'ಬಿಲ್ ಗೇಟ್ಸ್'ರನ್ನು ಹೊಗಳಿದ ರವಿಚಂದ್ರನ್, ದರ್ಶನ್
ಕಾಮಿಡಿ ಸ್ಟಾರ್ ಚಿಕ್ಕಣ್ಣ ಈಗ 'ಬಿಲ್ ಗೆಟ್ಸ್' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಶಿಶಿರ್ ನಾಯಕರಾಗಿದ್ದಾರೆ. 'ಬಿಲ್ ಗೆಟ್ಸ್' ಚಿತ್ರ ಸದ್ಯ, ಬಿಡುಗಡೆಗೆ ಸಿದ್ಧವಾಗಿದೆ.
'ಬಿಲ್ ಗೆಟ್ಸ್' ಸಿನಿಮಾದ ಸಿಜಿ ವರ್ಕ್ ನೋಡಿರುವ ನಟ ರವಿಚಂದ್ರನ್ ಚಿತ್ರತಂಡದ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಇತ್ತ ನಟ ದರ್ಶನ್ ಸಹ ಸಿನಿಮಾದ ಟೀಸರ್ ನೋಡಿ ಇಷ್ಟ ಪಟ್ಟಿದ್ದಾರೆ. ಈ ರೀತಿ ಸೂಪರ್ ಸ್ಟಾರ್ ಗಳ ಬೆಂಬಲ ಸಿನಿಮಾಗೆ ಸಿಕ್ಕಿದೆ.
ಅಕ್ಷರಾ ಮತ್ತು ರೋಜಾ ಸಿನಿಮಾದ ನಾಯಕಿಯರಾಗಿದ್ದಾರೆ. 'ಮಜಾ ಟಾಕೀಸ್' ಕಾರ್ಯಕ್ರಮ ಹಾಗೂ 'ರಾಬರ್ಟ್' ಚಿತ್ರದ ಸಂಭಾಷಣೆಗಾರ ರಾಜಶೇಖರ್ ಈ ಸಿನಿಮಾದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕೆಲವು ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿರುವ ರಾಜಶೇಖರ್ ಇಲ್ಲಿ ಒಂದು ಮುಖ್ಯ ನಿರ್ವಹಿಸುತ್ತಿದ್ದಾರೆ.

ಶ್ರೀನಿವಾಸ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಉಳಿದಂತೆ, ಕುರಿ ಪ್ರತಾಪ್, ರಾಜಾಹುಲಿ ಗಿರಿ, ಬ್ಯಾಂಕ್ ಜರ್ನಾರ್ಧನ್, ವಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

'ಬಿಲ್ ಗೆಟ್ಸ್' ಸಿನಿಮಾ ಈಗಾಗಲೆ ಸೆನ್ಸಾರ್ ಪರೀಕ್ಷೆ ಮುಗಿಸಿದೆ. ಸಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











