»   » ಒಂದಾದ ಸುದೀಪ್-ದರ್ಶನ್ ಬಳಗದಿಂದ ಒಗ್ಗಟ್ಟಿನ ಮಂತ್ರ

ಒಂದಾದ ಸುದೀಪ್-ದರ್ಶನ್ ಬಳಗದಿಂದ ಒಗ್ಗಟ್ಟಿನ ಮಂತ್ರ

Posted By:
Subscribe to Filmibeat Kannada

ಸುದೀಪ್ ಮತ್ತು ದರ್ಶನ್ ಉಂಟಾದ ವೈಮನಸ್ಸಿನಿಂದ ಇಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ ಎನ್ನುವುದು ವಾಸ್ತವ. ಇವರಿಬ್ಬರ ಈ ಮುನಿಸಿನಿಂದ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಕೂಡ ಪರಸ್ಪರ ಬೇಸರಗೊಂಡಿದ್ದರು.

ಹೀಗಾಗಿ, ನಮ್ಮ ಬಾಸ್ ಬೇರೆ, ನಿಮ್ಮ ಬಾಸ್ ಬೇರೆ ಎಂಬ ವಾದ-ವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದವು. ಒಂದು ಹಂತಕ್ಕೆ ಪರಸ್ಪರ ನಟರನ್ನ ವಿರೋಧಿಸಿದ್ದವರು ಕೂಡ ಇದ್ದರು. ಆದ್ರೀಗ, ದರ್ಶನ್ ಅವರ ಬಗ್ಗೆ ಸುದೀಪ್ ಮಾಡಿರುವ ಟ್ವೀಟ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾ ಮಾಡಿದೆ.

ಇಬ್ಬರು ಅಭಿಮಾನಿಗಳು ಕೂಡ ಈ ಟ್ವೀಟ್ ನೋಡಿ ಬದಲಾಗಿದ್ದಾರೆ. ಇಷ್ಟು ದಿನದ ವೈಮನಸ್ಸನ್ನ ಮರೆಯೋಣ ಎನ್ನುತ್ತಿದ್ದಾರೆ. ಮುಂದೆ ಓದಿ.....

ಸುದೀಪ್ ಮಾತಿಗೆ ದರ್ಶನ್ ಫ್ಯಾನ್ಸ್ ಖುಷಿ

ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ' ಹಾಗೂ ದರ್ಶನ್ ಗೆ ಶುಭ ಕೋರಿರುವ ಸುದೀಪ್ ಗೆ, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸದಾ ಒಂದಾಗಿರಿ ಎಂದ ಅಭಿಮಾನಿ ಬಳಗ

ನೀವಿಬ್ಬರು ದೂರವಾದರೇ ಅದು ಸ್ಯಾಂಡಲ್ ವುಡ್ ಗೆ ನಷ್ಟ. ಇಬ್ಬರು ಒಂದಾಗಿರಿ ಆಗಲೇ ಕನ್ನಡ ಇಂಡಸ್ಟ್ರಿಗೂ ಒಳ್ಳೆಯದು ಎಂದು ಸುದೀಪ್ ಅಭಿಮಾನಿಗಳು ಹೇಳುತ್ತಿದ್ದಾರೆ.

ಸ್ನೇಹದ ಕಡಲಲ್ಲಿ ತೇಲುತ್ತಿದ್ದ ಕುಚ್ಚಿಕ್ಕೂ ಗೆಳೆಯರ 'ಕಿಚ್ಚಿ'ನ ಕಹಾನಿ

ಮತ್ತೆ ಒಂದೇ ವೇದಿಕೆಯಲ್ಲಿ ನೋಡ್ಬೇಕು

ಸುದೀಪ್ ಮತ್ತು ದರ್ಶನ್ ಇಬ್ಬರನ್ನ ಒಂದೇ ವೇದಿಕೆಯಲ್ಲಿ ನೋಡಿ ತುಂಬಾ ದಿನಗಳಾಯಿತು. ಈ ಇಬ್ಬರು ಸೂಪರ್ ಸ್ಟಾರ್ ಗಳನ್ನ ಒಂದೇ ವೇದಿಕೆಯಲ್ಲಿ ನೋಡ್ಬೇಕು ಎಂಬ ಆಶಯವನ್ನ ಅಭಿಮಾನಿ ಬಳಗ ಹೊಂದಿದೆ.

ದೋಸ್ತಿ ಅಂದ್ರೆ ದರ್ಶನ್-ಸುದೀಪ್

ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಸ್ನೇಹಿತರಲ್ಲಿ ನೀವಿಬ್ಬರು. ನಿಮ್ಮ ದೋಸ್ತಿ ಹೀಗೆ ಇರಬೇಕು. ದೋಸ್ತಿ ಅಂದ್ರೆ ಅದು ದರ್ಶನ್ ಮತ್ತು ಸುದೀಪ್ ಎನ್ನಬೇಕು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣನಂತೆ ಹಿಟ್ ಆಗುತ್ತೆ

ಅಂದು ದರ್ಶನ್ ಅಭಿನಯಿಸಿದ್ದ 'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಸುದೀಪ್ ಅವರ ದ್ವನಿ ನೀಡಿದ್ದರು. ಈಗ 'ಕುರುಕ್ಷೇತ್ರ'ಕ್ಕೆ ವಿಶ್ ಮಾಡುತ್ತಿದ್ದಾರೆ. ಹೀಗಾಗಿ, 'ಸಂಗೊಳ್ಳಿ ರಾಯಣ್ಣ' ಚಿತ್ರದಂತೆ ಈ ಚಿತ್ರವೂ ಸೂಪರ್ ಹಿಟ್ ಆಗುತ್ತೆ ಎನ್ನುತ್ತಿದ್ದಾರೆ ಅಭಿಮಾನಿಗಳು

ವಿರಸ ಮರೆತು ಒಂದಾಗಿ

ಸ್ನೇಹ ಅಂದ ಮೇಲೆ ವಿರಸ ಸಾಮಾನ್ಯ. ಈ ವಿರಸವನ್ನ ಮರೆತು ಒಂದಾಗಿ ಎಂಬ ಕಿವಿ ಮಾತನ್ನ ಇಬ್ಬರ ಅಭಿಮಾನಿಗಳು ಹೇಳುತ್ತಿದ್ದಾರೆ.

ಕುಚಿಕೂ ಗೆಳೆಯರು

ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ದರ್ಶನ್ ಮತ್ತು ಸುದೀಪ್ ಅವರು ಸ್ನೇಹ ಕನ್ನಡದಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದೆ. ಹೀಗಾಗಿ, ಇವರಿಬ್ಬರ ಫ್ರೆಂಡ್ ಷಿಪ್ ಹೀಗೆ ಇರಲಿ ಎನ್ನುವುದು ಕಿಚ್ಚ ಮತ್ತು ದರ್ಶನ್ ಫ್ಯಾನ್ಸ್ ಗಳು ಮಾತು.

ಸುದೀಪ್ ಮಾಡಿದ್ದ ಟ್ವೀಟ್

''ದುರ್ಯೋಧನ ಪಾತ್ರಕ್ಕೆ ದರ್ಶನ್ ಅವರು ಸೂಕ್ತ ಆಯ್ಕೆ. ಅವರು ಮಾತ್ರ ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ''ಕುರುಕ್ಷೇತ್ರ' ಚಿತ್ರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಬರಲಿದೆ''- ಸುದೀಪ್, ನಟ

'ಬಿಗ್' ಸುದ್ದಿ: ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

English summary
sudeep and darshan fans are very happy. becuse, kichcha Sudeep has taken his twitter account to appreciate Challenging Star Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada