನ್ನೂ ಅಮೆಜಾನ್ ಪ್ರೈಂಗೆ ನೇರ ಬಿಡುಗಡೆ ಮಾಡುತ್ತಾರಾ ಡಾರ್ಲಿಂಗ್ ಕೃಷ್ಣ ಎಂಬುದನ್ನು ಕಾದು ನೋಡಬೇಕಿದೆ.

ಬಹು ವರ್ಷಗಳ ಪ್ರೇಮಿಗಳಾಗಿದ್ದ 'ಲವ್ ಮಾಕ್ಟೆಲ್‌'ನ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಪ್ರೇಮಕ್ಕೆ ಮದುವೆಯ ಚೌಕಟ್ಟನ್ನು ಇತ್ತೀಚೆಗಷ್ಟೆ ತೊಡಿಸಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಿದ್ದಾಗ ಆಪ್ತ ಗೆಳೆಯರು, ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿದ್ದು, ವಿವಾಹದ ಬಳಿಕ ಇಬ್ಬರಿಗೂ ಇದು ಮೊದಲ ಸಿನಿಮಾ ಆಗಿದೆ.

Darlink Krishhna, Milana Nagrajs Love Mocktail 2 Movie Shooting Complete

'ಲವ್ ಮಾಕ್ಟೆಲ್ 2' ಸಿನಿಮಾ ಹೊರತುಪಡಿಸಿ ಡಾರ್ಲಿಂಗ್ ಕೃಷ್ಣ 'ಶುಗರ್‌ ಫ್ಯಾಕ್ಟರಿ', 'ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್', 'ಲವ್ ಮಿ ಆರ್ ಹೇಟ್ ಮೀ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಮಿಲನಾ ನಾಗರಾಜ್, 'ಫಾರ್ ರಿಜಿಸ್ಟ್ರೇಶನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Darling Krishna and Milana Nagraj's Love Mocktail 2 movie shooting complete today. Movie will be released soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X