ಒಂದೇ ಹಾದಿಯಲ್ಲಿ ದರ್ಶನ್ ಹಾಗೂ ಸುದೀಪ್ ಹೆಜ್ಜೆ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಇಬ್ಬರು ಸ್ನೇಹಿತರಾಗಿಲ್ಲ. ಆದರೆ ಇಬ್ಬರೂ ಕೂಡ ಒಂದೇ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ಪ್ರಯಾಣಿಕರು ಎನ್ನುವುದು ಮಾತ್ರ ಅಭಿಮಾನಿಗಳಿಗೆ ತಿಳಿಯುತ್ತಿದೆ.
ಹುಸಿ ಮುನಿಸಿನಿಂದ ದೂರವಾಗಿರುವ ಇಬ್ಬರು ಗೆಳೆಯರು ಮಾಡುತ್ತಿರುವ ಕೆಲಸ ಮಾತ್ರ ಇಡೀ ರಾಜ್ಯದ ಜನರು ಮೆಚ್ಚುಗೆ ವ್ಯಕ್ತ ಪಡಿಸುವಂತದ್ದು ಎನ್ನುವುದು ಸತ್ಯವಾದ ಮಾತು. ಏನೇ ಕೆಲಸ ಮಾಡಿದರು ಇಬ್ಬರು ಒಂದೇ ಹಾದಿಯಲ್ಲಿ ಬಂದು ಸೇರುತ್ತಿದ್ದಾರೆ.
ಹಾಗಾದ್ರೆ ಸುದೀಪ್ ಹಾಗೂ ದರ್ಶನ್ ಮಾಡುತ್ತಿರುವ ಅಂತಹ ಕೆಲಸವಾದರೂ ಏನು? ಇಬ್ಬರು ಒಂದೇ ಹಾದಿಯಲ್ಲಿ ಹೆಜ್ಜೆ ಹಾಕಲು ಪ್ರಾರಂಭ ಮಾಡಿರುವುದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ

ದರ್ಶನ್-ಸುದೀಪ್ ರಿಂದ ಸಮಾಜಸೇವೆ
ದರ್ಶನ್ ಹಾಗೂ ಸುದೀಪ್ ಇಬ್ಬರು ಸಿನಿಮಾರಂಗದಲ್ಲಿ ಪ್ರಖ್ಯಾತಿ ಪಡೆದುಕೊಂಡವರು. ಇಬ್ಬರು ಯಾರಿಗೂ ಗೊತ್ತಾಗದ ರೀತಿಯಲ್ಲಿ ತಮ್ಮ ಕೈಲಾಗುವ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ದರ್ಶನ್ ಸಹಾಯ
ಮಹಾರಾಷ್ಟ್ರದ ಮಕ್ಕಳ ಶಿಕ್ಷಣಕ್ಕೆ ಉಪಯುಕ್ತವಾಗಲಿ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲಿಯ ಸರ್ಕಾರದ ಕನ್ನಡ ಮಾಧ್ಯಮ ಶಾಲೆಗೆ ಟ್ಯಾಬ್ ಗಳನ್ನ ಕೊಡಿಸಿದ್ದಾರೆ.

ಕಿಚ್ಚಾಭಿವೃದ್ದಿ ಶುರು ಮಾಡಿದ ಅಭಿಮಾನಿಗಳು
ಕಿಚ್ಚ ಸುದೀಪ್ ಅಭಿಮಾನಿಗಳು ಸಾಕಷ್ಟು ವರ್ಷಗಳಿಂದ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ಅನೇಕರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇತ್ತೀಚಿಗೆ ಸುದೀಪ್ ಅವರ ಮಹಿಳಾ ಅಭಿಮಾನಿಗಳು ಕಿಚ್ಚಾಭಿವೃದ್ದಿ ಹೆಸರಿನಲ್ಲಿ ಅನೇಕರಿಗೆ ಉಪಯುಕ್ತವಾಗುವಂತಹ ಕೆಲಸಗಳನ್ನ ಮಾಡುತ್ತಿದ್ದಾರೆ.

ನಿರಾಶ್ರಿತ ಮಕ್ಕಳ ಜೊತೆ ಹುಟ್ಟುಹಬ್ಬ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಮಾನಸ ಮನೋ ವಿಕಾಸ ಕೇಂದ್ರದಲ್ಲಿರುವ ಬುದ್ದಿಮಾಂದ್ಯ ಮಕ್ಕಳಿಗೆ ನೆರವು ನೀಡಿದ್ದಾರೆ.


Click it and Unblock the Notifications











