For Quick Alerts
  ALLOW NOTIFICATIONS  
  For Daily Alerts

  ಮಗನ ಜೊತೆ ನಟ ದರ್ಶನ್ ಕುದುರೆ ಸವಾರಿ, ವಿಡಿಯೋ ವೈರಲ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಯ ಸಿಕ್ಕಾಗೆಲ್ಲಾ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಇರ್ತಾರೆ. ತೋಟ, ಪ್ರಾಣಿಗಳ ಪೋಷಣೆಯಲ್ಲಿ ನಟ ದರ್ಶನ್ ಬ್ಯುಸಿಯಾಗ್ತಾರೆ. ಕುದುರೆಗಳನ್ನು ಸಾಕಿರುವ ದರ್ಶನ್ ಅಗಾಗ ಕುದುರೆ ಸವಾರಿಯೂ ಮಾಡ್ತಾರೆ. ಮೈಸೂರು ಸುತ್ತಮುತ್ತ ದಾಸ ಕುದುರೆ ಸವಾರಿ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡಸಿಗುತ್ತದೆ.

  ಇದೀಗ, ಮಗನ ಜೊತೆ ದರ್ಶನ್ ಕುದುರೆ ಸವಾರಿ ಹೊರಟಿರುವ ವಿಡಿಯೋ ಸದ್ದು ಮಾಡುತ್ತಿದೆ. ಮಗ ವಿನೀಶ್ ಹಾಗೂ ದರ್ಶನ್ ಪ್ರತ್ಯೇಕ ಕುದುರೆಗಳ ಮೇಲೆ ಸವಾರಿ ಮಾಡ್ತಿದ್ದು, ಮಗನಿಗೆ ತರಬೇತಿ ಕೊಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಡಿ ಬಾಸ್ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿದಾಡುತ್ತಿವೆ.

  ದರ್ಶನ್ 'ಮದಕರಿ ನಾಯಕ' ಅಪ್‌ಡೇಟ್ ನೀಡಿದ ರಾಜೇಂದ್ರ ಸಿಂಗ್ ಬಾಬುದರ್ಶನ್ 'ಮದಕರಿ ನಾಯಕ' ಅಪ್‌ಡೇಟ್ ನೀಡಿದ ರಾಜೇಂದ್ರ ಸಿಂಗ್ ಬಾಬು

  ದರ್ಶನ್ ಅವರಷ್ಟೇ ಮಗ ವಿನೀಶ್‌ಗೂ ಕ್ರೇಜ್ ಹೆಚ್ಚಿದೆ. ಸಾರ್ವಜನಿಕವಾಗಿ ವಿನೀಶ್ ಕಾಣಿಸಿಕೊಂಡಾಗ ಅಭಿಮಾನಿಗಳು ಜೈಕಾರ ಹಾಕುವುದು, ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಇನ್ನು ದರ್ಶನ್ ಅವರ ಹುಟ್ಟುಹಬ್ಬದ ದಿನ ಮನೆ ಬಳಿ ಹೋದಾಗ ವಿನೀಶ್ ಪೋಸ್ಟರ್, ಕಟೌಟ್‌ಗಳು ಸಹ ಗಮನ ಸೆಳೆಯುತ್ತದೆ. ಮುಂದೆ ಓದಿ....

  ನನ್ನ ನಂತರ ನಮ್ಮ ಬ್ರಾಂಡ್ ಇರಬೇಕು

  ನನ್ನ ನಂತರ ನಮ್ಮ ಬ್ರಾಂಡ್ ಇರಬೇಕು

  ದರ್ಶನ್ ಅವರ ಮಗ ವಿನೀಶ್ ಈಗಾಗಲೇ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಮಿಸ್ಟರ್ ಐರಾವತ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಹಾಗೂ ಯಜಮಾನ ಸಿನಿಮಾದ ಹಾಡೊಂದರಲ್ಲಿ ವಿನೀಶ್ ನಟಿಸಿದ್ದಾರೆ. ಭವಿಷ್ಯದಲ್ಲಿ ದರ್ಶನ್ ಪುತ್ರ ಚಿತ್ರರಂಗಕ್ಕೆ ಬರುವುದನ್ನು ಸ್ವತಃ ದಾಸ ಖಚಿತಪಡಿಸಿದ್ದಾರೆ. ಯಜಮಾನ ಸಿನಿಮಾದ ಸಕ್ಸಸ್ ಪ್ರೆಸ್‌ಮೀಟ್‌ನಲ್ಲಿ 'ಮಗ ಚಿತ್ರರಂಗಕ್ಕೆ ಬರ್ತಾರಾ?' ಎಂದು ಪ್ರಶ್ನಿಸಿದ್ದಕ್ಕೆ, ''ಹೌದು, ನಾನು ಹೋದ್ಮೇಲೆ ನನ್ನ ಬ್ರಾಂಡ್ ಇರಬೇಕು ಅಲ್ಲವೇ, ಸಿನಿಮಾ ಮಾಡ್ತಾನೆ'' ಎಂದರು.

  ರಾಜವೀರ ಮದಕರಿ ನಾಯಕ

  ರಾಜವೀರ ಮದಕರಿ ನಾಯಕ

  ರಾಬರ್ಟ್ ಸಿನಿಮಾದ ಯಶಸ್ಸಿನ ನಂತರ 'ರಾಜವೀರ ಮದಕರಿ ನಾಯಕ' ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಆದರೆ, ಕೋವಿಡ್ ಭೀತಿಯಿಂದ ತಾತ್ಕಲಿಕವಾಗಿ ಚಿತ್ರೀಕರಣ ನಿಲ್ಲಿಸಲಾಗಿದೆ. ಮೂರನೇ ಅಲೆಯ ಭೀತಿ ಇರುವುದರಿಂದ ಚಿತ್ರೀಕರಣಕ್ಕೆ ಹೊರಟರೆ ಮತ್ತೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಅಲ್ಪ ವಿರಾಮ ಹಾಕಲಾಗಿದೆ. ಸ್ವತಃ ನಿರ್ದೇಶಕರು ನೀಡಿರುವ ಮಾಹಿತಿ ಪ್ರಕಾರ, ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಿದೆ. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಕೋವಿಡ್ ಭೀತಿ ಸಂಪೂರ್ಣವಾಗಿ ಕಡಿಮೆಯಾಗಬೇಕು. ಆಮೇಲೆ ಚಿತ್ರೀಕರಣ ಶುರು ಮಾಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

  D55: 'ಯಜಮಾನ' ಭೇಟಿ ಮಾಡಿದ ಶೈಲಜಾ ನಾಗ್: ಸಿಕ್ಕ ಸುಳಿವು ಏನು?D55: 'ಯಜಮಾನ' ಭೇಟಿ ಮಾಡಿದ ಶೈಲಜಾ ನಾಗ್: ಸಿಕ್ಕ ಸುಳಿವು ಏನು?

  ದರ್ಶನ್-ಶೈಲಜಾ ನಾಗ್

  ದರ್ಶನ್-ಶೈಲಜಾ ನಾಗ್

  'ಯಜಮಾನ' ಸಿನಿಮಾದ ನಂತರ ನಿರ್ಮಾಪಕ ಶೈಲಜಾ ನಾಗ್ ಜೊತೆ ಮತ್ತೊಂದು ಪ್ರಾಜೆಕ್ಟ್ ಮಾಡ್ತಿದ್ದು, ಎಲ್ಲ ಸಿದ್ಧತೆ ನಡೆದಿದೆ. ಹರಿಕೃಷ್ಣ ಈ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದು ದರ್ಶನ್ ನಟನೆಯ 55ನೇ ಸಿನಿಮಾ ಆಗಿದ್ದು, ರಾಜವೀರ ಮದಕರಿ ನಾಯಕ ವಿಳಂಬವಾಗುವ ಸಾಧ್ಯತೆಯಿದ್ದು, ಈ ನಡುವೆ ಈ ಚಿತ್ರ ಮುಗಿಸಿದರೂ ಅಚ್ಚರಿ ಇಲ್ಲ.

  ರಾಕ್‌ಲೈನ್ ಜೊತೆ ಇನ್ನೊಂದು ಸಿನಿಮಾ?

  ರಾಕ್‌ಲೈನ್ ಜೊತೆ ಇನ್ನೊಂದು ಸಿನಿಮಾ?

  'ರಾಜವೀರ ಮದಕರಿ ನಾಯಕ' ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ. ಈ ಸಿನಿಮಾ ವಿಳಂಬವಾಗುವ ಕಾರಣ ಇದೇ ಕಾಂಬಿನೇಷನ್‌ನಲ್ಲಿ ಇನ್ನೊಂದು ಚಿತ್ರ ಮಾಡೋಣ ಎಂಬ ಮಾತುಕತೆ ಆಗಿದೆಯಂತೆ. ಆ ಚಿತ್ರಕ್ಕೆ ಗೋಲ್ಡ್ ರಿಂಗ್ ಎಂದು ಹೆಸರಿಟ್ಟಿದ್ದು, ನೇವಿ ಆಫೀಸರ್ ಆಗಿ ದರ್ಶನ್ ನಟಿಸುವ ತಯಾರಿ ನಡೆದಿದೆಯಂತೆ. ಆದರೆ, ಅಧಿಕೃತವಾಗಿ ಯಾವ ಚಿತ್ರವೂ ಘೋಷಣೆಯಾಗಿಲ್ಲ ಎನ್ನುವುದು ಅಭಿಮಾನಿಗಳಲ್ಲಿ ನಿರಾಸೆ ತಂದಿದೆ.

  English summary
  Challenging star Darshan and his son Vineesh enjoy horse riding at the farm house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X