For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದಂತೆ ಸಾಗಿದೆ ದರ್ಶನ್ 'ಅಂಬರೀಶ' ಶೂಟಿಂಗ್

  By Rajendra
  |

  ಅಂಬರೀಶ ಎಂದ ತಕ್ಷಣ ಜ್ಞಾಪಕಕ್ಕೆ ಬರುವುದು ಕನ್ನಡ ಚಿತ್ರರಂಗದ ಹೆಸರಾಂತ ರೆಬಲ್‌ಸ್ಟಾರ್, ಮಂಡ್ಯದ ಗಂಡು ಎಂದೇ ಖ್ಯಾತಿಯಾಗಿರುವ ಈಗಿನ ವಸತಿ ಸಚಿವರಾದ ಅಂಬರೀಶ್. ಅಂಬರೀಶ ಹೆಸರಿನ ಚಿತ್ರವೊಂದು ಈಗ ತಯಾರಾಗುತ್ತಿರುವುದು ಗೊತ್ತೇ ಇದೆ.

  ಸುಖಧರೆ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ 'ಅಂಬರೀಶ' ಚಿತ್ರಕ್ಕೆ ಇದೇ ಅಕ್ಟೋಬರ್ 7ರಿಂದ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗಿದೆ.

  ಒಂದು ತಿಂಗಳ ಕಾಲ ನಡೆಯುವ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್, ಪ್ರಿಯಾಮಣಿ, ಬುಲೆಟ್‌ಪ್ರಕಾಶ್, ಸಾಧು ಕೋಕಿಲ, ರಾಜೇಂದ್ರ ಕಾರಂತ್‌ರ ಮೇಲೆ ಹಲವಾರು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗುವುದು ಎಂದು ನಿರ್ಮಾಪಕ ಕಂ ನಿರ್ದೇಶಕ ಸುಖಧರೆ ತಿಳಿಸಿದ್ದಾರೆ.

  ಚಿತ್ರಕ್ಕೆ ಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಂಗೀತ ಹರಿಕೃಷ್ಣ, ಕಲೆ ಈಶ್ವರಿ ಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ, ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್‌ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.

  ತಾರಾಗಣದಲ್ಲಿ ದರ್ಶನ್, ಪ್ರಿಯಾಮಣಿ, ಡಾ.ಅಂಬರೀಶ್, ಸುಮಲತಾ, ಉಮಾಶ್ರೀ, ನಿಶಾ ಯೋಗೀಶ್ವರ್, ಸಾಧು ಕೋಕಿಲ, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್, ರವಿಶಂಕರ್, ರಾಜೇಂದ್ರ ಕಾರಂತ್, ಸಿದ್ಧಾರ್ಥ (ಬಾಂಬೆ), ಬಿರಾದಾರ್, ರೋಹಿತ್, ಭರತ್, ಸತೀಶ್, ಬೆಸ್ಟ್‌ಕ್ಲಬ್ ಆರ್. ಅರುಣಾಚಲಂ, ಜಯರಾಂ, ಚೇತನ, ಲೋಕಿ, ಉದಯ್, ಚೇತನ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Challenging Star Darshan's forthcoming film Ambarisha shooting progerssing briskly in Bangalore. The film is directed by Mahesh Sukhdhare. The movie introduces Nisha, the daughter of politician CP Yogeshwar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X