For Quick Alerts
  ALLOW NOTIFICATIONS  
  For Daily Alerts

  ಮಗನಿಗೆ ಹಸುವಿನ ಹಾಲು ಕರೆಯುವುದನ್ನು ಹೇಳಿಕೊಟ್ಟ ದರ್ಶನ್

  |
  Darshan Farm House : ಫಾರ್ಮ್ ಹೌಸ್‍ನಲ್ಲಿ ಒಂದಾದ ಅಪ್ಪ-ಮಗ ಮಾಡಿದ್ದೇನು ಗೊತ್ತಾ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸಿನಿಮಾದಿಂದ ಕೊಂಚ ಬಿಡುವು ಮಾಡಿಕೊಂಡು ಫಾರ್ಮ್ ಹೌಸ್ ನಲ್ಲಿ ಕಾಲಕಳೆಯುತ್ತಿದ್ದಾರೆ. ಮೊನ್ನೆ ಮೊನ್ನೆವರೆಗೂ ಮಂಡ್ಯ ಲೋಕ ಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ದರ್ಶನ್ ಈಗ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

  ಹೌದು ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದೆರೆ ಪಂಚ ಪ್ರಾಣ. ಅವರ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿಗಳಿವೆ. ಬಿಡುವಿನ ವೇಳೆಯಲ್ಲಿ ದಚ್ಚು ಅವುಗಳ ಜೊತೆ ಕಾಲಕಳೆಯುತ್ತಿರುತ್ತಾರೆ. ಸದ್ಯ ಚಿತ್ರೀಕರಣದಿಂದ ಬ್ರೇಕ್ ಪಡೆದಿರುವ ದರ್ಶನ್ ಈಗ ಹಸುಗಳ ಹಾಲು ಕರೆಯುತ್ತಿದ್ದಾರೆ.

  ದರ್ಶನ್ ಮಾತ್ರವಲ್ಲ ಅಲ್ಲ ಮಗ ವಿನೀಶ್ ಕೂಡ ಅಪ್ಪನ ಜೊತೆ ಕುಳಿತು ಹಸುವಿನ ಹಾಲು ಕರೆಯುತ್ತಿದ್ದಾರೆ. ಮಗನಿಗೂ ಹಾಲು ಕರೆಯುವುದನ್ನ ಹೇಳಿ ಕೊಡುತ್ತಿದ್ದಾರೆ. ವಿನೀಶ್ ಕೂಡ ಅಪ್ಪನಂತೆ ಸಲೀಸಾಗಿ ಹಾಲು ಕರೆದು ಸೈ ಎನಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ಮಗನನ್ನು ರೈತನಾಗಿ ಮಾಡುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್.

  ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಚಾರದ ವೇಳೆಯು ದರ್ಶನ್ ಮಂಡ್ಯದ ಹಳ್ಳಿಯಲ್ಲಿ ಹಸುವಿನ ಹಾಲು ಕರೆದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ದರ್ಶನ್ ಸದ್ಯ 'ಒಡೆಯ' ಚಿತ್ರದ ಚಿತ್ರೀಕರಣ ಮುಗಿಸಿ 'ರಾಬರ್ಟ್' ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ.

  Read more about: darshan ದರ್ಶನ್ cow
  English summary
  Kannada actor Challenging star Darshan and his son Vineesh milking. Darshan spending his time in the farmhouse with animals.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X