ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!

ಸಿನಿಮಾ ನಟರ ಫ್ಯಾನ್ಸ್ ಅಂದ್ರೆ ನೆಚ್ಚಿನ ನಟನ ಸಿನಿಮಾಗಳನ್ನು ಥಿಯೇಟರ್ ನಲ್ಲಿ ನೋಡಿ ಶಿಳ್ಳೆ-ಚಪ್ಪಾಳೆ ಹೊಡೆಯುವವರು, ಆರಾಧ್ಯ ದೈವನ ಫೋಟೋಗಳನ್ನ ರೂಮ್ ತುಂಬಾ ಅಂಟಿಸಿಕೊಳ್ಳುವವರು, ಫೇವರೆಟ್ ಹೀರೋ ಹೆಸರನ್ನ ಟಾಟ್ಯೂ ಹಾಕಿಸಿಕೊಳ್ಳುವವರು, ಇಷ್ಟದ ನಟನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವವರು, ತಮ್ಮ 'ಬಾಸ್' ಕಟೌಟ್ ಗೆ ಬೃಹತ್ ಹೂವಿನ ಹಾರ ಹಾಕುವವರು, ಹಾಲಿನ ಅಭಿಶೇಕ ಮಾಡುವವರು ಮಾತ್ರ ಅಂತ ಅಂದುಕೊಳ್ಳಬೇಡಿ.

ನೆಚ್ಚಿನ ನಟನ ಹೆಸರಿನಲ್ಲಿ ಬಡವರಿಗೆ ಸಹಾಯ ಮಾಡುವ ದೊಡ್ಡ ಮನಸ್ಸಿನ, ವಿಶಾಲ ಹೃದಯದ ಅಭಿಮಾನಿಗಳು ಕೂಡ ಇದ್ದಾರೆ. ಅದಕ್ಕೆ ಸಾಕ್ಷಿ ಡಿ-ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು.!

ಹೌದು, ದರ್ಶನ್ ಹೆಸರಿನಲ್ಲಿ ಅವರ ಅಭಿಮಾನಿಗಳು ಒಂದೊಳ್ಳೆ ಕೆಲಸ ಮಾಡಲು ಹೊರಟಿದ್ದಾರೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬಡ ಕುಟುಂಬದ ಹೆಣ್ಣು ಮಗುವಿನ ಪ್ರಾಣ ಉಳಿಸಲು 'ದಾಸ'ನ ಭಕ್ತರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಮುಂದೆ ಓದಿರಿ...

ಅದ್ಧೂರಿ ಹುಟ್ಟುಹಬ್ಬ ಬೇಡ

ಅದ್ಧೂರಿ ಹುಟ್ಟುಹಬ್ಬ ಬೇಡ

ಫೆಬ್ರವರಿ 16 ರಂದು ದರ್ಶನ್ ಜನ್ಮದಿನ. 43ನೇ ವಸಂತಕ್ಕೆ ಕಾಲಿಡುತ್ತಿರುವ ದರ್ಶನ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಅಸಲಿಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಾರದು ಅಂತ ಕಳೆದ ವರ್ಷವೇ ಅಭಿಮಾನಿಗಳಲ್ಲಿ ನಟ ದರ್ಶನ್ ವಿನಂತಿ ಮಾಡಿಕೊಂಡಿದ್ದರು.

ಧವಸ-ಧಾನ್ಯ ತನ್ನಿ

ಧವಸ-ಧಾನ್ಯ ತನ್ನಿ

ತಮ್ಮ ಹುಟ್ಟುಹಬ್ಬದಂದು ಕೇಕ್, ಹಾರ, ಗಿಫ್ಟ್ ಗಳನ್ನು ತರುವ ಬದಲು ಅಕ್ಕಿ, ಬೇಳೆ, ಧವಸ-ಧಾನ್ಯ ತನ್ನಿ. ಅನಾಥಾಶ್ರಮಗಳಿಗೆ ಉಪಯೋಗ ಆಗುವ ಆಹಾರವನ್ನು ತಂದುಕೊಡಿ ಎಂದು ದರ್ಶನ್ ಕೇಳಿಕೊಂಡಿದ್ದರು. ಈ ಮೂಲಕ ಒಂದೊಳ್ಳೆ ರೀತಿಯಲ್ಲಿ ಜನ್ಮದಿನ ಸೆಲೆಬ್ರೇಟ್ ಮಾಡಿಕೊಳ್ಳಲು ದರ್ಶನ್ ಮುಂದಾಗಿದ್ದರು. ಇದೀಗ ಇದೇ ದಾರಿಯಲ್ಲಿ ಅಭಿಮಾನಿಗಳು ಕೂಡ ಸಾಗುತ್ತಿದ್ದಾರೆ. ಡಿ-ಬಾಸ್ ಬರ್ತಡೇ ಪ್ರಯುಕ್ತ ಬಡ ಮಗುವಿಗೆ ಸಹಾಯ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿರುವ ಮಗು

ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿರುವ ಮಗು

ದೇವನಹಳ್ಳಿಯ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗು ಚೈತನ್ಯ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದಾಳೆ. ಆಕೆಯ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಹೀಗಾಗಿ, ವಿಜಯಪುರ ಸಂಘದ ವತಿಯಿಂದ ಚಕ್ರವರ್ತಿ ದರ್ಶನ್ ಅಭಿಮಾನಿಗಳ ಸಂಘ ಚೈತನ್ಯಗೆ ಹಣ ಸಹಾಯ ಮಾಡುತ್ತಿದ್ದಾರೆ.

ಅರ್ಥಪೂರ್ಣ ಆಚರಣೆ

ಅರ್ಥಪೂರ್ಣ ಆಚರಣೆ

ದರ್ಶನ್ ಹುಟ್ಟುಹಬ್ಬದಂದು ಕೇಕ್, ಹಾರ ಮುಂತಾದವುಗಳಿಗೆ ಖರ್ಚು ಮಾಡುವ ಬದಲು ಅದೇ ದುಡ್ಡನ್ನು ಚೈತನ್ಯ ಚಿಕಿತ್ಸೆಗೆ ನೀಡಲು ಚಕ್ರವರ್ತಿ ದರ್ಶನ್ ಅಭಿಮಾನಿಗಳ ಸಂಘ ಮನಸ್ಸು ಮಾಡಿದೆ. ಅದ್ಧೂರಿ, ಆಡಂಬರದ ಹುಟ್ಟುಹಬ್ಬದ ಬದಲು ಹೆಣ್ಣು ಮಗುವಿನ ಪ್ರಾಣ ಉಳಿಸಿ, ಡಿ-ಬಾಸ್ ಬರ್ತಡೇಯನ್ನ ಅರ್ಥಪೂರ್ಣವಾಗಿ ಫ್ಯಾನ್ಸ್ ಆಚರಿಸಲಿದ್ದಾರೆ. ದರ್ಶನ್ ಅಭಿಮಾನಿಗಳು ಮಾಡುತ್ತಿರುವ ಈ ಕೆಲಸ ಮೆಚ್ಚುವಂಥದ್ದು ಅಲ್ಲವೇ.?

More from Filmibeat

English summary
Challenging Star Darshan 43rd Birthday: Fans are donating money for Brain Tumor patient.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X