'ದರ್ಶನ್ 56' ಕುರಿತು ಹೊಸ ಅಪ್‌ಡೇಟ್ ಕೊಟ್ಟ ರಾಕ್‌ಲೈನ್; ಪೋಸ್ಟರ್ ಅಂದ್ರೆ ಇದು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್‌ನ ಎರಡನೇ ಸಿನಿಮಾ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಈ ಹಿಂದೆ ರಾಬರ್ಟ್ ಮೂಲಕ ದೊಡ್ಡ ಹಿಟ್ ನೀಡಿದ್ದ ಈ ಜೋಡಿ ಮತ್ತೊಮ್ಮೆ ಮೋಡಿ ಮಾಡಲಿದೆ ಎಂಬ ನಿರೀಕ್ಷೆ ಇದ್ದು, ವಿಶೇಷವಾಗಿ ದರ್ಶನ್ ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ನಿರೀಕ್ಷೆ ಇದೆ.
ಸದ್ಯ ಕ್ರಾಂತಿ ಚಿತ್ರದಲ್ಲಿ ನಿರತರಾಗಿದ್ದರೂ ಸಹ ದರ್ಶನ್ ಅಭಿಮಾನಿಗಳ ಕಣ್ಣು ತರುಣ್ ಸುಧೀರ್ ನಿರ್ದೇಶನದ ಮುಂದಿನ ಚಿತ್ರದ ಮೇಲೆಯೇ ಇತ್ತು. ಹಲವು ದಿನಗಳ ಹಿಂದಿನಿಂದಲೂ ನಮ್ಮ ಹೋಪ್ ಎಲ್ಲಾ ದರ್ಶನ್ 56 ಮೇಲೆ ಹೆಚ್ಚಿದೆ ಎಂದು ಹೇಳುತ್ತಿದ್ದ ದರ್ಶನ್ ಫ್ಯಾನ್ಸ್ ಚಿತ್ರತಂಡದ ಬಳಿ ಅಪ್‌ಡೇಟ್ ಯಾವಾಗ ಎಂದು ಪದೇ ಪದೇ ಕೇಳುತ್ತಿದ್ದರು.
ಇನ್ನು ಅಭಿಮಾನಿಗಳು ಎಷ್ಟೇ ಕೇಳಿದರೂ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದ ಚಿತ್ರತಂಡ ಇಂದು ( ಫೆಬ್ರವರಿ 10 ) ಚಿತ್ರದ ಕುರಿತಾಗಿ ಅಪ್‌ಡೇಟ್ ಒಂದನ್ನು ನೀಡುವ ಮೂಲಕ ಹೈಪ್ ಎಂಬ ಬೆಂಕಿಗೆ ಪೆಟ್ರೋಲ್ ಸುರಿದಿದೆ. ಹೌದು, ತರುಣ್ ಸುಧೀರ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಂತೆಯೇ ಸಂಜೆ ಸರಿಯಾಗಿ 4.02ಕ್ಕೆ ದರ್ಶನ್ 56ನೇ ಸಿನಿಮಾದ ವಿಶೇಷ ಅಪ್‌ಡೇಟ್ ಒಂದು ಪೋಸ್ಟರ್ ಸಮೇತ ಹೊರಬಿದ್ದಿದೆ. ಹಲವು ಅಭಿಮಾನಿಗಳು ನಿರೀಕ್ಷಿಸಿದಂತೆ ದರ್ಶನ್ ಹುಟ್ಟುಹಬ್ಬದ ದಿನದಂದು ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ ಎನ್ನುವುದು ಈ ಅಪ್‌ಡೇಟ್ ಆಗಿದೆ.

ದರ್ಶನ್ ಹುಟ್ಟುಹಬ್ಬಕ್ಕೆ ಟೈಟಲ್
ಚಿತ್ರಕ್ಕೆ ಬಂಡವಾಳ ಹೂಡಲಿರುವ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಅಪ್‌ಡೇಟ್ ಅನ್ನು ನೀಡಿದ್ದು, ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಅಂದರೆ ಇದೇ ಫೆಬ್ರವರಿ 16ಕ್ಕೆ ಚಿತ್ರದ ಟೈಟಲ್ ಏನೆಂಬುದು ರಿವೀಲ್ ಆಗಲಿದೆ ಎಂಬುದನ್ನು ಪ್ರಕಟಿಸಿದೆ.

ಪೋಸ್ಟರ್ ಅಂದ್ರೆ ಇದು!
ಇನ್ನು ದರ್ಶನ್ ನಟನೆಯ ಹಿಂದಿನ ಚಿತ್ರಗಳ ಪೋಸ್ಟರ್ ಕುರಿತಾಗಿ ಅವರ ಅಭಿಮಾನಿಗಳಲ್ಲಿಯೇ ಬೇಸರ ಇದ್ದದ್ದು ಬಹುತೇಕರಿಗೆ ತಿಳಿದಿರುವ ವಿಷಯವೇ. ಪೋಸ್ಟರ್ ಕ್ವಾಲಿಟಿ ಚೆನ್ನಾಗಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದೂ ಇದೆ. ಇನ್ನು ಸ್ಟಾರ್ ನಟನೋರ್ವನ ಚಿತ್ರದ ಪೋಸ್ಟರ್ ಎಂದರೆ ಹೇಗಿರಬೇಕು ಗೊತ್ತಾ ಎಂದು ಅಂದು ಕಿಡಿಕಾರಿದ್ದ ಅಭಿಮಾನಿಗಳು ಈಗ ಈ ಅಪ್‌ಡೇಟ್ ಪೋಸ್ಟರ್ ನೋಡಿ ಪೋಸ್ಟರ್ ಎಂದರೆ ಹೀಗಿರಬೇಕು ಎಂದಿದ್ದಾರೆ. ಕೇವಲ ಅಪ್‌ಡೇಟ್ ನೀಡುವುದಕ್ಕಾಗಿ ಬಿಡುಗಡೆ ಮಾಡಲಿರುವ ಪೋಸ್ಟರ್ ಸಖತ್ ಕ್ಯಾಚಿಯಾಗಿದ್ದು, ಚಿತ್ರದ ಉಳಿದ ಪೋಸ್ಟರ್‌ಗಳು ನೆಕ್ಸ್ಟ್ ಲೆವೆಲ್‌ನಲ್ಲಿ ಇರುವುದಂತೂ ಖಚಿತ. ಈ ಪೋಸ್ಟರ್‌ನಲ್ಲಿ D56 ಎಂದು ದೊಡ್ಡದಾಗಿ ಬರೆಯಲಾಗಿದ್ದು, ಪೋಸ್ಟರ್‌ನಲ್ಲಿ ಲಾಂಗ್ ಸೇರಿದಂತೆ ಹಲವು ಅಸ್ತ್ರಗಳು ಹಾಗೂ ಬೆಂಕಿ ಉರಿಯುತ್ತಿರುವುದು ಚಿತ್ರ ಹೋರಾಟವೊಂದರ ಕಥೆ ಹೊಂದಿರಲಿದೆ ಎಂಬುದನ್ನು ತಿಳಿಸುತ್ತಿದೆ.

ಚಿತ್ರದ ಟೈಟಲ್ ಏನು?
ಸದ್ಯ ಈ ಚಿತ್ರದ ಟೈಟಲ್ ಏನಿರಬಹುದು ಎಂಬ ಕುತೂಹಲ ಹಾಗೂ ಊಹೆ ಹೆಚ್ಚಾಗಿದ್ದು, ಕಾಟೇರ ಎಂದ ಈ ಚಿತ್ರಕ್ಕೆ ಹೆಸರಿಡಲಾಗಿದೆ ಎಂದು ಕೆಲ ದಿನಗಳಿಂದ ಹಿಂದೆ ಸುದ್ದಿ ಹಬ್ಬಿತ್ತು ಹಾಗೂ ಇತ್ತೀಚೆಗಿನ ಕೆಲ ದಿನಗಳ ಹಿಂದೆ ಈ ಚಿತ್ರದ ಹೆಸರು ಚೌಡಯ್ಯ ಅಂತೆ ಎಂದೂ ಸಹ ಸುದ್ದಿ ಹರಿದಾಡಿತ್ತು. ಈ ಎರಡರಲ್ಲಿ ಯಾವುದು ಚಿತ್ರದ ಟೈಟಲ್ ಅಥವಾ ಈ ಎರಡನ್ನು ಹೊರತುಪಡಿಸಿ ಬೇರೆ ಶೀರ್ಷಿಕೆ ಏನಾದರೂ ಇರಬಹುದಾ ಎಂಬ ಪ್ರಶ್ನೆಯೂ ಸಹ ಮೂಡಿದೆ.


Click it and Unblock the Notifications











