For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್; ಜಾಲಿ ರೈಡ್ ಮುಗಿಸಿ ವಾಪಸ್ ಆದ ದರ್ಶನ್ ಆ್ಯಂಡ್ ಟೀಂ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಸ್ನೇಹಿತರ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಲಾಕ್ ಡೌನ್ ಬಳಿಕ ಹೆಚ್ಚಾಗಿ ತಮ್ಮ ಮೈಸೂರಿನ ತೋಟದ ಮನೆಯಲ್ಲೇ ವಾಸಿಸುತ್ತಿರುವ ದಚ್ಚು, ಆಗಾಗ ತನ್ನ ಆಪ್ತ ಗ್ಯಾಂಗ್ ಜೊತೆ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿರುತ್ತಾರೆ.

  ಇತ್ತೀಚಿಗಷ್ಟೆ ಕೊಡಗು ಕಡೆ ಬೈಕ್ ರೈಡ್ ಹೊರಟಿದ್ದ ಚಾಲೆಂಜಿಂಗ್ ಸ್ಟಾರ್ ಆಂಡ್ ಗ್ಯಾಂಗ್ ಇದೀಗ ಕೇರಳ ಕಡೆ ಹೊರಟಿದ್ದಾರೆ. ವಿಶೇಷ ಎಂದರೆ ಈಗಾಗಲೇ ಕೇರಳ ರೈಡ್ ಮುಗಿಸಿ ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ. ದರ್ಶನ್ ಮತ್ತು ತಂಡ ಜಾಲಿ ರೈಡ್ ಹೋಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಓದಿ...

  ಮತ್ತೊಂದು ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಟೀಂ; 'ಸಾರಥಿ' ಪಯಣ ಯಾವ ಕಡೆಗೆ?ಮತ್ತೊಂದು ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಟೀಂ; 'ಸಾರಥಿ' ಪಯಣ ಯಾವ ಕಡೆಗೆ?

  ದರ್ಶನ್ ಆಂಡ್ ಗ್ಯಾಂಗ್ ಜಾಲಿ ರೈಡ್

  ದರ್ಶನ್ ಆಂಡ್ ಗ್ಯಾಂಗ್ ಜಾಲಿ ರೈಡ್

  ಕೇರಳಕಡೆ ಜಾಲಿ ರೈಡ್ ಹೊರಟಿದ್ದ ದರ್ಶನ್ ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಹಾಸ್ಯ ನಟ ಚಿಕ್ಕಣ್ಣ, ಯಶಸ್ ಸೂರ್ಯ, ಪ್ರಜ್ವಲ್ ದೇವರಾಜ್, ಪನ್ನಗಾಭರಣ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ನೇಹಿತರು ಸಾಥ್ ನೀಡಿದ್ದಾರೆ. ಸ್ನೇಹಿತರ ಜೊತೆ ಬೈಕ್ ರೈಡ್ ಹೋಗಿದ್ದ ದರ್ಶನ್ ವೀಕೆಂಡ್ ಸಖತ್ ಎಂಜಾಯ್ ಮಾಡಿದ್ದಾರೆ.

  ದರ್ಶನ್ ಜೊತೆ ಫೋಟೋಗಾಗಿ ಮುಗಿಬಿದ್ದ ಅಭಿಮಾನಿಗಳು

  ದರ್ಶನ್ ಜೊತೆ ಫೋಟೋಗಾಗಿ ಮುಗಿಬಿದ್ದ ಅಭಿಮಾನಿಗಳು

  ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮತ್ತು ಪೊಲೀಸರು ಮುಗಿಬಿದ್ದಿದ್ದರು. ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟು ತನ್ನ ರೈಡ್ ಮುಂದುವರೆಸಿದ್ದಾರೆ. ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  'ಗ್ರೀನ್ ಇಂಡಿಯಾ ಚಾಲೆಂಜ್' ಪೂರ್ಣಗೊಳಿಸಿದ ನಟ ದರ್ಶನ್'ಗ್ರೀನ್ ಇಂಡಿಯಾ ಚಾಲೆಂಜ್' ಪೂರ್ಣಗೊಳಿಸಿದ ನಟ ದರ್ಶನ್

  ಫಾರಂ ಹೌಸ್ ಸೇರಿರುವ ಚಾಲೆಂಜಿಂಗ್ ಸ್ಟಾರ್ ಟೀಂ

  ಫಾರಂ ಹೌಸ್ ಸೇರಿರುವ ಚಾಲೆಂಜಿಂಗ್ ಸ್ಟಾರ್ ಟೀಂ

  ಈಗಾಗಲೇ ದರ್ಶನ್ ಮತ್ತು ತಂಡ ನಂಜನಗೂರು ಮಾರ್ಗವಾಗಿ ಬಂದು ಟಿ.ನರಸಿಪುರದಲ್ಲಿರುವ ಫಾರಂ ಹೌಸ್ ಸೇರಿದ್ದಾರೆ. ಲಾಕ್ ಡೌನ್ ಬಳಿಕ ದರ್ಶನ್ ಇನ್ನೂ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಇನ್ನೇನು ಈ ವರ್ಷ ಕಳೆಯುತ್ತಾ ಬಂತು. ಮುಂದಿನ ವರ್ಷದಿಂದ ದರ್ಶನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.

  ರಾಬರ್ಟ್ ನಿರ್ಮಾಪಕನ ಕೊಲೆಗೆ ಸ್ಕೆಚ್, 7 ಜನ ಕಿಡಿಗೇಡಿಗಳ ಬಂಧನ | Filmibeat Kannada
  ಜನವರಿಯಿಂದ ಚಿತ್ರೀಕರಣ ಪ್ರಾರಂಭ

  ಜನವರಿಯಿಂದ ಚಿತ್ರೀಕರಣ ಪ್ರಾರಂಭ

  ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಬೇಕಿದೆ. ಇತ್ತೀಗಷ್ಟೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ನಟ ದೊಡ್ಡಣ್ಣ ಸಿನಿಮಾ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಾಟ ಮಾಡುತ್ತಿದ್ದರು. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಹೇಳಿದ್ದರು. ಜನವರಿಯಿಂದ ದರ್ಶನ್ ವೀರ ಮದಕರಿನಾಯಕ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

  English summary
  Actor Darshan and friends return to karnataka from Kerala, He went on a bike ride with a friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X