ಸೃಜನ್ ಲೋಕೇಶ್ ಗೆ ಶುಭಕೋರಿದ ದರ್ಶನ್ ಮತ್ತು ಸುದೀಪ್

Recommended Video

ಮಜಾ ಟಾಕೀಸ್ ನ ಸರದಾರ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೆ ಇಂದು ಸಂಭ್ರಮ | FILMIBEAT KANNADA

ಸ್ಯಾಂಡಲ್ ವುಡ್ ನಟ, ಮಜಾ ಟಾಕೀಸ್ ನ ಸರದಾರ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಸೃಜನ್ ಗೆ ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿವೆ.

ಟಾಕಿಂಗ್ ಸ್ಟಾರ್ ಸಿನಿಮಾ ಜೊತೆಗೆ ಮಜಾ ಟಾಕೀಸ್ ನಲ್ಲಿ ಸಖತ್ ಬ್ಯುಸಿ ಇದ್ದಾರೆ. ಮಜಾ ಟಾಕೀಸ್ ಮೂಲಕವೆ ಹೆಚ್ಚು ಖ್ಯಾತಿಗಳಿಸಿರುವ ನಟ ಸೃಜ. ಕಾಮಿಡಿ ಮಾಡುತ್ತ ಪ್ರೇಕ್ಷಕರನ್ನು ನಕ್ಕು ನಗಿಸುವ ಸೃಜನ್ ಇಂದು ಹುಟ್ಟು ಹಬ್ಬ ಆಚರಸಿಕೊಳ್ಳುತ್ತಿದ್ದಾರೆ.

ವಿಶೇಷ ಅಂದ್ರೆ ಸೃಜನ್ ಗೆ ಸ್ಯಾಂಡಲ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಶುಭಾಶಯ ಕೋರಿದ್ದಾರೆ. ಡಿ ಬಾಸ್ ಗೆ ತುಂಬ ಆತ್ಮೀಯ ಗೆಳೆಯನಾಗಿರುವ ಸೃಜನ್, ಸುದೀಪ್ ಅವರಿಗೂ ಉತ್ತಮ ಸ್ನೇಹಿತರಾಗಿದ್ದಾರೆ. ಇಬ್ಬರು ಸಹ ಗೆಳೆಯನಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

Darshan and Kiccha Sudeep are wish to Srujan Lokesh birthday

"ಹುಟ್ಟುಹಬ್ಬದ ಶುಭಾಶಯಗಳು ಸೃಜನ್. ಒಳ್ಳೆಯದಾಗಲಿ ನಿನ್ನ ಎಲ್ಲಾ ಕನಸುಗಳು ನನಸಾಗಲಿ" ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯ ಸೃಜನ್ ಗೆ ಶುಭಕೋರಿದ್ದಾರೆ.

ಮತ್ತೊಂದೆಡೆ ಕಿಚ್ಚ ಸುದೀಪ್, "ಹುಟ್ಟುಹಬ್ಬದ ಶುಭಾಶಯಗಳು ಸ್ನೇಹಿತ. ನೀನು ಹೀಗೆ ಎಲ್ಲರನ್ನು ರಂಜಿಸುತ್ತ, ಪ್ರತಿ ಮನೆಯಲ್ಲು ನಗು ಮೂಡಿಸುತ್ತಿರು. ಇವತ್ತು ನೀನು ಮಜಾ ಮಾಡು" ಎಂದು ಸ್ನೇಹಿತ ಸೃಜನ್ ಗೆ ಹೇಳಿದ್ದಾರೆ.

ಸೃಜನ್ ಲೋಕೇಶ್ ಸದ್ಯ ಮಜಾ ಟಾಕಿಸ್ ಜೊತೆಗೆ ಸಿನಿಮಾಗಳಲ್ಲು ಬ್ಯುಸಿಯಾಗಿದ್ದಾರೆ. ನಟಿ ಹರಿಪ್ರಿಯಾ ಜೊತೆ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇದರ ಜೊತೆಗೆ ನಟಿ ಮೇಘನಾ ರಾಜ್ ಗೆ ನಾಯಕನಾಗಿಯು ಕಾಣಿಕೊಳ್ಳುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲು ಬ್ಯುಸಿ ಇರುವ ಟಾಕಿಂಗ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯಗಳು.

More from Filmibeat

English summary
challenging star Darshan and Kiccha Sudeep are wish to Srujan Lokesh birthday. Srujan lokesh is celebrating his 40th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X