For Quick Alerts
  ALLOW NOTIFICATIONS  
  For Daily Alerts

  ಟ್ವೀಟ್ ಡಿಲೀಟ್ ಮಾಡಿದ ಸುದೀಪ್: ಭಯಬಿದ್ದು ಡಿಲೀಟ್ ಮಾಡಿದ್ದಾರೆ ಎಂದ ದರ್ಶನ್ ಫ್ಯಾನ್ಸ್

  By ಫಿಲ್ಮ್ ಡೆಸ್ಕ್
  |

  ಟ್ವೀಟ್ ಡಿಲೀಟ್ ಮಾಡಿದ ಸುದೀಪ್: ಭಯಬಿದ್ದು ಡಿಲೀಟ್ ಮಾಡಿದ್ದಾರೆ ಎಂದ ದರ್ಶನ್ ಫ್ಯಾನ್ಸ್

  ಈ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡ್ಕೊಳಿ ಕೊರೊನ ವಿರುದ್ಧ ಹೋರಾಡಿ | Puneeth Rajkumar | Aarogya Setu

  ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಕಾಳಗ ನಿನ್ನೆಮೊನ್ನೆಯದಲ್ಲ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಇಬ್ಬರ ಕಿತ್ತಾಟ ತಾರಕ್ಕೇರಿದ ಉದಾಹರಣೆಯು ಇದೆ.

  ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಇಬ್ಬರು ಸ್ಟಾರ್ ನಟರ ಅಭಿಮಾನಿಗಳೀಗ ಮತ್ತೆ ರೊಚ್ಚಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾಗಿದ್ದು, ಸುದೀಪ್ ಟ್ವೀಟ್. ಅಂದ್ಹಾಗೆ ಸುದೀಪ್ ಮಾಡಿರುವ ಟ್ವೀಟ್ ನಲ್ಲಿದೆ ಏನಿದೆ? ಟ್ವೀಟ್ ಮಾಡಿ ಕಿಚ್ಚ ಡಿಲೀಟ್ ಮಾಡಿದ್ದೇಕೆ? ಮುಂದೆ ಓದಿ...

  ನಿತ್ಯೋತ್ಸವ ಕವಿಗೆ ಸಂತಾಪ ಸೂಚಿಸಿ ಸುದೀಪ್ ಟ್ವೀಟ್

  ನಿತ್ಯೋತ್ಸವ ಕವಿಗೆ ಸಂತಾಪ ಸೂಚಿಸಿ ಸುದೀಪ್ ಟ್ವೀಟ್

  ನಿತ್ಯೋತ್ಸವ ಕವಿ ನಿಸಾರ್ ಅಹಮದ್ ನಿಧನಕ್ಕೆ ಸಾಕಷ್ಟು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸುದೀಪ್ ಕೂಡ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಕಿಚ್ಚ ಮಾಡಿರುವ ಟ್ವೀಟ್ ನಲ್ಲಿ "ನಿತ್ಯೋತ್ಸವ" ಪದ ತಪ್ಪಾಗಿತ್ತು. ಈ ತಪ್ಪನ್ನೆ ಬಳಸಿಕೊಂಡು ದರ್ಶನ್ ಅಭಿಮಾನಿಗಳು ಸುದೀಪ್ ಕಾಲೆಳೆಯಲು ಪ್ರಾರಂಭಿಸಿದ್ದಾರೆ.

  'ಕನ್ನಡ ಸರಿಯಾಗಿ ಬರೆ' ಎಂದ ದರ್ಶನ್ ಅಭಿಮಾನಿ

  'ಕನ್ನಡ ಸರಿಯಾಗಿ ಬರೆ' ಎಂದ ದರ್ಶನ್ ಅಭಿಮಾನಿ

  ಸುದೀಪ್ ಟ್ವೀಟ್ ಮಾಡುತ್ತಿದ್ದಂತೆ, ನಿತ್ಯೋತ್ಸವ ಪದ ತಪ್ಪಾಗಿರುವುದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ಸುದೀಪ್ ಮಾಡಿರುವ ಟ್ವೀಟ್ ಕೆಳಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದರು. ಡಿ ಬಾಸ್ ಅಭಿಮಾನಿಯೊಬ್ಬ "ನಿತ್ಯೋತ್ಸವ ಅದು ಮರಾಯ, ಕನ್ನಡ ಸರಿಯಾಗಿ ಬರೆ" ಎಂದು ಕಾಮೆಂಟ್ ಮಾಡಿದ್ದಾರೆ.

  ಟ್ವೀಟ್ ಡಿಲೀಟ್ ಮಾಡಿದ ಸುದೀಪ್

  ಟ್ವೀಟ್ ಡಿಲೀಟ್ ಮಾಡಿದ ಸುದೀಪ್

  "ನಿತ್ಯೋತ್ಸವ" ಪದ ತಪ್ಪಾಗಿ ಬರೆದ ಕಾರಣ ಕಿಚ್ಚ ಸುದೀಪ್ ಟ್ವೀಟ್ ಡಿಲೀಟ್ ಮಾಡಿ, ಮತ್ತೆ ಸರಿಯಾಗಿ ಬರೆದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕಿಚ್ಚ ತಪ್ಪಾದ ಪದವನ್ನು ತಿದ್ದಿ ಮತ್ತೆ ಟ್ವೀಟ್ಟ್ ಮಾಡುತ್ತಿದ್ದಂತೆ ಡಿ ಬಾಸ್ ಅಭಿಮಾನಿಗಳು ಸುದೀಪ್ ಗೆ ಕನ್ನಡ ಬರಲ್ಲ, ಮೊದಲು ಸರಿಯಾಗಿ ಕನ್ನಡ ಕಲಿಯಿರಿ ಎಂದು ಅಣಕಿಸುತ್ತಿದ್ದಾರೆ.

  ದರ್ಶನ್ ಅಭಿಮಾನಿಗಳಿಗೆ ಭಯಬಿದ್ದು ಟ್ವೀಟ್ ಡಿಲೀಟ್

  ದರ್ಶನ್ ಅಭಿಮಾನಿಗಳಿಗೆ ಭಯಬಿದ್ದು ಟ್ವೀಟ್ ಡಿಲೀಟ್

  ಸುದೀಪ್ ಟ್ವೀಟ್ ಡಿಲೀಟ್ ಮಾಡಿ ಮತ್ತೆ ಟ್ವೀಟ್ ಮಾಡುತ್ತಿದ್ದಂತೆ ದರ್ಶನ್ ಅಭಿಮಾನಿಗಳು "ನಮಗೆ ಭಯಬಿದ್ದು ಸುದೀಪ್ ಟ್ವೀಟ್ ಡಿಲೀಟ್ ಮಾಡಿದ್ದಾರೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಕೆ ಹಾಕುತ್ತಿದ್ದಾರೆ. 'ಡಿ ಬಾಸ್ ಅಭಿಮಾನಿಗಳಿಗೆ ತಲೆ ಬಾಗಿಸಿದ ಸುದೀಪ್', 'ಕಿಚ್ಚನನ್ನು ತಿದ್ದಿದ ಡಿ ಬಾಸ್ ಅಭಿಮಾನಿಗಳು' ಎಂದು ಟ್ವೀಟ್ ಮಾಡಿ ಕಿಚ್ಚನ ಅಭಿಮಾನಿಗಳನ್ನು ಕಿಚ್ಚಾಯಿಸುತ್ತಿದ್ದಾರೆ.

  ಸುದೀಪ್ ಮೊದಲು ಮಾಡಿರುವ ಟ್ವೀಟ್ ಹೀಗಿದೆ

  ಸುದೀಪ್ ಮೊದಲು ಮಾಡಿರುವ ಟ್ವೀಟ್ ಹೀಗಿದೆ

  "ನಿತ್ಯೊತ್ಸವ ತಾಯಿ ನಿತ್ಯೊತ್ಸವ ನಿನಗೆ ನಿತ್ಯೊತ್ಸವ.. ಕನ್ನಡ ತಾಯಿ ಪ್ರೀತಿ ಕಲಿಸಿದ ನಿಮ್ಮನ್ನ ಪಡೆದ ನಾವು ಕನ್ನಡಿಗರು ಪುಣ್ಯವಂತರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಸುದೀಪ್ ಮೊದಲು ಟ್ವೀಟ್ ಮಾಡಿದ್ದರು. ಆ ನಂತರ ಟ್ವೀಟ್ ಡಿಲೀಟ್ ಮಾಡಿ ನಿತ್ಯೋತ್ಸವ ಪದ ಸರಿಯಾಗಿ ಬರೆದು ಮತ್ತೆ ಟ್ವೀಟ್ ಮಾಡಿದ್ದಾರೆ.

  ಟ್ರೋಲ್ ಗಳು ಹರಿದಾಡುತ್ತಿವೆ

  ಟ್ರೋಲ್ ಗಳು ಹರಿದಾಡುತ್ತಿವೆ

  ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿಗಳು ತರಹೇವಾರಿ ಟ್ರೋಲ್ ಗಳನ್ನು ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ, ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಕಿತ್ತಾಟ ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ.

  English summary
  Kannada Actor Sudeep deleted the tweet over condolence to KS Niras Ahmed, Because the Kannada word was incorrect.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X