ಸುದೀಪ್ ಎರಡನೇ ಟ್ವೀಟ್: ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಿಚ್ಚ

By Bharath Kumar

Recommended Video

ದರ್ಶನ್ -ಸುದೀಪ್ ಟ್ವೀಟ್ ರಾಮಾಯಣ !| Filmibeat Kannada

''ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರೂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ''.....ಹೀಗಂತಾ ಟ್ವೀಟ್ ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಟ್ವೀಟ್ ನಂತರ ಸಾಕಷ್ಟು ಬೆಳವಣಿಗೆಗಳು ಆಗಿವೆ.

ಬಹಿರಂಗವಾಗಿ ಸ್ನೇಹವನ್ನ ಮುರಿದುಕೊಂಡಿದ್ದ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದ್ದರು. ಆದ್ರೂ, ಅಭಿಮಾನಿಗಳಲ್ಲಿ ಒಂದು ನಿರೀಕ್ಷೆ ಇತ್ತು. ಆದಷ್ಟೂ ಬೇಗ ಇವರಿಬ್ಬರು ಒಂದಾಗ್ತಾರೆ, ಮೊದಲಿನಂತೆ ಇಬ್ಬರನ್ನ ಒಟ್ಟಿಗೆ ನೋಡಬಹುದು ಎಂದು ಕಾಯುತ್ತಿದ್ದರು.

ವರ್ಷಗಳೇ ಕಳೆದರೂ ಅದು ಇನ್ನು ಸಾಧ್ಯವಾಗಿರಲಿಲ್ಲ. ಆದ್ರೀಗ, ಅಚ್ಚರಿ ಬೆಳವಣಿಗೆ ನಡೆದಿದೆ. ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, 'ದರ್ಶನ್ ಇಂದು-ಎಂದೆಂದೂ ನನ್ನ ಸ್ನೇಹಿತನೇ' ಎಂದು ಅಚ್ಚರಿ ಉಂಟು ಮಾಡಿದ್ದಾರೆ. ಏನಿದು ಸುದೀಪ್ ಹೊಸ ಟ್ವೀಟ್...ಮುಂದೆ ಓದಿ....

ಸುದೀಪ್ ಮುಂದೆ ಮತ್ತೆ ಮತ್ತೆ ದರ್ಶನ್ ಫ್ಯಾನ್ಸ್....

ಸುದೀಪ್ ಮುಂದೆ ಮತ್ತೆ ಮತ್ತೆ ದರ್ಶನ್ ಫ್ಯಾನ್ಸ್....

ಕಿಚ್ಚ ಸುದೀಪ್ ಅವರ ಮುಂದೆ ದರ್ಶನ್ ಅಭಿಮಾನಿಗಳು ಪದೇ ಪದೇ ಒಂದೇ ಬೇಡಿಕೆ ಇಡುತ್ತಿದ್ದಾರೆ. ಡಿ ಬಾಸ್ ಜೊತೆ ಯಾವಾಗ ಸಿನಿಮಾ ಮಾಡ್ತೀರಾ. ದರ್ಶನ್ ನೀವು ಮತ್ತೆ ಯಾವಾಗ ಒಟ್ಟಿಗೆ ಕಾಣಿಸಿಕೊಳ್ತೀರಾ...? ಎಂಬ ಪ್ರಶ್ನೆಗಳೇ ಹೆಚ್ಚು. ಇಂದು ಕೂಡ ಇದೇ ಪ್ರಶ್ನೆಗೆ ಕಿಚ್ಚನ ಎದುರು ಬಂದಿದೆ. ಇದಕ್ಕೆ ಉತ್ತರಿಸಿರುವ ಕಿಚ್ಚ ಅಚ್ಚರಿ ಮೂಡಿಸಿದ್ದಾರೆ.

ಯಾವಾಗಲೂ ಸ್ನೇಹಿತನೇ

'ನಮ್ಮ ಬಾಸ್ ಜೊತೆ ಸಿನಿಮಾ ಮಾಡಿ' ಅಂತ ದರ್ಶನ್ ಅಭಿಮಾನಿ ಸುದೀಪ್ ಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಸುದೀಪ್ ಉತ್ತರ ಕೊಟ್ಟಿದ್ದು, ''ಸ್ಕ್ರಿಪ್ಟ್ ಸಿಕ್ಕರೇ ಖಂಡಿತಾ ಮಾಡುತ್ತೇನೆ'' ಎಂದಿದ್ದರು. ಅದರ ಬೆನ್ನಲ್ಲೆ ಮತ್ತೊಬ್ಬ ಅಭಿಮಾನಿ ಮತ್ತೆ ಅದೇ ಪ್ರಶ್ನೆಯ ಜೊತೆ ನೀವಿಬ್ಬರು ಒಟ್ಟಾಗಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ''ಅವರು, ಈಗಲೂ ಎಂದೆಂದಿಗೂ ನನ್ನ ಸ್ನೇಹಿತನೇ'' ಎನ್ನುವ ಮೂಲಕ ಶಾಕ್ ನೀಡಿದ್ದಾರೆ.

ಈ ಮಾತಿನ ಅರ್ಥವೇನು.?

ಈ ಮಾತಿನ ಅರ್ಥವೇನು.?

ಸುದೀಪ್ ಮತ್ತು ದರ್ಶನ್ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುತ್ತಿದ್ದ ಮಂದಿಗೆ ಇದು ಉತ್ತರವಾಗಿದೆ. ಯಾವುದೋ ಕೆಟ್ಟ ಘಳಿಗೆ ಬೇರೆಯಾದ ಇಬ್ಬರು, ಮತ್ತೆ ಒಂದಾಗುವ ಸನಿಹದಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಖಂಡಿತವಾಗಿಯೂ ಆದಷ್ಟೂ ಬೇಗ ಇಬ್ಬರು ಒಟ್ಟಿಗೆ ಬಂದು ನಿಲ್ತಾರೆ ಎನ್ನುವುದು ಊಹಿಸಬಹುದು.

ಮಾರ್ಚ್ 5, 2017 ದರ್ಶನ್ ಟ್ವೀಟ್

ಮಾರ್ಚ್ 5, 2017 ದರ್ಶನ್ ಟ್ವೀಟ್

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ದಶನ್ ಅವರು ಟ್ವೀಟ್ ಮಾಡಿದ್ದರು. ''ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರೂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ''. ಅಲ್ಲಿಂದ ಇದುವರೆಗೂ ಇಬ್ಬರು ಎಲ್ಲಿಯೂ ಒಬ್ಬರ ಹೆಸರು ಮತ್ತೊಬ್ಬರು ಹೇಳಿಲ್ಲ.

More from Filmibeat

English summary
Kannada actor, kiccha sudeep has give reply to darshan fan. darshan fan was asked to sudeep ''when you and darshan sharing screen.?''
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X