ಸೈಲೆಂಟ್ ಆಗಿ ಸರ್ಪ್ರೈಸ್ ಕೊಟ್ಟೆ ಬಿಟ್ರು ದರ್ಶನ್-ಉಮಾಪತಿ

By Bharath Kumar

Recommended Video

ದರ್ಶನ್ 53ನೇ ಸಿನಿಮಾ ಯಾರ್ ಜೊತೆ ಗೊತ್ತಾ..? | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ' ಶೂಟಿಂಗ್ ಮುಗಿದಿದೆ. 51 ಸಿನಿಮಾ 'ಯಜಮಾನ' ಕೂಡ ಬಹುತೇಕ ಚಿತ್ರೀಕರಣ ಆಗಿದೆ. ಈ ಮಧ್ಯೆ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ತಯಾರಾಗಲಿರುವ 52ನೇ ಚಿತ್ರ 'ಒಡೆಯ' ಮುಹೂರ್ತ ಆಗಸ್ಟ್ 16 ರಂದು ಜರುಗಿತ್ತು.

ಹೀಗೆ, ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳನ್ನ ಶುರು ಮಾಡಿರುವ ದರ್ಶನ್ ಈಗ ಬಹುದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. 'ಹೆಬ್ಬುಲಿ' ಖ್ಯಾತಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ದರ್ಶನ್ ಒಂದು ಸಿನಿಮಾ ಮಾಡಲಿದ್ದಾರೆ, ಆ ಚಿತ್ರಕ್ಕೆ 'ಚೌಕ' ಖ್ಯಾತಿಯ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು.

ಈ ಸುದ್ದಿಯನ್ನ ನಿಜಾ ಮಾಡಿರುವ ದರ್ಶನ್ ಮತ್ತು ಉಮಾಪತಿ ಸೈಲೆಂಟ್ ಸಿನಿಮಾಗೆ ಚಾಲನೆ ನೀಡಿದ್ದಾರೆ. ಡಿ ಬಾಸ್ ಅವರ 53ನೇ ಸಿನಿಮಾ ಸ್ಕ್ರಿಪ್ಟ್ ಪೂಜೆಯ ಮೂಲಕ ಆರಂಭವಾಗಿದೆ. ಚಿತ್ರಗಳ ಸಮೇತ ಮುಂದೆ ಓದಿ.....

ದರ್ಶನ್ 'D53' ಸ್ಟಾರ್ಟ್

ದರ್ಶನ್ 'D53' ಸ್ಟಾರ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಸಿನಿಮಾಗೆ ಚಾಲನೆ ಸಿಕ್ಕಿದೆ. ಇದು ದರ್ಶನ್ ಅವರ 53ನೇ ಚಿತ್ರವಾಗಿದ್ದು, ಈ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ.

ಸ್ಕ್ರಿಪ್ಟ್ ಪೂಜೆ ಮಾಡಿದ ಡಿ ಬಾಸ್

ಸ್ಕ್ರಿಪ್ಟ್ ಪೂಜೆ ಮಾಡಿದ ಡಿ ಬಾಸ್

ಚಿತ್ರದ ಕಥೆ ಏನು, ಟೈಟಲ್ ಏನು, ಸ್ಟೋರಿ ಲೈನ್ ಏನು ಎಂದು ಯಾವ ಸುಳಿವು ನೀಡಿದ ಚಿತ್ರತಂಡ ಇತ್ತೀಚಿಗಷ್ಟೆ ಸ್ಕ್ರಿಪ್ಟ್ ಪೂಜೆ ಮಾಡಿದೆ. ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದರು.

ಸುದ್ದಿಯಾಗಿದ್ದ 'ಕಾಟೇರ'

ಸುದ್ದಿಯಾಗಿದ್ದ 'ಕಾಟೇರ'

ಅಂದ್ಹಾಗೆ, ಕಾಟೇರ ಅಂದ್ರೆ ಒಬ್ಬ ಕುಸ್ತಿ ಪೈಲ್ವಾನ್ ಹೆಸರಂತೆ. ದಾವಣೆಗೆರೆ ಬಳಿ ಆ ವ್ಯಕ್ತಿ ಇದ್ದಾನೆ. ಒಂದು ಸಮಯದ ಊಟಕ್ಕೆ ಅಂತ ಕೂತ್ರೆ, ಮೂವತ್ತರಿಂದ ಮೂವತೈದು ಚಪಾತಿ, ಇಪತ್ತು ರೊಟ್ಟಿ, ಎರಡ್ಮೂರು ಕೋಳಿ ಹಾಗೂ ಹದಿನೈದು ವಾಟರ್ ಮೆಲನ್ ಜ್ಯೂಸ್ ಕುಡಿತಾನೆ, ಹಾಗಾಗಿ, ಅವರ ರೀತಿ ಒಂದು ಮಾತ್ರ ಮಾಡಬೇಕು ಎಂದು ಹೇಳಿದ್ದರು. ಹಾಗಾಗಿ, ಅದೊಂದು ಕಾನ್ಸೆಪ್ಟ ಇದೆಯಂತೆ. ಒಂದು ವೇಳೆ ಈ ಕಥೆ ಓಕೆ ಆದ್ರೆ, ದರ್ಶನ್ ಕುಸ್ತಿ ಪೈಲ್ವಾನ್ ಆಗಬಹುದು ಎನ್ನಲಾಗಿದೆ.

ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭ

ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭ

ದರ್ಶನ್-ಉಮಾಪತಿ-ತರುಣ್ ಸುಧೀರ್ ಜೋಡಿಯಲ್ಲಿ ಸಿನಿಮಾ ಮಾಡೋದು ಪಕ್ಕಾ. ಆದ್ರೆ, ಕಥೆಯೇನು, ಟೈಟಲ್ ಏನು, ನಾಯಕಿ ಯಾರು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಸದ್ಯ ಸಿನಿಮಾದ ಪೂಜೆ ಮಾಡಿರುವ D53, ನವೆಂಬರ್ ವೊತ್ತಿಗೆ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದೆಯಂತೆ.

More from Filmibeat

English summary
Actor Darshan and director Tarun Sudhir coming together for a film that Umapathy will be producing this project. the movie team did the script pooja of Darshan's 53 today (august 24th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X