ದರ್ಶನ್ ಜೊತೆ ರಾಘಣ್ಣ ಸೆಲ್ಫಿ: ಅಪರೂಪದ ಭೇಟಿ ಹಿಂದಿನ ಕಾರಣ.?

By Bharath Kumar

Recommended Video

ಶಿವಣ್ಣ, ರಾಘಣ್ಣನನ್ನು ಬೇಟಿ ಆದ ದರ್ಶನ್..ಯಾಕೆ..? | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಸೆಲ್ಫಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಪರೂಪದ ಭೇಟಿಯ ನೆನಪಿಗೆ ಈ ಫೋಟೋ ಕ್ಲಿಕ್ಕಿಸಿದ್ದು, ಸ್ವತಃ ಈ ಫೋಟೋವನ್ನ ರಾಘಣ್ಣ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

'ದರ್ಶನ್ ಅವರನ್ನ ಇಂದು ಭೇಟಿ ಮಾಡಿದ್ದು ಖುಷಿ ನೀಡಿದೆ' ಎಂದು ರಾಘಣ್ಣ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಚಾಲೆಂಜಿಂಗ್ ಸ್ಟಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಭೇಟಿಯಾಗಿದ್ದು ಎಲ್ಲಿ ಮತ್ತು ಯಾಕೆ ಎಂಬ ಕುತೂಹಲ ಅಭಿಮಾನಿಗಳದ್ದು.

ಅಂದ್ಹಾಗೆ, ಇಂದು ಸ್ಯಾಂಡಲ್ ವುಡ್ ಸ್ಟಾರ್ ನಟನ ಮಗನ ಸಿನಿಮಾ ಸೆಟ್ಟೇರಿದೆ. ಆ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಈ ಇಬ್ಬರು ದಿಗ್ಗಜರು ಭೇಟಿಯಾಗಿದ್ದರು. ಇವರಿಬ್ಬರು ಮಾತ್ರವಲ್ಲ, ಮತ್ತೊಬ್ಬ ಸೂಪರ್ ಸ್ಟಾರ್ ಕೂಡ ಇವರಿಗೆ ಸಾಥ್ ನೀಡಿದ್ದಾರೆ. ಯಾರದು.? ಮುಂದೆ ಓದಿ.....

ಶಶಿಕುಮಾರ್ ಮಗನ ಸಿನಿಮಾ

ಶಶಿಕುಮಾರ್ ಮಗನ ಸಿನಿಮಾ

ಕನ್ನಡದ ಖ್ಯಾತ ನಟ ಶಶಿಕುಮಾರ್ ಅವರ ಮಗ ಆದಿತ್ಯ ಸ್ಯಾಂಡಲ್ ವುಡ್ ಗೆ ಲಗ್ಗೆಯಿಡುತ್ತಿದ್ದು, ಚೊಚ್ಚಲ ಸಿನಿಮಾದ ಮುಹೂರ್ತ ಸಮಾರಂಭ ಇಂದು ಜರುಗಿತು. ಈ ಕಾರ್ಯಕ್ರಮಕ್ಕೆ 'ಡಿ ಬಾಸ್' ದರ್ಶನ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಅಲ್ಲಿ ತೆಗೆದುಕೊಂಡ ಫೋಟೋ ಇದು.

ಕ್ಲಾಪ್ ಮಾಡಿದ ದರ್ಶನ್ ಮತ್ತು ಶಿವಣ್ಣ

ಕ್ಲಾಪ್ ಮಾಡಿದ ದರ್ಶನ್ ಮತ್ತು ಶಿವಣ್ಣ

ಕೇವಲ ದರ್ಶನ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಮಾತ್ರವಲ್ಲ, ಹ್ಯಾಟ್ರಿಕ್ ಹೀರೋ, ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಕೂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಈ ಮೊದಲೇ ಹೇಳಿದಂತೆ ದರ್ಶನ್ ಮತ್ತು ಶಿವಣ್ಣ ಇಬ್ಬರು ಆದಿತ್ಯ ಅವರ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.

ಯೋಗಕ್ಷೇಮ ವಿಚಾರಿಸಿದ ನಟರು

ಯೋಗಕ್ಷೇಮ ವಿಚಾರಿಸಿದ ನಟರು

ಅಂದ್ಹಾಗೆ, ದರ್ಶನ್ ಮತ್ತು ರಾಘಣ್ಣ ಅಥವಾ ದರ್ಶನ್ ಮತ್ತು ಶಿವಣ್ಣ ಭೇಟಿಯಾಗೋದು ಅಪರೂಪ. ಇಂತಹ ಅಪರೂಪದಲ್ಲಿ ಭೇಟಿಯಲ್ಲಿ ಪರಸ್ಪರ ಯೋಗಕ್ಷೇಮ ವಿಚಾರಿಸಿದ ನಟರು ಕಾಣಿಸಿಕೊಂಡಿದ್ದು ಹೀಗೆ.

ಶಶಿಕುಮಾರ್ ಮಗನ ಮೊದಲ ಸಿನಿಮಾ

ಶಶಿಕುಮಾರ್ ಮಗನ ಮೊದಲ ಸಿನಿಮಾ

ಶಶಿಕುಮಾರ್ ಮಗನ ಆದಿತ್ಯ ಅಭಿನಯಿಸಲಿರುವ ಚಿತ್ರಕ್ಕೆ 'ಮೊಡವೆ' ಎಂದು ಹೆಸರಿಟ್ಟಿದ್ದು, ಅಪೂರ್ವ ನಾಯಕಿಯಾಗಿದ್ದಾರೆ. ಅಕ್ಟೋಬರ್ ನಲ್ಲಿ ಶೂಟಿಂಗ್ ಶುರುವಾಗಲಿದೆ. ಬೀದರ್, ರಾಯಚೂರು, ಬಾದಮಿ, ಹಂಪಿ, ಗುಲ್ಬರ್ಗ ಸೇರಿದಂತೆ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. 'ಮೊಡವೆ' ಸಿನಿಮಾವನ್ನು ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಚಿತ್ರವಾಗಿದೆ. ಬ್ರೌನ್ ಬುಲ್ ಸ್ಟೂಡಿಯೋಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಸಿನಿಮಾದಲ್ಲಿ ಇರಲಿದೆ.

More from Filmibeat

English summary
Sandalwood King Dr shiva rajkumar and Challenging Star darshan Clapped For The First Shot In New Comer's Modave movie Today Along With raghavendra rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X