ದೇವರಾಜ್ ಹುಟ್ಟುಹಬ್ಬವನ್ನ ಆಚರಿಸಿದ ದರ್ಶನ್-ಪ್ರಜ್ವಲ್

Recommended Video

ಹೇಗಿತ್ತು ನೋಡಿ ದೇವರಾಜ್ ಹುಟ್ಟುಹಬ್ಬದ ಸಂಭ್ರಮ..! | Filmibeat Kannada

ಒರಟು ನೋಟ, ಬೆಂಕಿಯಂತ ಕಣ್ಣುಗಳು, ಗಡುಸು ಧ್ವನಿ, ಅಬ್ಬರದ ನಗು...ಅಬ್ಬಾ ಆಗಿನ ಸಮಯದಲ್ಲಿ ಅಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿದ್ದ ಖಡಕ್ ಖಳ ನಾಯಕ ಇವರು. ವಿಲನ್ ಪಾತ್ರಗಳಿಗೆ ಅತ್ಯುತ್ತಮ ಆಯ್ಕೆಯಾಗಿದ್ದ ಇವರು ಕ್ರಮೇಣ ಹೀರೋ ಆಗಿ ಮಿಂಚಿದ್ದು ಇತಿಹಾಸ.

ಇವರನ್ನ ತೆರೆಮೇಲೆ ನೋಡ್ತಿದ್ರೆ ಅದೇನೋ ಒಂಥರಾ ಭಯ. ಈಗಲೂ ಅನೇಕರು ಇವರ ಬಳಿ ಮಾತಾಡೋಕು ಹಿಂಜರಿಯುತ್ತಾರೆ ಬಿಡಿ. ಈಗಾಗಲೇ ನಿಮಗೆ ಗೊತ್ತಿದೆ ನಾವು ಹೇಳ್ತಿರುವುದು ಡೈನಾಮಿಕ್ ಸ್ಟಾರ್ ದೇವರಾಜ್ ಬಗ್ಗೆ.

ಅಂದ್ಹಾಗೆ, ದೇವರಾಜ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 65ನೇ ವರ್ಷದ ಜನುಮದಿನವನ್ನ ಕನ್ನಡದ ಸೂಪರ್ ಸ್ಟಾರ್ ನಟ ಇಂದು ಕುಟುಂಬದ ಜೊತೆ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ದೇವರಾಜ್ ಅವರ ಬರ್ತಡೇಯನ್ನ ಒಂದು ಕಡೆ ಪ್ರಜ್ವಲ್ ದೇವರಾಜ್ ಸೆಲೆಬ್ರೆಟ್ ಮಾಡಿದ್ರೆ, ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಚರಿಸಿದ್ದಾರೆ. ಮುಂದೆ ಓದಿ.....

ಅಪ್ಪನಿಗೆ ಶುಭಕೋರಿದ ಪ್ರಜ್ವಲ್

ಅಪ್ಪನಿಗೆ ಶುಭಕೋರಿದ ಪ್ರಜ್ವಲ್

ದೇವರಾಜ್ ಅವರ ಹುಟ್ಟುಹಬ್ಬವನ್ನ ಸಂಭ್ರಮಿಸಿದ ಮಗ ಪ್ರಜ್ವಲ್ ದೇವರಾಜ್ ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳ ಜೊತೆ ಜನುಮದಿನ ಆಚರಿಸಿ, ಅಪ್ಪನಿಗೆ ತಾನೊಬ್ಬ ಅಭಿಮಾನಿಯಂತೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ.

ಅಪ್ಪ ನೀನೇ ದೇವರು....

ಅಪ್ಪ ನೀನೇ ದೇವರು....

''ನಿಮ್ಮ ಬಗ್ಗೆ ವಿವರಿಸಲು ಪದಗಳೇ ಇಲ್ಲ. ನಿಮಗೆ ಎಷ್ಟೇ ಧನ್ಯವಾದ, ಕೃತಜ್ಞತೆಗಳನ್ನ ಹೇಳಿದ್ರು ಕಮ್ಮಿಯೇ. ನೀವು ನನ್ನ ದೇವರು, ನನ್ನ ಶಕ್ತಿ, ನನ್ನ ಎಲ್ಲವೂ ನೀವೇ.. ಸದಾ ನಿಮ್ಮ ಮುಖದಲ್ಲಿ ನಗು ಮೂಡಿಸಲು ನಾನು ಪ್ರಯತ್ನ ಪಡುತ್ತೇನೆ....'' ಎಂದು ಹೃದಯಪೂರ್ವಕವಾಗಿ ಬರೆದುಕೊಂಡಿದ್ದಾರೆ.

'ಯಜಮಾನ'ನ ಜೊತೆ ಬರ್ತಡೇ

'ಯಜಮಾನ'ನ ಜೊತೆ ಬರ್ತಡೇ

ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ದೇವರಾಜ್ ಅವರ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. 'ಯಜಮಾನ' ಚಿತ್ರದ ಸೆಟ್ ನಲ್ಲಿ ಭಾಗಿಯಾಗಿದ್ದ ದೇವರಾಜ್ ಅವರಿಗೆ ಕೇಕ್ ತಿನ್ನಿಸಿ ಬರ್ತಡೇ ಸಲೆಬ್ರೇಟ್ ಮಾಡಿದ್ದಾರೆ ಡಿ ಬಾಸ್.

ದರ್ಶನ್ ಜೊತೆ ಅಭಿನಯ

ದರ್ಶನ್ ಜೊತೆ ಅಭಿನಯ

ದರ್ಶನ್ ಮತ್ತು ದೇವರಾಜ್ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪ್ರಜ್ವಲ್ ದೇವರಾಜ್ ಅವರನ್ನ ಸಹೋದರನಂತೆ ಕಾಣುವ ಡಿ-ಬಾಸ್, ದೇವರಾಜ್ ಅವರಿಗೆ ಹೆಚ್ಚು ಗೌರವ ನೀಡ್ತಾರೆ. 'ತಾರಕ್' ಚಿತ್ರದಲ್ಲಿ ತಾತ-ಮೊಮ್ಮಗನಾಗಿ ಇವರಿಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಈಗ 'ಯಜಮಾನ' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಅಭಿನಯಿಸ್ತಿದ್ದಾರೆ. ಮುಂದೆ 'ಒಡೆಯ' ಚಿತ್ರದಲ್ಲೂ ದರ್ಶನ್ ಜೊತೆ ದೇವರಾಜ್ ಬಣ್ಣ ಹಚ್ಚುತ್ತಿದ್ದಾರೆ.

More from Filmibeat

English summary
Kannada actor darshan and prajwal devaraj has celebrate Devaraj Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X