'ಬಾಹುಬಲಿ'ಯನ್ನ ಮೀರಿಸುವಂತಿದೆ 'ಕುರುಕ್ಷೇತ್ರ'ದ ಫಸ್ಟ್ ಲುಕ್ ಟೀಸರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಚಿತ್ರ 'ಕುರುಕ್ಷೇತ್ರ' ಅದ್ಧೂರಿಯಾಗಿ ಆರಂಭವಾಗಿದೆ. ದರ್ಶನ್, ರವಿಚಂದ್ರನ್, ಅಂಬರೀಷ್, ಅರ್ಜುನ್ ಸರ್ಜಾ ಸೇರಿದಂತೆ ಹಲವು ಪಾತ್ರಗಳು ಅಂತಿಮವಾಗಿದ್ದು, ಚಿತ್ರದ ಬಗ್ಗೆ ಇದ್ದ ಹಲವು ಕುತೂಹಲಗಳಿಗೆ ತೆರೆ ಬಿದ್ದಿದೆ.
ಈ ಮಧ್ಯೆ 'ಕುರುಕ್ಷೇತ್ರ' ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದು, ಕನ್ನಡದ ಅತ್ಯದ್ಭುತ ಚಿತ್ರವಾಗಲಿದೆ ಎನ್ನಲಾಗುತ್ತಿದೆ. ತೆಲುಗಿನ ಮೆಗಾ ಬ್ಲ್ಯಾಕ್ ಬಸ್ಟರ್ ಚಿತ್ರ 'ಬಾಹುಬಲಿ' ಸಿನಿಮಾದ ನಂತರ ಕನ್ನಡದಲ್ಲಿ ಇಂಥಾದೊಂದು ಸಿನಿಮಾ ಮಾಡಬೇಕು ಎಂದುಕೊಂಡವರಿಗೆ 'ಕುರುಕ್ಷೇತ್ರ' ಚಿತ್ರದ ಈ ಟೈಟಲ್ ಟೀಸರ್ ಉದಾಹರಣೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಕ್ಷೇತ್ರಕ್ಕೆ ಚಾಲನೆ ಕೊಟ್ಟಿದ್ದು, 100 ದಿನಗಳ ಕಾಲ ಹೈದರಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ. ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಶಾಸಕ ಮುನಿರತ್ನ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಹರಿಕೃಷ್ಣ ಅವರು ಸಂಗೀತ ಒದಗಿಸುತ್ತಿದ್ದು, ತಾಂತ್ರಿಕ ತಂಡವು ಆಯ್ಕೆ ಆಗಿದೆ.
ದರ್ಶನ್ 'ದುರ್ಯೋಧನ', ಅಂಬರೀಷ್ 'ಭೀಷ್ಮ', ರವಿಚಂದ್ರನ್ 'ಕೃಷ್ಣ', ಬಹುಭಾಷಾ ನಟಿ ಸ್ನೇಹಾ 'ದ್ರೌಪದಿ', ಡ್ಯಾನಿಶ್ ಅಖ್ತರ್ ಸೈಫಿ 'ಭೀಮ' ರವಿಶಂಕರ್ 'ಶಕುನಿ', ಶ್ರೀನಾಥ್ 'ಧೃತರಾಷ್ಟ್ರ', ಶ್ರೀನಿವಾಸ ಮೂರ್ತಿ 'ದ್ರೋಣಚಾರ್ಯ', ಶಶಿಕುಮಾರ್ 'ಧರ್ಮರಾಯ', ನಿಖಿಲ್ ಕುಮಾರ್ ಅಭಿಮನ್ಯು, ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕುರುಕ್ಷೇತ್ರ ಚಿತ್ರದ ಟೈಟಲ್ ಟೀಸರ್ ಇಲ್ಲಿದೆ ನೋಡಿ.....


Click it and Unblock the Notifications