For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಬಿಡುಗಡೆಗೆ ಮುನ್ನ ತಿರುಪತಿಗೆ ಭೇಟಿ ನೀಡಿದ ದರ್ಶನ್-ಉಮಾಪತಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತಿದೆ.

  ತೆಲುಗಿನಲ್ಲಿ ಜೋರಾಗಿರಲಿದೆ ಡಿ ಬಾಸ್ ರಾಬರ್ಟ್ ಹವಾ | Filmibeat Kannada

  ಕನ್ನಡದಂತೆ ತೆಲುಗಿನಲ್ಲೂ ರಾಬರ್ಟ್ ಚಿತ್ರದ ಟೀಸರ್, ಸಾಂಗ್ ಸದ್ದು ಮಾಡ್ತಿದೆ. ಆಂಧ್ರ-ತೆಲಂಗಾಣದಲ್ಲೂ ರಾಬರ್ಟ್ ಕ್ರೇಜ್ ಹೆಚ್ಚಾಗಿದ್ದು, ಡಿ ಬಾಸ್ ಎಂಟ್ರಿಗೆ ಭರ್ಜರಿ ಸ್ವಾಗತ ಸಿಗುವ ನಿರೀಕ್ಷೆ ಇದೆ.

  ರಾಬರ್ಟ್ ಟೀಸರ್ ಆಯ್ತು, ಈಗ ತೆಲುಗಿನಲ್ಲಿ ಮೊದಲ ಹಾಡು ರಿಲೀಸ್

  ಈ ನಡುವೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಬಹಳ ವರ್ಷದ ಬಳಿಕ ತಿರುಪತಿಗೆ ಭೇಟಿ ನೀಡಿರುವ ದರ್ಶನ್‌ಗೆ ತೆಲುಗಿನ ಕೆಲವು ನಿರ್ಮಾಪಕ, ನಿರ್ದೇಶಕರು ಸಾಥ್ ನೀಡಿದ್ದಾರೆ.

  ರಾಬರ್ಟ್ ಚಿತ್ರವನ್ನು ತೆಲುಗಿನ ಹಿರಿಯ ನಿರ್ದೇಶಕ ಚಂಚಲವಾಡ ಶ್ರೀನಿವಾಸ್ ರಾವ್ ವಿತರಣೆ ಮಾಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ‌ ಮೂವೀಸ್ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ದರ್ಶನ್ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ತೆಲುಗು ರಾಜ್ಯಗಳಲ್ಲಿ ಸುಮಾರು 300 ರಿಂದ 400 ಚಿತ್ರಮಂದಿರಗಳಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆಯಂತೆ.

  ಭಾರಿ ಮೊತ್ತಕ್ಕೆ ರಾಬರ್ಟ್ ತೆಲುಗು ವಿತರಣೆ ಹಕ್ಕು ಪಡೆದ ನಿರ್ಮಾಪಕ

  ಈ ಹಿಂದೆ ರಾಬರ್ಟ್ ಚಿತ್ರವನ್ನು ಮಾರ್ಚ್ 11ಕ್ಕೆ ಬಿಡುಗಡೆ ಮಾಡಲು ಆಂಧ್ರ-ತೆಲಂಗಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಏಕಕಾಲದಲ್ಲಿ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಅಡ್ಡಿ ಪಡಿಸಿದ್ದರು. ಕೊನೆಗೆ ದರ್ಶನ್ ಅವರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಈ ಕುರಿತು ದೂರು ನೀಡಿದ್ದರು. ನಂತರ ಈ ಸಮಸ್ಯೆ ಬಗೆಹರಿದಿತ್ತು.

  English summary
  Challenging star Darshan and Producer Umpathy Srinivas visits Tirumala seek blessings of Lord Venkateshwara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X