Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದೊಡ್ಮನೆ ಹುಡುಗ'ನ ಬೆನ್ನಿಗೆ ನಿಂತಿರುವ 'ಯಜಮಾನ' ದರ್ಶನ್
ಡಾ ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಬರ್ತಿದೆ. ಈಗಾಗಲೇ ಅಣ್ಣಾವ್ರ ಮೊಮ್ಮಕ್ಕಳಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಮಿಂಚುತ್ತಿದ್ದಾರೆ. ಮತ್ತೊಬ್ಬ ಮೊಮ್ಮಗ ಧೀರೆನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಪ್ರವೇಶ ಮಾಡಲು ಸಿದ್ದವಾಗಿ ನಿಂತಿದ್ದಾರೆ.
ಇದರ ಮಧ್ಯೆ ಅಣ್ಣಾವ್ರ ಕುಟುಂಬದಿಂದ ಮತ್ತೊಬ್ಬ ನಟ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿರುವುದು ದೊಡ್ಡ ಸುದ್ದಿಯಾಗಿತ್ತು. ಹೌದು, ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಎಸ್ ಎ ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ ಹೀರೋ ಆಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಅಣ್ಣಾವ್ರ ಮನೆಯಿಂದ ಚಿತ್ರರಂಗಕ್ಕೆ ಆರಡಿ ಕಟೌಟ್ ಎಂಟ್ರಿ
ಕಮರ್ಷಿಯಲ್ ಹೀರೋಗೆ ಹೇಳಿ ಮಾಡಿಸಿದ ಫಿಟ್ ನೆಸ್, ಮಾಸ್ ಹೀರೋಗೆ ಬೇಕಿರುವ ಹೈಟು, ನೋಡೋದಕ್ಕೂ ಸ್ಮಾರ್ಟ್, ಈ ಎಲ್ಲಾ ಕ್ವಾಲಿಟಿ ಇರುವ ಸೂರಜ್ ಬೆನ್ನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಂತಿರುವುದು ವಿಶೇಷ. ಹಾಗಿದ್ರೆ, ದರ್ಶನ್ ಯಾವ ರೀತಿ ಸೂರಜ್ ಗೆ ಬೆಂಬಲವಾಗಿದ್ದಾರೆ ಎಂದು ಮುಂದೆ ಓದಿ....

ಸೂರಜ್ ಬೆನ್ನಿಗೆ ನಿಂತ ಡಿ ಬಾಸ್
ಪಾರ್ವತಮ್ಮ ರಾಜ್ ಕುಮಾರ್ ಸಹೋದರನ ಪುತ್ರ ಸೂರಜ್ ಗೆ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ 'ಗಾಡ್ ಫಾದರ್'. ಹೀಗಂತ ಬೇರೆ ಯಾರು ಹೇಳುತ್ತಿಲ್ಲ. ಸ್ವತಃ ಸೂರಜ್ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಡಾ.ರಾಜ್ ಮೊಮ್ಮಗ ಧೀರನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ದರ್ಶನ್ ಅವರನ್ನ ನೋಡಿ ಬೆಳೆದೆ
''ನನಗೆ ಬುದ್ದಿ ಬಂದಗಾನಿಂದಲೂ ದರ್ಶನ್ ಅವರನ್ನ ನೋಡುಕೊಂಡೇ ಬೆಳೆದೆ. ಮೊದಲಿನಿಂದಲೂ ನನಗೆ ಅವರು ಪರಿಚಯ. ನಾನು ಮೈಸೂರು, ಅವರು ಮೈಸೂರು''

ನನ್ನ ಸಿನಿವೃತ್ತಿಯಲ್ಲಿ ದರ್ಶನ್ ಸಲಹೆ ಮುಖ್ಯ
''ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ದರ್ಶನ್ ಅವರ ಸಲಹೆ ಇದ್ದೇ ಇರುತ್ತೆ. ಅವರ ಜೊತೆ ಎರಡು ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದು ನನ್ನ ಪುಣ್ಯ. ಅವರನ್ನ ನೋಡಿ ಕಲಿತಿದ್ದು ಹೆಚ್ಚಿದೆ''
ಇವರು ಸ್ಯಾಂಡಲ್ ವುಡ್ ನ ರಣವೀರ್ ಸಿಂಗ್

'ಡಾ ರಾಜ್' ನನಗೆ ರೋಲ್ ಮಾಡೆಲ್
ಡಾ ರಾಜ್ ಕುಮಾರ್ ಅಂದ್ರೆ ಪಂಚಪ್ರಾಣ. ಅವರ ಪ್ರತಿಭೆ ಮತ್ತು ಅವರ ನಟನೆ ಮುಂದೆ ಯಾರು ಇಲ್ಲ. ಅವರನ್ನ ನೋಡಿ ಬೆಳದಿದ್ದೇನೆ. ಅವರೇ ನನಗೆ ರೋಲ್ ಮಾಡೆಲ್. ಶಿವಣ್ಣ ನನ್ನ ಫೇವರೆಟ್ ನಟ. ಯಾವಗಲೂ ಒಂದೇ ರೀತಿ ಇರ್ತಾರೆ. ರಾಘಣ್ಣನೂ ಅಷ್ಟೇ. ಅವರ ಮನೆಗೆ ಹೋದಾಗಲೂ ತುಂಬಾ ಫ್ರೆಂಡ್ಲಿ ಆಗಿ ಇರ್ತಾರೆ. ನನಗೆ ಆರ್ಶೀವಾದ ಕೂಡ ಮಾಡಿದ್ದಾರೆ.

ಪೂರ್ವ ತಯಾರಿ ಮಾಡ್ಕೊಂಡೆ ಬಂದಿದ್ದಾರೆ
ಸೂರಜ್ ಕುಮಾರ್ ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಚಿತ್ರರಂಗಕ್ಕೆ ಬರುವ ತಯಾರಿಯನ್ನ ಮಾಡಿಕೊಂಡಿದ್ದಾರೆ. ನಿನಾಸಂ ನಲ್ಲಿ ಅಭಿನಯದ ತರಬೇತಿ ಪಡೆದುಕೊಂಡಿದ್ದು ಚೆನೈ ನಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ದರ್ಶನ್ ಅಭಿನಯದ 'ಐರಾವತ' ಹಾಗೂ 'ತಾರಕ್' ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ.
ರಾಜ್ ಮೊಮ್ಮಗ ಧೀರೇನ್ ಬಗ್ಗೆ ನಿಮಗೆ ತಿಳಿಯದ ಕುತೂಹಲಕಾರಿ ವಿಷಯ