'ಕುರುಕ್ಷೇತ್ರ' ಕಟ್ ಔಟ್ ನಲ್ಲಿ ಸೀನಿಯರ್ ಮತ್ತು ಜೂನಿಯರ್

'ಕುರುಕ್ಷೇತ್ರ' ಮಹಾ ಯುದ್ಧಕ್ಕೆ ಇನ್ನು ಆರು ದಿನಗಳು ಬಾಕಿ ಇದೆ. ವರ್ಷಗಳಿಂದ ಕಾಯುತ್ತಿದ್ದ ಈ ಸಿನಿಮಾ ಇದೇ ಶುಕ್ರವಾರ ಅಂದರೆ, ಆಗಸ್ಟ್ 9 ರಂದು ಬಿಡುಗಡೆ ಆಗುತ್ತಿದೆ.

'ಕುರುಕ್ಷೇತ್ರ' ಸಂಭ್ರಮ ಈಗಾಗಲೇ ಶುರು ಆಗಿದೆ. ಚಿತ್ರಮಂದಿರದ ಮುಂದೆ ಕಟ್ ಔಟ್ ಗಳು ಕಂಗೊಳಿಸುತ್ತಿವೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇಂದೇ ಸಿನಿಮಾದ ಕಟ್ ಔಟ್ ಹಾಕಲಾಗಿದೆ.

ಕಟ್ ಔಟ್ ನಲ್ಲಿ ದರ್ಶನ್ ಮಾತ್ರವಲ್ಲದೆ ಅಂಬರೀಶ್ ಅವರ ಚಿತ್ರ ಸಹ ಮೂಡಿದೆ. ಅಗಲಿದ ನಾಯಕನಿಗೆ ಈ ರೀತಿ 'ಕುರುಕ್ಷೇತ್ರ' ಚಿತ್ರತಂಡ ನಮನ ಸಲ್ಲಿಸಿದೆ. ಇದೊಂದು ಮಲ್ಟಿಸ್ಟಾರ್ ಸಿನಿಮಾ ಆಗಿದ್ದು, ಉಳಿದ ನಾಯಕರ ಪೋಸ್ಟರ್ ಗಳೂ ಚಿತ್ರಮಂದಿರದಲ್ಲಿ ಇರಲಿದೆ.

darshan and ambareeshs kurukshetra cut out placed in prasanna theatre

ಕರ್ನಾಟಕದಲ್ಲಿ ಸಿನಿಮಾದ ಅಬ್ಬರ ಬಹಳ ಜೋರಾಗಿದೆ. ಬೆಂಗಳೂರಿನಲ್ಲಿ ನರ್ತಕಿ ಮುಖ್ಯ ಚಿತ್ರಮಂದಿರವಾಗಿದೆ. ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ ಸಿನಿಮಾವನ್ನು ರಿಲೀಸ್ ಮಾಡಲು ವಿತರಕರು ನಿರ್ಧಾರ ಮಾಡಿದ್ದಾರೆ.

ದರ್ಶನ್, ಅಂಬರೀಶ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಒಂದು ಪೌರಾಣಿಕ ಸಿನಿಮಾ ಕನ್ನಡದಲ್ಲಿ ಬರುತ್ತಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ.

More from Filmibeat

English summary
Challenging star Darshan's and Ambareesh's 'Kurukshetra' kannada movie cut out placed in prasanna theatre Bengaluru. The movie will be releasing on august 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X