ರಾಜ್-ವಿಷ್ಣು ಪರಿಸ್ಥಿತಿ ದಚ್ಚು-ಕಿಚ್ಚನ ವಿಷಯದಲ್ಲಿ ಮತ್ತೆ ಮರುಕಳಿಸದಿರಲಿ
ಡಾ ರಾಜ್ ಕುಮಾರ್ ಮತ್ತು ಡಾ ವಿಷ್ಣುವರ್ಧನ್....ಕನ್ನಡ ಚಿತ್ರರಂಗದ ಎರಡು ಕಣ್ಣುಗಳು. ನಿಜವಾದ ಧ್ರುವತಾರೆಯರು. ಗಂಧದಗುಡಿ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದ ರಾಜ್-ವಿಷ್ಣು ಮುಂದೆ ಯಾವ ಚಿತ್ರದಲ್ಲೂ ಒಟ್ಟಿಗೆ ನಟಿಸಿಲ್ಲ. ಇದು ಕನ್ನಡ ಚಿತ್ರರಂಗ ಪಡೆದುಕೊಂಡು ದೌರ್ಭಾಗ್ಯ.
ಇದಕ್ಕೆ ಕಾರಣ ಯಾರು ಎಂದು ನೋಡಿದ 'ಅಭಿಮಾನಿಗಳು' ಎನ್ನುವುದಕ್ಕೆ ಬೇಸರವಾಗುತ್ತೆ. ಹೌದು, ಗಂಧದಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ನಡೆದ ಅವಘಡದಿಂದ ವಿಷ್ಣುವರ್ಧನ್ ಮತ್ತು ರಾಜ್ ಅಭಿಮಾನಿಗಳಲ್ಲಿ ಸಂಘರ್ಷ ಉಂಟಾಗಿತ್ತು. ಆ ಸಂಘರ್ಷದ ಪರಿಣಾಮವಾಗಿ ಕೊನೆಯವರೆಗೂ ರಾಜ್-ವಿಷ್ಣು ಬೇರೆ ಬೇರೆಯಾಗಿಯೇ ಉಳಿಯಬೇಕಾಯಿತು.
ವೈಯಕ್ತಿಕವಾಗಿ ರಾಜ್ ಕುಮಾರ್-ವಿಷ್ಣುವರ್ಧನ್ ಸಂಬಂಧ ಚೆನ್ನಾಗಿಯೇ ಇತ್ತು. ಆದರೂ ಅಭಿಮಾನಿಗಳ ಕಾರಣಕ್ಕೆ ಒಟ್ಟಿಗೆ ಸಿನಿಮಾ ಮಾಡುವ ಮನಸ್ಸು ಮಾಡಲೇ ಇಲ್ಲ ಈ ಇಬ್ಬರು. ಇದೀಗ, ದರ್ಶನ್ ಮತ್ತು ಸುದೀಪ್ ವಿಚಾರದಲ್ಲೂ ಈ ಆತಂಕ ಕಾಡುತ್ತಿದೆ. ಮುಂದೆ ಓದಿ....

ಸಂಘರ್ಷದಿಂದ ಮತ್ತಷ್ಟು ದೂರ ದೂರ
ಪೈಲ್ವಾನ್ ಸಿನಿಮಾದ ಪೈರಸಿ ವಿವಾದ ಬಳಿಕ ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಗಳ ಸಂಘರ್ಷ ನೋಡುತ್ತಿದ್ದರೆ, ಇದು ಗಂಧದ ಗುಡಿ ಚಿತ್ರದ ವಿವಾದಂತೆ ಆಗುವ ಆತಂಕ ಕಾಡುತ್ತಿದೆ. ಗಂಧದ ಗುಡಿ ಘಟನೆ ಬಳಿಕ ಡಾ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಚಿತ್ರಗಳನ್ನ ಮಾಡದೆ ಹೇಗೆ ದೂರವಿದ್ದರೋ ಅದೇ ರೀತಿ ದರ್ಶನ್ ಮತ್ತು ಸುದೀಪ್ ದೂರವಾಗ್ತಾರೆ ಎಂಬ ನಿರಾಸೆ ಎದುರಾಗುತ್ತಿದೆ.

ಇಬ್ಬರಿಂದಲೇ ಇಂಡಸ್ಟ್ರಿ ಬೆಳೆಯುತ್ತಿದೆ
ದರ್ಶನ್ ಮತ್ತು ಸುದೀಪ್ ಇಬ್ಬರು ಕನ್ನಡ ಇಂಡಸ್ಟ್ರಿಯನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮಾರ್ಗದಲ್ಲಿದ್ದಾರೆ. ಇಬ್ಬರು ತಮ್ಮದೇ ಆದ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ. ಕನ್ನಡ ಪ್ರೇಕ್ಷಕರು ಒಟ್ಟಾಗಿ ಇಬ್ಬರನ್ನು ಪ್ರೋತ್ಸಾಹಿಸದಾಗ ಮಾತ್ರ ಒಳ್ಳೊಳ್ಳೆ ಸಿನಿಮಾಗಳನ್ನ ನೀಡಲು ಸಾಧ್ಯ.

ಒಟ್ಟಿಗೆ ಸಿನಿಮಾ ಮಾಡಲಿ ಎಂಬ ನಿರೀಕ್ಷೆ
ದರ್ಶನ್ ಮತ್ತು ಸುದೀಪ್ ಅವರ ವೈಯಕ್ತಿಕ ವಿಚಾರ ಏನೇ ಇರಬಹುದು. ಸದ್ಯಕ್ಕೆ ಇಬ್ಬರು ಅಭಿಮಾನಿಗಳು ಹಾವು-ಮುಂಗುಸಿ ರೀತಿ ಕಿತ್ತಾಡುತ್ತಿರಬಹುದು. ಆದರೂ, ಇವರಿಬ್ಬರು ಒಂದಾಗಲಿ. ಒಟ್ಟಿಗೆ ಸಿನಿಮಾ ಮಾಡಲಿ ಎಂಬ ಆಸೆಯನ್ನ ಹೊಂದಿರುವ ಅಭಿಮಾನಿಗಳಿದ್ದಾರೆ.

ರಾಜ್-ವಿಷ್ಣು ಸಿನಿಮಾ ಮಾಡಿಲ್ಲ ಎಂಬ ಕೊರಗಿದೆ
'ಗಂಧದಗುಡಿ' ಚಿತ್ರದ ಬಳಿಕ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಸಿನಿಮಾ ಮಾಡಿದ್ದರೆ, ಗಂಧದ ಗುಡಿ, ಒಡಹುಟ್ಟಿದವರು, ಸಹೋದರರ ಸವಾಲ್, ಸ್ನೇಹಿತರ ಸವಾಲ್ ರೀತಿಯಲ್ಲಿ ವಿಷ್ಣು ಮತ್ತು ರಾಜ್ ಅವರ ಚಿತ್ರಗಳು ಬರುತ್ತಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈ ನಿರಾಸೆ ಈಗಲೂ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಅಭಿಮಾನಿಗಳ ಕೈಯಲ್ಲಿದೆ ನಿರ್ಧಾರ
ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಸಿನಿಮಾ ಮಾಡಬೇಕಾ ಅಥವಾ ಡಾ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರು ಎದುರಿಸಿದ ಪರಿಸ್ಥಿತಿಯಂತೆ ಇಬ್ಬರು ಕೊನೆಯವರೆಗೂ ದೂರವಾಗಿಯೇ ಉಳಿಯಬೇಕೋ ಅಭಿಮಾನಿಗಳೇ ನಿರ್ಧರಿಸಬೇಕು.


Click it and Unblock the Notifications











