»   » 'ನಮ್ಮ ಮಧ್ಯೆ ಬಿರುಕಿಲ್ಲ, ನಾವು ಚೆನ್ನಾಗಿದ್ದೀವಿ' ಎಂದ ಸುದೀಪ್

'ನಮ್ಮ ಮಧ್ಯೆ ಬಿರುಕಿಲ್ಲ, ನಾವು ಚೆನ್ನಾಗಿದ್ದೀವಿ' ಎಂದ ಸುದೀಪ್

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರಕ್ಕೆ ಹಾಗೂ ದರ್ಶನ್ ಗೆ ಶುಭ ಕೋರಿದ್ದರು. ಈ ಬೆಳವಣಿಗೆಯ ನಂತರ ಕಿಚ್ಚ-ದಚ್ಚು ಇವರಿಬ್ಬರ ಸ್ನೇಹ ಮತ್ತೆ ಚಿಗುರಿದೆ ಎಂಬ ಆಸೆ ಅಭಿಮಾನಿಗಳಲ್ಲಿ ಹೆಚ್ಚಾಯಿತು. ಈ ನಿರೀಕ್ಷೆ ಸುಳ್ಳಾಗಲಿಲ್ಲ. ಇದನ್ನ ಕಿಚ್ಚ ಸುದೀಪ್ ಕೂಡ ಒಪ್ಪಿಕೊಂಡಿದ್ದಾರೆ.

ಹೌದು, ನಟ ದರ್ಶನ್ ಮತ್ತು ಸುದೀಪ್ ಮತ್ತೊಮ್ಮೆ ದೋಸ್ತಿಗಳಾಗಿದ್ದಾರೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ''ನಾನು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ'' ಎಂದು ಕಿಚ್ಚನ ಸ್ನೇಹವನ್ನ ಕಡಿದುಕೊಂಡಿದ್ದರು ದಾಸ. ಇಂದು ''ನಮ್ಮ ಮಧ್ಯೆ ಬಿರುಕಿಲ್ಲ'' ಎಂದು ಹೇಳುವ ಮೂಲಕ ಕಿಚ್ಚ ಮತ್ತೆ ಆ ಸ್ನೇಹವನ್ನ ಗಟ್ಟಿಯಾಗಿಸಿದ್ದಾರೆ.

ಮಾಸ್ ಲೀಡರ್ ಚಿತ್ರದ ವಿಶೇಷ ಪ್ರದರ್ಶನ ಬಳಿಕ ಮಾತನಾಡಿದ ಸುದೀಪ್ ಕನ್ನಡ ನಟರ ಒಗ್ಗಟ್ಟಿನ ಬಗ್ಗೆ ಮಾತನಾಡಿದರು. ಅಷ್ಟಕ್ಕೂ, ದರ್ಶನ್ ಮತ್ತು ಸುದೀಪ್ ಸ್ನೇಹದ ಬಗ್ಗೆ ಸುದೀಪ್ ಏನಂದ್ರು? ಮುಂದೆ ಓದಿ....

ಮಾಧ್ಯಮದವರು ಕೇಳಿದ ಪ್ರಶ್ನೆ

''ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಒಗ್ಗಟ್ಟಿನ ಮಂತ್ರ ಕಾಣುತ್ತಿದೆ. ಹಾಗಾಗಿ, ಸ್ಟಾರ್ ಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ದರ್ಶನ್ ಅವರಿಗೂ ನೀವು ಟ್ವೀಟ್ ಮಾಡಿದ್ದೀರಾ....? ಎಂದು ಕೇಳುತ್ತಿದ್ದಂತೆ ಕಿಚ್ಚ ಉತ್ತರಿಸಿದ್ದಾರೆ.

ಸುದೀಪ್ ಏನಂದ್ರು

''ನಾವು ಒಟ್ಟಿಗೆ ಬೆಳೆಯಬೇಕಿದೆ. ಈ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಯಾವತ್ತು ಬಿರುಕು ಬಂದೇ ಇರಲಿಲ್ಲ. ಹೀಗಾಗಿ, ಈ ಪ್ರಶ್ನೆಗೆ ಉತ್ತರ ಕೊಡಬೇಕಿಲ್ಲ. ನಾವು ಚೆನ್ನಾಗಿದ್ದೀವಿ'' ಎಂದು ಸುದೀಪ್ ಹೇಳಿದರು.

ಒಂದಾದ ಸುದೀಪ್-ದರ್ಶನ್ ಬಳಗದಿಂದ ಒಗ್ಗಟ್ಟಿನ ಮಂತ್ರ

ದರ್ಶನ್ ಸ್ನೇಹದ ಬಗ್ಗೆ ಮಾತನಾಡಿದ ಕಿಚ್ಚ

ಕಿಚ್ಚ ಸುದೀಪ್ ಅವರು ನೇರವಾಗಿ ದರ್ಶನ್ ಅವರ ಹೇಳಿಲ್ಲವಾದರೂ, ವರದಿಗಾರ ಕೇಳಿದ್ದು ಮಾತ್ರ ದರ್ಶನ್ ಅವರ ಬಗ್ಗೆನೇ. ಹಾಗಾಗಿ, ಸುದೀಪ್ ಕೂಡ ಅದನ್ನ ಪರೋಕ್ಷವಾಗಿ ಹೇಳಿದ್ದಾರೆ. ''ನಮ್ಮ ಮಧ್ಯೆ ಬಿರುಕೇ ಬಂದಿಲ್ಲ. ನಾವು ಚೆನ್ನಾಗಿದ್ದೀವಿ'' ಎಂದು ಹೇಳಿದ ಮಾತು ಈಗ ಕುತೂಹಲ ಮೂಡಿಸಿದೆ.

'ದರ್ಶನ್-ಸುದೀಪ್' ಗೆಳೆತನದ ಬಗ್ಗೆ 'ಸುದೀಪ್ ಸಾಂಸ್ಕೃತಿಕ ಪರಿಷತ್' ಬರೆದ ಬಹಿರಂಗ ಪತ್ರ

ದರ್ಶನ್ ಜೊತೆ ಮತ್ತೆ ದೋಸ್ತಿ ದರ್ಬಾರ್!

ಈ ಎಲ್ಲ ಬೆಳವಣಿಗೆಗಳನ್ನ ನೋಡಿದ ಮೇಲೆ ಸುದೀಪ್ ಮತ್ತು ದರ್ಶನ್ ಸ್ನೇಹ ಮತ್ತೆ ಚಿಗುರಿದೆ ಎಂಬ ಆಶಯ ಅಭಿಮಾನಿಗಳಲ್ಲಿ ಮೂಡಿದೆ. ಯಾಕಂದ್ರೆ, ''ಸುದೀಪ್ ನನ್ನ ಫ್ರೆಂಡ್ ಅಲ್ಲ'' ಎಂದು ದರ್ಶನ್ ಅವರು ಬಹಿರಂಗವಾಗಿ ಹೇಳಿದ್ದರು, ಈಗ ಸುದೀಪ್ ಅದನ್ನ ತಿರಸ್ಕರಿಸಿ ''ನಾವು ಚೆನ್ನಾಗಿದ್ದೀವಿ'' ಎಂದಿರುವುದು ಗಮನಿಸಬೇಕಾದ ವಿಷಯ'

ಸಂಧಾನ ಆಗಿರಬಹುದು?

ಮತ್ತೊಂದೆಡೆ ಸುದೀಪ್ ಮತ್ತು ದರ್ಶನ್ ಅವರ ಸ್ನೇಹ ಸಂಬಂಧದ ಕುರಿತು ಕನ್ನಡ ಚಿತ್ರರಂಗದ ಹಿರಿಯರೊಬ್ಬರ ಸಂಧಾನ ಮಾಡಿಸಿರಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಆದ್ರೆ, ಅದರ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ.

'ಬಿಗ್' ಸುದ್ದಿ: ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

ಒಟ್ಟಿಗೆ ಕಾಣಿಸಿಕೊಂಡ್ರು ಅಚ್ಚರಿ ಇಲ್ಲ

ಈ ಎಲ್ಲ ಘಟನೆಗಳ ನಂತರ ದರ್ಶನ್ ಮತ್ತು ಸುದೀಪ್ ಮುಂದಿನ ದಿನಗಳಲ್ಲಿ ಒಟ್ಟಾಗಿ ವೇದಿಕೆ ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ. ಈ ಸಮಯಕ್ಕಾಗಿ ಇಬ್ಬರ ಅಭಿಮಾನಿಗಳು ಕೂಡ ನಿರೀಕ್ಷೆ ಮಾಡುತ್ತಿದ್ದಾರೆ.

ಸುದೀಪ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ. ಈ ಲಿಂಕ್ ಕ್ಲಿಕ್ ಮಾಡಿ....

English summary
''Me and Darshan is Fine'' says Kannada Actor Kiccha Sudeep on Yesterday (august 9th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada