ಹೆಂಡತಿ, ಮಗನ ಜೊತೆಗೆ 'ಕುರುಕ್ಷೇತ್ರ' ವೀಕ್ಷಿಸಿದ ದರ್ಶನ್

Recommended Video

ಪತ್ನಿ ಮಗನ ಜೊತೆ ಕುರುಕ್ಷೇತ್ರ ಸಿನಿಮಾ ನೋಡಿದ ದರ್ಶನ್ | FILMIBEAT KANNADA

'ನಾನಿನ್ನು ಸಿನಿಮಾ ನೋಡಿಲ್ಲ...' ಎಂದು ಇತ್ತೀಚಿಗೆ ನಡೆದ 'ಕುರುಕ್ಷೇತ್ರ' ಪ್ರೆಸ್ ಮೀಟ್ ನಲ್ಲಿ ನಟ ದರ್ಶನ್ ಹೇಳಿದ್ದರು. ಆದರೆ, ಅಂತೂ ಇದೀಗ ಆ ಕಾಲ ಕೂಡಿ ಬಂದಿದೆ.

ಇದೇ ಶುಕ್ರವಾರ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆ ಆಗುತ್ತಿದೆ. ರಿಲೀಸ್ ಗೆ ಮುಂಚೆ ಸಿನಿಮಾವನ್ನು ದರ್ಶನ್ ನೋಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಗೆ ಸಿನಿಮಾವನ್ನು ವೀಕ್ಷಿಸಿದ್ದಾರೆ.

ಬೆಂಗಳೂರಿನ Carnivaal Cenimas ನಲ್ಲಿ ನಿನ್ನೆ (ಸೋಮವಾರ) ರಾತ್ರಿ 'ಕುರುಕ್ಷೇತ್ರ' ಚಿತ್ರದ ವಿಶೇಷ ಪ್ರದರ್ಶನವನ್ನು ದರ್ಶನ್ ಕುಟುಂಬಕ್ಕಾಗಿ ಏರ್ಪಡಿಸಲಾಗಿತ್ತು. ನಿರ್ಮಾಪಕ ಮುನಿರತ್ನ ಸಹ ಈ ವೇಳೆ ಹಾಜರಿದ್ದರು.

ಅಂದಹಾಗೆ, ಮೊದಲ ಬಾರಿಗೆ ದರ್ಶನ್ ಪೌರಾಣಿಕ ಸಿನಿಮಾ ಮಾಡುತ್ತಿದ್ದು, ದುರ್ಯೋಧನ ಪಾತ್ರವನ್ನು ನೋಡಿ ದರ್ಶನ್ ಕುಟುಂಬ ಖುಷಿಯಾಗಿದೆಯಂತೆ. ಅಲ್ಲದೆ, ದರ್ಶನ್ ಪುತ್ರ ವಿನೀಶ್ ದುರ್ಯೋಧನ ಪೋಸ್ಟರ್ ಮುಂದೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ.

darshan and his family watched kurukshetra movie last night

ಆಗಸ್ಟ್ 9 ರಂದು 'ಕುರುಕ್ಷೇತ್ರ' ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಈಗಾಗಲೇ ಬುಕ್ಕಿಂಗ್ ಓಪನ್ ಆಗಿದೆ. ಸಿನಿಮಾಗೆ ದೊಡ್ಡ ಕ್ರೇಜ್ ಇದ್ದು, ಒಳ್ಳೆಯ ಓಪನಿಂಗ್ ಪಡೆಯುವ ಲಕ್ಷಣಗಳು ಕಾಣುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ.

darshan and his family watched kurukshetra movie last night

'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್, ಅಂಬರೀಶ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಸಿನಿಮಾದ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Challenging star Darshan and his wife vijayalakshmi and son Vinish watched 'Kurukshetra' movie last night (August 5th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X