»   » ದರ್ಶನ್ - ಪ್ರೇಮ್ ಕಾಂಬಿನೇಶನ್ ನಲ್ಲಿ ಬರಲಿದೆ 'ಆಂಜನೇಯ' ಸಿನಿಮಾ

ದರ್ಶನ್ - ಪ್ರೇಮ್ ಕಾಂಬಿನೇಶನ್ ನಲ್ಲಿ ಬರಲಿದೆ 'ಆಂಜನೇಯ' ಸಿನಿಮಾ

Posted By:
Subscribe to Filmibeat Kannada

ನಟ ದರ್ಶನ್ ಮತ್ತು ಪ್ರೇಮ್ ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ಸುದ್ದಿ ಅನೇಕ ದಿನಗಳಿಂದ ಕೇಳಿ ಬರುತಿತ್ತು. ಇದೀಗ ಆ ಸಿನಿಮಾಗೆ 'ಆಂಜನೇಯ' ಎನ್ನುವ ಟೈಟಲ್ ಫಿಕ್ಸ್ ಆಗಿದೆಯಂತೆ.

ಇದು ಪಕ್ಕಾ ಮಾಸ್ ಸಿನಿಮಾ ಇದಾಗಿದ್ದು, ಪವರ್ ಫುಲ್ ಟೈಟಲ್ ಬೇಕು ಅಂತ 'ಆಂಜನೇಯ' ಎಂದು ಹೆಸರಿಟ್ಟಿದೆಯಂತೆ ಚಿತ್ರತಂಡ.

Darshan and Director Prem movie titled as 'Anjaneya'

ಈ ಹಿಂದೆ 'ಕರಿಯ' ಸಿನಿಮಾವನ್ನು ಮಾಡಿದ್ದ ದರ್ಶನ್ ಮತ್ತು ಪ್ರೇಮ್ ಜೋಡಿ ಈಗ 'ಆಂಜನೇಯ' ಚಿತ್ರದ ಮೂಲಕ 14 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದೆ.

Darshan and Director Prem movie titled as 'Anjaneya'

'ಹೆಬ್ಬುಲಿ' ಸಿನಿಮಾದ ನಿರ್ಮಾಪಕ ಉಮಾಪತಿ ಈ ಸಿನಿಮಾವನ್ನು ನಿರ್ಮಾಣ ಮಾಡಿಲಿದ್ದಾರೆ. ಸದ್ಯ 'ದಿ ವಿಲನ್' ಸಿನಿಮಾದಲ್ಲಿ ಪ್ರೇಮ್ ಬ್ಯುಸಿ ಇದ್ದರೆ, ಇತ್ತ ದರ್ಶನ್ ತಮ್ಮ 'ಕುರುಕ್ಷೇತ್ರ' ಸಿನಿಮಾದ ತಯಾರಿಯಲ್ಲಿದ್ದಾರೆ. ಈ ಎರಡು ಸಿನಿಮಾ ಮುಗಿದ ಮೇಲೆ ದರ್ಶನ್ ಮತ್ತು ಪ್ರೇಮ್ ಕಾಂಬಿನೇಶನ್ ನ 'ಆಂಜನೇಯ' ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

English summary
Darshan and Director Prem combination movie titled as 'Anjaneya'. Umapathi will be producing this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada