ದರ್ಶನ್-ಪುನೀತ್ ಈಗ ಹೊಸ 'ದಿಗ್ಗಜರು': ಯಾವ ವಿಷ್ಯಕ್ಕೆ?

Recommended Video

ಡಿ ಬಾಸ್ ಮತ್ತು ಪವರ್ ಸ್ಟಾರ್ ಕನ್ನಡ ಚಿತ್ರರಂಗದ ದಿಗ್ಗಜರು | FILMIBEAT KANNADA

ದಿಗ್ಗಜರು ಅಂದ್ರೆ ಥಟ್ ಅಂತ ನೆನಪಾಗುವುದು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್. ದಿಗ್ಗಜರು ಪದಕ್ಕೆ ಪರ್ಯಾಯ ಪದ ಕುಚುಕು. ವಿಷ್ಣು-ಅಂಬಿಯ ಸ್ನೇಹ ಸಿನಿಜಗತ್ತಿನಲ್ಲಿ ಅಂದು, ಇಂದು, ಎಂದೆಂದೂ ಅಜರಾಮರ. ಅವರಿಬ್ಬರ ಸ್ನೇಹದ ಬಗ್ಗೆ ಎಷ್ಟೇ ಹೇಳಿದ್ರು ಕಮ್ಮಿಯೇ.

ವಿಷ್ಣು ಅಗಲಿಕೆ ನಂತರ ಮಾನಸಿಕವಾಗಿ ನೋವು ಅನುಭವಿಸಿದ್ದ ಅಂಬರೀಶ್ ಕೂಡ ಕಳೆದ ನವೆಂಬರ್ ನಲ್ಲಿ ನಿಧನರಾದರು. ವಿಷ್ಣು ಮತ್ತು ಅಂಬಿ ಸ್ನೇಹದ ನಂತರ ದರ್ಶನ್ ಮತ್ತು ಸುದೀಪ್ ಅವರ ಸ್ನೇಹ ಅದೇ ಹಾದಿಯಲ್ಲಿ ಸಾಗಿತ್ತು. ಸ್ಯಾಂಡಲ್ ವುಡ್ ನ ಆಪ್ತಮಿತ್ರರು ಎನಿಸಿಕೊಂಡಿದ್ದರು.

ಕಾಲಕ್ರಮೇಣ ದರ್ಶನ್ ಮತ್ತು ಸುದೀಪ್ ಅವರ ಸ್ನೇಹದಲ್ಲಿ ಬಿರುಕು ಮೂಡಿತು. ಇದೀಗ, ಡಿ ಬಾಸ್ ಮತ್ತು ಪವರ್ ಸ್ಟಾರ್ ಕನ್ನಡ ಚಿತ್ರರಂಗದ ದಿಗ್ಗಜರು ಎಂಬ ಮಾತು ಕೇಳಿಬರುತ್ತಿದೆ. ಹೀಗೆಂದು ಈ ಇಬ್ಬರ ಜೊತೆ ನಟಿಸಿರುವ ಹಿರಿಯ ನಟರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.....

ನಾ ಕಂಡ ದಿಗ್ಗಜರು

ನಾ ಕಂಡ ದಿಗ್ಗಜರು

ಹಿರಿಯ ನಟ ಕೆಎಸ್ ಅಶ್ವಥ್‌ ಪುತ್ರ ಶಂಕರ್ ಅಶ್ವಥ್ ಅವರು ದರ್ಶನ್ ಮತ್ತು ಪುನೀತ್ ರಾಜ್ ಕುಮಾರ್ ಅವರನ್ನ 'ನಾ ಕಂಡ ದಿಗ್ಗಜರು' ಎಂದು ಹೇಳಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಬಲ್ಲಿ ಬರೆದುಕೊಂಡಿರುವ ಅವರು ''ನಾನು ಎಷ್ಟೋ ಜನರನ್ನ ನೋಡದೆ ಒಂದೆರಡು ಹಂತ ಹತ್ತಿದ್ರೆ ತಲೆನೇ ನಿಲ್ಲಲ್ಲಾ. ಈ ದಿಗ್ಗಜರು ಅಸಾಮಾನ್ಯ ಎತ್ತರಕ್ಕೆ ಬೆಳೆದರೂ ವಿನಯ, ವಿಶಾಲ ಹೃದಯವಂತಿಕೆ, ನನ್ನಂತಹ ಸಾಮಾನ್ಯರ ಹತ್ತಿರನೂ ಇವರು ತೋರುವ ನಡವಳಿಕೆ ಎಷ್ಟೋ ಜನರಿಗೆ ಪಾಠ' ಎಂದು ಹೊಗಳಿದ್ದಾರೆ.

ರಾಜಕುಮಾರ ಮತ್ತು ಯಜಮಾನ

ರಾಜಕುಮಾರ ಮತ್ತು ಯಜಮಾನ

ಪುನೀತ್ ರಾಜ್ ಕುಮಾರ್ ಮತ್ತು ದರ್ಶನ್ ಇಬ್ಬರು ಕನ್ನಡ ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟರು. ಅತಿ ಹೆಚ್ಚು ಸಂಭಾವನೆ, ಅತಿ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ಈ ಇಬ್ಬರು ಅಭಿಮಾನಿಗಳು ಅಂದ್ರೆ ಪಂಚಪ್ರಾಣ. ತಾನು ಬೆಳೆದು ತನ್ನವರನ್ನ ಬೆಳೆಸುವ ಗುಣ ಹೊಂದಿರುವ ಕಲಾವಿದರು. ಅದಕ್ಕೆ ಇಂಡಸ್ಟ್ರಿಯಲ್ಲಿ ಒಬ್ಬರನ್ನ ರಾಜಕುಮಾರ ಅಂದ್ರೆ ಇನ್ನೊಬ್ಬರನ್ನ ಯಜಮಾನ ಅಂತಾರೆ.

ಯುವರತ್ನ ಸಿನಿಮಾದಲ್ಲಿ ಶಂಕರ್.!

ಯುವರತ್ನ ಸಿನಿಮಾದಲ್ಲಿ ಶಂಕರ್.!

ದರ್ಶನ್ ಅವರ ಜೊತೆ ಯಜಮಾನ ಸಿನಿಮಾದಲ್ಲಿ ನಟಿಸಿದ್ದ ಶಂಕರ್ ಅಶ್ವಥ್‌, ಪುನೀತ್ ಅವರ ಜೊತೆ ಯುವರತ್ನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ, ಇಬ್ಬರ ವ್ಯಕ್ತಿತ್ವವನ್ನ ಬಹಳ ಹತ್ತಿರದಿಂದ ನೋಡಿದ ಹಿರಿಯ ನಟರು ಸ್ಟಾರ್ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪ್ಪು ಮತ್ತು ದರ್ಶನ್ ಸ್ನೇಹ

ಅಪ್ಪು ಮತ್ತು ದರ್ಶನ್ ಸ್ನೇಹ

ಹಾಗ್ನೋಡಿದ್ರೆ ದರ್ಶನ್ ಮತ್ತು ಪುನೀತ್ ರಾಜ್ ಕುಮಾರ್ ಸ್ನೇಹ ಕೂಡ ಚೆನ್ನಾಗಿದೆ. ಅಪ್ಪು ಅಭಿನಯದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಮಾತ್ರ ಮಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಬಬ್ರುವಾಹನ ಮತ್ತು ಅರ್ಜುನ ಪಾತ್ರದಲ್ಲಿ ಒಟ್ಟಿಗೆ ಪರ್ಫಾಮೆನ್ಸ್ ನೀಡಿದ್ದರು. ಅವರ ಚಿತ್ರಕ್ಕೆ ಇವರು ವಿಶ್ ಮಾಡುವುದು, ಇವರ ಚಿತ್ರಕ್ಕೆ ಅವರು ವಿಶ್ ಮಾಡುವುದು ನೋಡಬಹುದು.

More from Filmibeat

English summary
Kannada senior actor shankar ashwath said that 'Darshan and Puneeth rajkumar is a diggajaru of kannada industry .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X