ದರ್ಶನ್, ಸುದೀಪ್, ರಕ್ಷಿತ್ ಮುಖಾಮುಖಿ : ಆಗಸ್ಟ್ ನಲ್ಲಿ ಬಾಕ್ಸ್ ಆಫೀಸ್ ವಾರ್

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸ್ಟಾರ್ ವಾರ್ ಗೆ ವೇದಿಕೆ ಸಿದ್ಧವಾಗಿದೆ. ಸ್ಯಾಂಡಲ್ ವುಡನ್ ನ ಮೂವರು ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ. ಅಚ್ಚರಿಕರ ಸಂಗತಿ ಅಂದ್ರೆ ಬಹು ನಿರೀಕ್ಷೆಯ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳು ಒಟ್ಟಿಗೆ ಎಂಟ್ರಿ ಕೊಡುತ್ತಿರುವುದು ಕನ್ನಡ ಚಿತ್ರಾಭಿಮಾನಿಗಳಿಗೆ ಹಬ್ಬ ಆದ್ರೆ, ಮತ್ತೊಂದೆಡೆ ಫ್ಯಾನ್ಸ್ ವಾರ್ ಗೂ ಕಾರಣವಾಗುವ ಸಾಧ್ಯತೆ ಇದೆ.

ಸ್ಟಾರ್ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದು ಸರ್ವೆ ಸಾಮಾನ್ಯ. ಆದ್ರೆ ಸುದೀಪ್ ಮತ್ತು ದರ್ಶನ್ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದು ಅಭಿಮಾನಿಗಳಿಗೆ ತಂಬಾನೆ ವಿಶೇಷ. ಇದ್ರ ಜೊತೆಗೀಗ ರಕ್ಷಿತ್ ಶೆಟ್ಟಿ ಕೂಡ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಈಗಾಗಲೆ 'ಕುರುಕ್ಷೇತ್ರ' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆದ್ರೆ 'ಪೈಲ್ವಾನ್' ಚಿತ್ರ ಕೂಡ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಇದರ ನಡುವೆ ಎರಡು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ 'ಅವನೆ ಶ್ರೀಮನ್ನಾರಾಯಣ' ಸಿನಿಮಾ ಕೂಡ ಆಗಸ್ಟ್ ನಲ್ಲೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಗಸ್ಟ್ ತಿಂಗಳ ಸಿನಿಮಾ ಹಬ್ಬದ ಬಗ್ಗೆ ಮುಂದೆ ಓದಿ..

ಆಗಸ್ಟ್ 9ಕ್ಕೆ ಕುರುಕ್ಷೇತ್ರ ರಿಲೀಸ್

ಆಗಸ್ಟ್ 9ಕ್ಕೆ ಕುರುಕ್ಷೇತ್ರ ರಿಲೀಸ್

ಬಹು ನಿರೀಕ್ಷೆಯ 'ಕುರುಕ್ಷೇತ್ರ' ಆಗಸ್ಟ್ 9ಕ್ಕೆ ತೆರೆಗೆ ಬರುತ್ತಿದೆ. ಈ ಬಗ್ಗೆ ನಿರ್ಮಾಪಕ ಮುನಿರತ್ನ ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ. ಯಾವುದೆ ಕಾರಣಕ್ಕು ಚಿತ್ರ ರಿಲೀಸ್ ಡೇಟನ್ನು ಬದಲಾಯಿಸುವ ಸಾಧ್ಯತೆ ಇಲ್ಲ ಎಂದು ಖಡಕ್ ಅಗಿಯೂ ಹೇಳಿದ್ದಾರೆ. ಹಾಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ಅಬ್ಬರ ಶುರುವಾಗುವುದು ಪಕ್ಕಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಕುರುಕ್ಷೇತ್ರ ಜೊತೆ ಪೈಲ್ವಾನ್ ಎಂಟ್ರಿ?

ಕುರುಕ್ಷೇತ್ರ ಜೊತೆ ಪೈಲ್ವಾನ್ ಎಂಟ್ರಿ?

'ಕುರುಕ್ಷೇತ್ರ' ರಿಲೀಸ್ ಗೂ ಒಂದು ದಿನ ಮುಂಚಿತವಾಗಿ ಅಂದ್ರೆ ಆಗಸ್ಟ್ 8ಕ್ಕೆ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರತಂಡ ಈ ಮೊದಲು ಪ್ಲಾನ್ ಮಾಡಿದ ಪ್ರಕಾರ 'ಪೈಲ್ವಾನ್' ಆಗಸ್ಟ್ 8ಕ್ಕೆ ರಿಲೀಸ್ ಗೆ ರೆಡಿಯಾಗುತ್ತಿದೆ. ಕೃಷ್ಣ ಸಾರಥ್ಯದಲ್ಲಿ ಮೂಡಿ ಬಂದಿರುವ ಪೈಲ್ವಾನ್ ನಲ್ಲಿ ಕಿಚ್ಚ ಮೊದಲ ಬಾರಿಗೆ ದೇಹದಂಡಿಸಿ ಕುಸ್ತಿ ಪಟುವಾಗಿ ಅಖಾಡದಲ್ಲಿ ತೊಡೆತಟ್ಟಿ ನಿಂತಿದ್ದಾರೆ. ಕಿಚ್ಚನ 'ಪೈಲ್ವಾನ್' ಅವತಾರ ನೋಡಲು ಅಭಿಮಾನಿಗಳು ನಿದ್ದೆಗೆಟ್ಟು ಕೂತಿದ್ದಾರೆ. ಮೂಲಗಳ ಪ್ರಕಾರ ಇದೆ ವರಮಹಾಲಕ್ಷ್ಮಿಗೆ ಪೈಲ್ವಾನ್ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆಯಂತೆ.

ವರಮಹಾಲಕ್ಷ್ಮಿಗೆ ರಕ್ಷಿತ್ ಎಂಟ್ರಿ

ವರಮಹಾಲಕ್ಷ್ಮಿಗೆ ರಕ್ಷಿತ್ ಎಂಟ್ರಿ

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ 'ಅವನೆ ಶ್ರೀಮನ್ನಾರಾಯಣ' ಸಿನಿಮಾ ಕೂಡ ಆಗಸ್ಟ್ ನಲ್ಲಿ ತೆರೆಗೆ ಬರುವುದಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಖಾರ್ಜುನಯ್ಯ ಅನೌನ್ಸ್ ಮಾಡಿದ್ದಾರೆ. ಆದ್ರಿನ್ನು ಚಿತ್ರದ ರಿಲೀಸ್ ಡೇಟ್ ಬಹಿರಂಗ ಪಡಿಸಿರಲಿಲ್ಲ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಮಾಡಿತ್ತು ಚಿತ್ರತಂಡ. ಆದ್ರೀಗ ಎರಡು ಬಿಗ್ ಸಿನಿಮಾಗಳು ಒಟ್ಟಿಗೆ ಎಂಟ್ರಿ ಕೊಡುವ ಸಾಧ್ಯತೆ ಇರುವುದರಿಂದ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಚಿತ್ರ ಆಗಸ್ಟ್ 23ಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಆಗಸ್ಟ್ ನಲ್ಲಿ ಸಿನಿಮಾ ಹಬ್ಬ

ಆಗಸ್ಟ್ ನಲ್ಲಿ ಸಿನಿಮಾ ಹಬ್ಬ

ಈ ವರ್ಷ ಆಗಸ್ಟ್ ತಿಂಗಳು ಚಿತ್ರಪ್ರಿಯರಿಗೆ ತುಂಬಾನೆ ವಿಶೇಷವಾದ ತಿಂಗಳು. ಸ್ಟಾರ್ ನಟರ ಬಹು ನಿರೀಕ್ಷೆಯ ಚಿತ್ರಗಳು ಒಟ್ಟೊಟ್ಟಿಗೆ ಎಂಟ್ರಿ ಕೊಡುತ್ತಿರುವುದು ಅಚ್ಚರಿಕರ ಸಂಗತಿ ಆದ್ರು ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬ. ವರಮಹಾಲಕ್ಷ್ಮಿಯ ಹಬ್ಬದಂದು ಚಿತ್ರ ರಿಲೀಸ್ ಮಾಡಲು ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಸದ್ಯ ಕುರುಕ್ಷೇತ್ರ ವರಮಹಾಲಕ್ಷ್ಮಿಗೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಪ್ಲಾನ್ ಪ್ರಕಾರ ಪೈಲ್ವಾನ್ ಮತ್ತು ಅವನೆ ಶ್ರೀಮನ್ನಾರಾಯಣ ಕೂಡ ವರಮಹಾಲಕ್ಷ್ಮಿಗೆ ಬಂದ್ರೆ ಲಕ್ಷ್ಮಿ ಯಾರಪಾಲಿಗೆ ಒಲಿಯಲಿದ್ದಾಳೆ ಎನ್ನುವುದು ಕುತೂಹಲ.

ಬಹುಭಾಷೆಯಲ್ಲಿ ತೆರೆ ಕಾಣ್ತಿವೆ 3 ಸಿನಿಮಾಗಳು

ಬಹುಭಾಷೆಯಲ್ಲಿ ತೆರೆ ಕಾಣ್ತಿವೆ 3 ಸಿನಿಮಾಗಳು

ಈ ಮೂರು ಬಹು ನಿರೀಕ್ಷಎಯ ಸಿನಿಮಾಗಳು ಬಹುಭಾಷೆಯಲ್ಲಿ ತೆರೆಗೆ ಬರುತ್ತಿವೆ. ಕುರುಕ್ಷೇತ್ರ 5 ಭಾಷೆಯಲ್ಲಿ ಎಟ್ರಿ ಕೊಡಲು ಸಜ್ಜಾಗಿದ್ರೆ, ಮತ್ತೊಂದೆಡೆ ರಕ್ಷಿತ್ ಶೆಟ್ಟಿ ಅಭಿನಯದ ಅವನೆ ಶ್ರೀಮನ್ನಾರಾಯಣ ಸಿನಿಮಾ ಕೂಡ ಪಂಚಭಾಷೆಯಲ್ಲಿ ತೆರೆಗೆ ಬರುತ್ತಿದೆ. ಇನ್ನು ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾ 8 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಬೇರ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿರುವುದು ಹೆಚ್ಚಾಗುತ್ತಿದೆ.

More from Filmibeat

English summary
Kannada actor Darshan, Sudeep and Rakshith Shetty movies are all set to release in August. Kurukshetra set to release on 9th August in Varamahalakshmi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X