ಅತ್ತ ಶಿಕ್ಷೆ ಆಗುವಂತೆ ಗೋಕರ್ಣದಲ್ಲಿ ರೇಣುಕಾಸ್ವಾಮಿ ಕುಟುಂಬ ಪಾರ್ಥನೆ; ಇತ್ತ ಪಾರಾಗಲು ದರ್ಶನ್ ಹೋಮ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಬೆಂಗಳೂರು ಪೊಲೀಸರು ಈ ಪ್ರಕರಣದಲ್ಲಿ ದರ್ಶನ್ ಬಂಧಿಸಿದಾಗ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ. ಈಗ ದರ್ಶನ್ ಕೊಲೆ ಪ್ರಕರಣದಿಂದ ಪೂರ್ಣ ಪ್ರಮಾಣದ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಬೆನ್ನಲ್ಲೇ 'ಡೆವಿಲ್' ಸಿನಿಮಾದ ಶೂಟಿಂಗ್‌ಗೂ ಹಾಜರಾಗಿದ್ದಾರೆ.
ಈ ಮಧ್ಯೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಈಗ ಗೋಕರ್ಣದವರೆಗೂ ತಲುಪಿದೆ. ಇತ್ತೀಚೆಗೆ ರೇಣುಕಾಸ್ವಾಮಿ ಕುಟುಂಬ ಗೋಕರ್ಣಕ್ಕೆ ತೆರಳಿತ್ತೆಂದು ವರದಿಯಾಗಿದೆ. ಗೋಕರ್ಣದಲ್ಲಿ ತನ್ನ ಮಗನನ್ನು ಹತ್ಯೆಗೈದವರೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ಕುಟುಂಬ ವಿಶೇಷ ಪೂಜೆಯನ್ನು ಸಲ್ಲಿಸಿದೆ ಈ ವೇಳೆ ರೇಣುಕಾಸ್ವಾಮಿ ತಂದೆ ಕಾಶಿನಾಥ ಗೌಡ, ಅವರ ಪತ್ನಿ, ಸೊಸೆ ಹಾಗೂ ಮೊಮ್ಮಗ ಈ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಎನ್ನಲಾಗಿದೆ.

ಇನ್ನೊಂದು ದರ್ಶನ್ ಕೂಡ ಗೋಕರ್ಣಕ್ಕೆ ಬಂದು ಗೌಪ್ಯವಾಗಿ ಹೋಮವನ್ನು ಮಾಡಿಸಿದ್ದಾರೆಂದು ವರದಿಯಾಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಪ್ರಕರಣಕ್ಕೆ ಗೋಕರ್ಣದಲ್ಲಿ ಮುಕ್ತಿ ಸಿಗುತ್ತಾ? ಗೋಕರ್ಣದಲ್ಲಿ ರೇಣುಕಾಸ್ವಾಮಿ ಕುಟುಂಬ ಹಾಗೂ ದರ್ಶನ್ ಯಾವೆಲ್ಲ ಪೂಜೆ ಮಾಡಿಸಿದ್ದಾರೆ? ಹರಿದಾಡುತ್ತಿರುವ ಸುದ್ದಿಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸದ್ಯಕ್ಕೆ ಮುಗಿಯುವುದಿಲ್ಲ ಅನ್ನೋದು ಗೊತ್ತಿರುವ ಸಂಗತಿ. ದರ್ಶನ್ ಪೂರ್ಣ ಪ್ರಮಾಣದ ಜಾಮೀನು ಪಡೆದು ಹೊರ ಬಂದಿದ್ದರೂ, ಈ ಪ್ರಕರಣ ಕೋರ್ಟ್‌ನಲ್ಲಿ ಇದೆ. ಒಂದು ಕಡೆ ಹೈ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮತ್ತೊಂದು ಕಡೆ ಬೆಂಗಳೂರು ಪೊಲೀಸರು ಹೈ ಕೋರ್ಟ್ ನೀಡಿದ ಜಾಮೀನು ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ದರ್ಶನ್‌ಗೆ ಜಾಮೀನ ಮೇಲೆ ಹೊರಗೆ ಇದ್ದರೂ ಸಂಕಷ್ಟ ತಪ್ಪಿದ್ದಲ್ಲ.

ಇನ್ನು ರೇಣುಕಾಸ್ವಾಮಿ ಕುಟುಂಬ ಇತ್ತೀಚೆಗೆ ಗೋಕರ್ಣದಲ್ಲಿ ಪ್ರತ್ಯಕ್ಷ ಆಗಿದೆ. ಮಗನ ಆತ್ಮಕ್ಕೆ ಮೋಕ್ಷ ಕೊಡುವಂತೆ ಇಡೀ ಕುಟುಂಬ ಪೂಜೆಯನ್ನು ಸಲ್ಲಿಸಿದೆ. ಇದೇ ವೇಳೆ ಮಗನ ಹತ್ಯೆಗೆ ಕಾರಣರಾದವರೆಲ್ಲರಿಗೂ ಶಿಕ್ಷೆಯಾಗಬೇಕು. ಸೊಸೆಗೆ ಸರ್ಕಾರಿ ಉದ್ಯೋಗ ಸಿಗಬೇಕು ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥ್ ಗೋಕರ್ಣದಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಕುಟುಂಬ ಬಂದು ವಿಶೇಷ ಪೂಜೆ ಸಲ್ಲಿಸಿದ ಬೆನ್ನಲ್ಲೇ ದರ್ಶನ್ ಕೂಡ ಗೌಪ್ಯವಾಗಿ ಗೋಕರ್ಣಗೆ ಬಂದಿದ್ದರು ಎನ್ನಲಾಗಿದೆ. ಕಳೆದ ಸೋಮವಾರ ಗೋಕರ್ಣಗೆ ಬಂದು ಅರ್ಚಕರ ಮನೆಯಲ್ಲಿ ದರ್ಶನ್ ಉಳಿದುಕೊಂಡಿದ್ದರು. ಅರ್ಚಕರ ಮುಂದೆ ತನಗೆ ಸಿಕ್ಕಿರುವ ಜಾಮೀನು ಮುಂದುವರೆಯಬೇಕು. ಹಾಗೇ ಈ ಪ್ರಕರಣದಿಂದ ಪಾರಾಗುವಂತೆ ಮಾಡುವಂತೆ ಅರ್ಚಕರಲ್ಲಿ ಬೇಡಿಕೊಂಡಿದ್ದಾರೆ. ಈ ವೇಳೆ ದರ್ಶನ್‌ಗೆ ಅರ್ಚಕರು ಧೈರ್ಯ ಹೇಳಿ ಕಳುಹಿಸಿದ್ದಾರೆ ಎಂದು ಉದಯವಾಣಿ ವರದಿ ಮಾಡಿದೆ. ಹೀಗಾಗಿ ರೇಣುಕಾಸ್ವಾಮಿ ಪ್ರಕರಣ ಗೋಕರ್ಣವರೆಗೂ ತಲುಪಿದ್ದು, ಮುಂದೆ ಇನ್ನು ಎಲ್ಲೆಲ್ಲಿಗೆ ಹೋಗುತ್ತೋ ಸದ್ಯಕ್ಕಂತೂ ಕುತೂಹಲ.
ಇತ್ತ ದರ್ಶನ್ ಕೂಡ ನಾಜೂಕಿನ ಹೆಜ್ಜೆ ಇಡುತ್ತಿದ್ದಾರೆ. ನಿಧಾನವಾಗಿ ಸಿನಿಮಾ ಕಡೆಗೆ ಮುಖ ಮಾಡುತ್ತಿದ್ದಾರೆ. ಇಷ್ಟು ದಿನ ಕಾದು ಇಂದಿನಿಂದ (ಮಾರ್ಚ್ 12) ಮೈಸೂರಿನಲ್ಲಿ ನಡೆಯುತ್ತಿರುವ 'ಡೆವಿಲ್' ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಆದರೆ, ಕೇವಲ ನಾಲ್ಕು ದಿನಗಳಿಗಷ್ಟೇ ಶೂಟಿಂಗ್ ನಡೆಯಲಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಹಂತದಲ್ಲಿ ಶೂಟಿಂಗ್ ನಡೆಯುತ್ತಿದೆ. ದರ್ಶನ್ ಜೈಲಿನಿಂದ ಬಂದ್ಮೇಲೆ ಇದೇ ಮೊದಲ ಬಾರಿಗೆ 'ಡೆವಿಲ್' ಸಿನಿಮಾ ಶೂಟಿಂಗ್ ಆರಂಭ ಆಗಿದ್ದು, ಸಿನಿಮಾ ಮಂದಿಗಂತೂ ಸಮಾಧಾನ ತಂದಿದೆ. ಇನ್ನು ಕೇಸ್ ವಿಚಾರದಲ್ಲಿ ದರ್ಶನ್ ಮುಂದಿನ ನಡೆಯೇನು ಅನ್ನೋದು ನೋಡಬೇಕಿದೆ.


Click it and Unblock the Notifications











