For Quick Alerts
  ALLOW NOTIFICATIONS  
  For Daily Alerts

  ವೈದ್ಯರು ನೀಡಿದ ಸಲಹೆಯಿಂದ ದರ್ಶನ್ ಚಿತ್ರಗಳಲ್ಲಿ ಭಾರಿ ಬದಲಾವಣೆ.!

  |
  ದರ್ಶನ್ ಸಿನಿಮಾ ಶೂಟಿಂಗ್ ಯಾವಾಗ ಶುರು..? | Filmibeat Kannada

  ದರ್ಶನ್ ಕಾರು ಅಪಘಾತದ ಬಳಿಕ ಡಿ-ಬಾಸ್ ಗೆ ವಿಶ್ರಾಂತಿ ಅಗತ್ಯವಿದೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿರುವ ವೈದ್ಯರು ಈಗ ದರ್ಶನ್ ಗೆ ಸಲಹೆ ನೀಡಿದ್ದು, ಸುಮಾರು ಏಂಟು ವಾರಗಳು ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದ್ದಾರಂತೆ.

  ಇದು ಸಹಜವಾಗಿ ದರ್ಶನ್ ಸಿನಿಮಾಗಳ ನಿರ್ಮಾಪಕರಿಗೆ ಹಾಗೂ ಅಭಿಮಾನಿಗಳಿಗೆ ಕೊಂಚ ಮಟ್ಟದ ಆಘಾತ ತರಿಸಿದೆ. ಯಾಕಂದ್ರೆ, ಎರಡು ತಿಂಗಳು ವಿಶ್ರಾಂತಿ ಅಂದ್ರೆ, ದರ್ಶನ್ ಅವರ ಶೂಟಿಂಗ್ ಗೆ ಬ್ರೇಕ್ ಬೀಳಲಿದೆ. ಬಿಡುಗಡೆಯೂ ವಿಳಂಬವಾಗಲಿದೆ ಎಂಬ ಲೆಕ್ಕಾಚಾರ ಈಗ ಚಿತ್ರಜಗತ್ತಿನಲ್ಲಿ ಕಾಡುತ್ತಿದೆ.

  ದರ್ಶನ್ ಕಾರು ಅಪಘಾತ: 'ಡಿ-ಬಾಸ್'ಗೆ ಆಘಾತ ನೀಡಿದ ವೈದ್ಯರ ಸಲಹೆ ದರ್ಶನ್ ಕಾರು ಅಪಘಾತ: 'ಡಿ-ಬಾಸ್'ಗೆ ಆಘಾತ ನೀಡಿದ ವೈದ್ಯರ ಸಲಹೆ

  ಈ ವರ್ಷ ಚಾಲೆಂಜಿಂಗ್ ಸ್ಟಾರ್ ಅಭಿನಯದ ಯಾವ ಸಿನಿಮಾನೂ ಬಿಡುಗಡೆಯಾಗಿಲ್ಲ. ಹಾಗಾಗಿ, ಬಾಸ್ ಸಿನಿಮಾಗೆ ಭಕ್ತರು ಕಾಯ್ತಿದ್ದಾರೆ. ಹೀಗಿರುವಾಗ, ವೈದ್ಯರ ಸಲಹೆ ಮತ್ತಷ್ಟು ನಿರಾಸೆ ಮೂಡಿಸಿದೆ. ಹಾಗಿದ್ರೆ, ಸಿನಿಮಾ ಬಿಡುಗಡೆಯಾಗುವುದು ಲೇಟ್ ಆಗುತ್ತಾ.? ಅಂದುಕೊಂಡಿದ್ದ ದಿನಕ್ಕೆ ಸಿನಿಮಾಗಳು ಬರುತ್ತಾ ಎಂಬ ಕುತೂಹಕ ಕಾಡುತ್ತಿದೆ.? ಮುಂದೆ ಓದಿ.....

  'ಯಜಮಾನ' ಸಾಂಗ್ ಮಾತ್ರ ಬಾಕಿ

  'ಯಜಮಾನ' ಸಾಂಗ್ ಮಾತ್ರ ಬಾಕಿ

  ಶೈಲಜಾ ನಾಗ್ ನಿರ್ಮಾಣ ಮಾಡುತ್ತಿರುವ 'ಯಜಮಾನ' ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವತಃ ನಿರ್ಮಾಪಕರೇ ಹೇಳುವ ಪ್ರಕಾರ ಕೇವಲ ಎರಡು ಸಾಂಗ್ ಮಾತ್ರ ಬಾಕಿ ಇದೆ. ಈ ಹಾಡು ಮುಗಿಸಲು ದರ್ಶನ್ ಅವರು ಬರಬೇಕಿದೆ. ಅಂದುಕೊಂಡಂತೆ ಶೂಟಿಂಗ್ ನಡೆದಿದ್ದರೇ ಬಹುಶಃ ಇದು ಕೂಡ ಮುಗಿಯಬೇಕಿತ್ತು. ಈಗ ಸಾಂಗ್ ಶೂಟಿಂಗ್ ಮತ್ತಷ್ಟು ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಈ ವರ್ಷ 'ಯಜಮಾನ' ಚಿತ್ರವೇ ದರ್ಶನ್ ಅಭಿಮಾನಿಗಳಿಗೆ ಟ್ರೀಟ್ ಆಗಲಿದೆ.

  'ಯಜಮಾನ' ದರ್ಶನ್ ಸ್ಟೈಲ್ ನಲ್ಲಿ ನಿಂತ ಕುಚಿಕು'ಯಜಮಾನ' ದರ್ಶನ್ ಸ್ಟೈಲ್ ನಲ್ಲಿ ನಿಂತ ಕುಚಿಕು

  'ಒಡೆಯ' ಈಗಷ್ಟೇ ಆರಂಭ

  'ಒಡೆಯ' ಈಗಷ್ಟೇ ಆರಂಭ

  ಎಂ.ಡಿ ಶ್ರೀಧರ್ ನಿರ್ದೇಶನ ಹಾಗೂ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ 'ಒಡೆಯ'. ಈಗಷ್ಟೇ ಸಿನಿಮಾ ಚಿತ್ರೀಕರಣ ಅರಂಭ ಮಾಡಿದೆ. ಈ ಚಿತ್ರದಲ್ಲಿ ದೇವರಾಜ್ ಮತ್ತು ದರ್ಶನ್ ಒಟ್ಟಿಗೆ ಅಭಿನಯಿಸ್ತಿದ್ದಾರೆ. ಇದು ಪಕ್ಕಾ ಆಕ್ಷನ್ ಕಮ್ ಫ್ಯಾಮಿಲಿ ಕಥೆ ಹೊಂದಿದೆ. ಈ ಚಿತ್ರದಲ್ಲಿ ದರ್ಶನ್ ಆಕ್ಷನ್ ಮಾಡಬೇಕಾಗಿದೆ. ಈಗ ದರ್ಶನ್ ಕಂಬ್ಯಾಕ್ ಆಗೋವರೆಗೂ ಈ ಸಿನಿಮಾ ಬೇರೆ ಕೆಲಸದಲ್ಲಿ ತೊಡಗಬೇಕಿದೆ.

  'ಒಡೆಯ'ನಿಗೆ ಸಾಥ್ ನೀಡಲಿದ್ದಾರೆ ಕನ್ನಡದ ಸ್ಟಾರ್ ನಟರು'ಒಡೆಯ'ನಿಗೆ ಸಾಥ್ ನೀಡಲಿದ್ದಾರೆ ಕನ್ನಡದ ಸ್ಟಾರ್ ನಟರು

  'ಕುರುಕ್ಷೇತ್ರ' ಕಂಪ್ಲೀಟ್

  'ಕುರುಕ್ಷೇತ್ರ' ಕಂಪ್ಲೀಟ್

  ದರ್ಶನ್ ವೃತ್ತಿ ಜೀವನದ ಮಹತ್ವದ ಚಿತ್ರ 'ಕುರುಕ್ಷೇತ್ರ'. ಈ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿದೆ. ಇದಕ್ಕೆ ಯಾವುದೇ ತೊಂದರೆ ಇಲ್ಲ. ಸದ್ಯ, ಪೊಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿರುವ ಈ ಚಿತ್ರದ ಗ್ರಾಫಿಕ್ಸ್ ಕೆಲಸದಿಂದ ತಡವಾಗ್ತಿದೆ ಎಂದು ಚಿತ್ರದ ನಿರ್ಮಾಪಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಈ ಸಿನಿಮಾಗೆ ಯಾವುದೇ ಪ್ರಾಬ್ಲಂ ಇಲ್ಲ.

  ''ನನ್ನ ಕನಸು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ'' ಎಂದ ಮುನಿರತ್ನ!''ನನ್ನ ಕನಸು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ'' ಎಂದ ಮುನಿರತ್ನ!

  ರಾಕ್ ಲೈನ್ ಸಿನಿಮಾ ವಿಳಂಬ

  ರಾಕ್ ಲೈನ್ ಸಿನಿಮಾ ವಿಳಂಬ

  ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಅಭಿನಯಿಸಿಲಿರುವ 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸ ಅರಂಭವಾಗಿದೆ. ಆದ್ರೆ, ಅಧಿಕೃತವಾಗಿ ಸಿನಿಮಾ ಸೆಟ್ಟೇರಿಲ್ಲ. ಬಹುಶಃ ಈ ಚಿತ್ರದ ಶೂಟಿಂಗ್ ಮುಂದಿನ ವರ್ಷದಲ್ಲಿ ಶುರುವಾಗಬಹುದು. ಹಾಗಾಗಿ, ಈ ಚಿತ್ರಕ್ಕೇನೂ ಅಂತಹ ಸಮಸ್ಯೆಯಾಗುವುದಿಲ್ಲ. ಬಟ್, ಮದಕರಿ ನಾಯಕ ಕಥೆಯಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಿರುತ್ತೆ. ದರ್ಶನ್ ಅದನ್ನ ಹೇಗೆ ನಿಭಾಯಿಸ್ತಾರೆ ಎನ್ನುವುದು ಈ ಚಿತ್ರಕ್ಕೆ ಚಾಲೆಂಜ್ ಆಗಬಹುದು.

  ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್

  'ಭಗತ್ ಸಿಂಗ್' ಪಾತ್ರ ಮುಕ್ತಾಯ

  'ಭಗತ್ ಸಿಂಗ್' ಪಾತ್ರ ಮುಕ್ತಾಯ

  ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದಾರೆ. ಹಾಗಾಗಿ, ಈ ಪಾತ್ರವನ್ನ ಕೂಡ ಮುಗಿಸಿಕೊಟ್ಟಿದ್ದಾರೆ.

  ಮತ್ತೊಂದು ಮಹತ್ವದ ಪಾತ್ರದಲ್ಲಿ ಡಿ ಬಾಸ್ : ಭಗತ್ ಸಿಂಗ್ ಆದ ದರ್ಶನ್!ಮತ್ತೊಂದು ಮಹತ್ವದ ಪಾತ್ರದಲ್ಲಿ ಡಿ ಬಾಸ್ : ಭಗತ್ ಸಿಂಗ್ ಆದ ದರ್ಶನ್!

  ತರುಣ್ ಸಿನಿಮಾನೂ ಲೇಟ್

  ತರುಣ್ ಸಿನಿಮಾನೂ ಲೇಟ್

  ಹೆಬ್ಬುಲಿ ನಿರ್ಮಾಪಕ ಉಮಾಪತಿ ಮತ್ತು ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ಆಗಿದೆ. ನವೆಂಬರ್ ನಲ್ಲಿ ಶೂಟಿಂಗ್ ಮಾಡುವ ಯೋಜನೆ ಹಾಕಿಕೊಂಡಿತ್ತು. ಚಿತ್ರತಂಡ ಬಹುಶಃ ದರ್ಶನ್ ಕಾರು ಅಪಘಾತದ ಪರಿಣಾಮ ಶೆಡ್ಯೂಲ್ ಬದಲಾಗಬಹುದು.

  ಸೈಲೆಂಟ್ ಆಗಿ ಸರ್ಪ್ರೈಸ್ ಕೊಟ್ಟೆ ಬಿಟ್ರು ದರ್ಶನ್-ಉಮಾಪತಿಸೈಲೆಂಟ್ ಆಗಿ ಸರ್ಪ್ರೈಸ್ ಕೊಟ್ಟೆ ಬಿಟ್ರು ದರ್ಶನ್-ಉಮಾಪತಿ

  English summary
  Challenging star Darshan should take rest for 8 weeks says columbia asia hospital doctors. so, maybe darshan acted movies shoot will be delayed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X