'ಯಜಮಾನ' ದರ್ಶನ್ ಜೊತೆಗಿನ ಸೆಲ್ಫಿ ಹಂಚಿಕೊಂಡು ಸಂಭ್ರಮಿಸಿದ ರಶ್ಮಿಕಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬಹುನಿರೀಕ್ಷೆಯ ರಾಬರ್ಟ್ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ನಡುವೆ ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಡಿ ಬಾಸ್ ಜೊತೆಗಿನ ಸೆಲ್ಫಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

Recommended Video

ಯಜಮಾನನ ಜೊತೆ ಸೆಲ್ಫೀ ಶೇರ್ ಮಾಡಿ ಸಂಭ್ರಮಿಸಿದ ರಶ್ಮಿಕಾ | Darshan | Rashmika Mandanna

ರಶ್ಮಿಕಾ ಹೆಚ್ಚಾಗಿ ಕನ್ನಡ ಸಿನಿಮಾಗಳ ಬಗ್ಗೆ ಪೋಸ್ಟ್ ಗಳನ್ನು ಹಂಚಿಕೊಳ್ಳುವುದಿಲ್ಲ. ತನ್ನದೆ ಸಿನಿಮಾ ಪೊಗರು ಚಿತ್ರದ ಬಗ್ಗೆಯೂ ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಟ್ ಮಾಡಿಲ್ಲ. ಆದರೆ ಇದೀಗ ದರ್ಶನ್ ಜೊತೆಗಿನ ಪೋಟೋವನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಅಷ್ಟಕ್ಕು ಡಿ ಬಾಸ್ ಜೊತೆಗಿನ ಫೋಟೋ ಹಂಚಿಕೊಳ್ಳಲು ಕಾರಣವಾಗಿದ್ದು ಯಜಮಾನ ಸಿನಿಮಾದ 2 ವರ್ಷದ ಸಂಭ್ರಮಾಚರಣೆ. ಹೌದು, ದರ್ಶನ್ ನಟನೆಯ ಸೂಪರ್ ಹಿಟ್ ಯಜಮಾನ ಸಿನಿಮಾ ರಿಲೀಸ್ ಆಗಿ 2 ವರ್ಷಗಳಾಗಿದೆ. 2 ವರ್ಷದ ನೆನಪನ್ನು ರಶ್ಮಿಕಾ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

Darshan and Rashmika Mandanna starrer Yajamana Completes 2 years

ಚಿತ್ರದ ಮುಹೂರ್ತದ ಫೋಟೋ ಮತ್ತು ಚಿತ್ರೀಕರಣ ಸಮಯದಲ್ಲಿ ದರ್ಶನ್ ಜೊತೆ ಕ್ಲಿಕ್ಕಿಸಿಕೊಂಡ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪೋಟೋ ಜೊತೆಗೆ 'ಯಜಮಾನ ಸಿನಿಮಾಗೆ 2 ವರ್ಷ' ಎಂದು ಬರೆದುಕಂಡಿದ್ದಾರೆ. ದರ್ಶನ್, ತಾನ್ಯಾ ಹೋಪ್ ಸೇರಿದಂತೆ ಅನೇಕರಿಗೆ ಟ್ಯಾಗ್ ಮಾಡಿದ್ದಾರೆ.

ಅಂದಹಾಗೆ ಯಜಮಾನ ಸಿನಿಮಾ 2019 ಮಾರ್ಚ್ 1 ರಂದು ರಾಜ್ಯದಾದ್ಯಂತ ತೆರೆಗೆ ಬಂದಿದೆ. ಮೊದಲ ಬಾರಿಗೆ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಯಜಮಾನ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ.

ಚಿತ್ರದಲ್ಲಿ ತಾನ್ಯಾ ಹೋಪ್, ದೇವರಾಜ್, ರವಿ ಶಂಕರ್, ಧನಂಜಯ್ ಸೇರಿದಂತೆ ದೊಡ್ಡ ತಾರಾಬಳವೆ ಇತ್ತು. ಇದೀಗ 2 ವರ್ಷ ಪೂರೈಸಿರುವ ಸಂಭ್ರಮವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಚರಿಸುತ್ತಿದ್ದಾರೆ.

More from Filmibeat

English summary
Challenging star Darshan and Rashmika Mandanna starrer Yajamana Completes 2 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X