ನಟ ಸಾರ್ವಭೌಮನಿಗೆ ನಮನ ಸಲ್ಲಿಸಿದ ದರ್ಶನ್, ಸುದೀಪ್
ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಕನ್ನಡದ ಸಾಕಷ್ಟು ನಟ, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದಾರೆ. ಇನ್ನು ನಟ ದರ್ಶನ್ ಮತ್ತು ಸುದೀಪ್ ಕೂಡ ತಮ್ಮ ಟ್ವಿಟ್ಟರ್ ಖಾತೆಗಳ ಮೂಲಕ ಅಣ್ಣಾವ್ರಿಗೆ ನಮನ ಸಲ್ಲಿಸಿದ್ದಾರೆ.
ನಟ ದರ್ಶನ್ ''ನಲ್ಮೆಯ ನಟಸಾರ್ವಭೌಮ ಡಾ|| ರಾಜಣ್ಣ ನವರಿಗೆ ಹುಟ್ಟುಹಬ್ಬದ ದಿನದಂದು ಹೃದಯಪೂರ್ವಕ ನಮನಗಳು. ಅವರ ಚಿತ್ರಗಳು, ನಡೆ-ನುಡಿ, ಆದರ್ಶಗಳು ಸದಾ ಜೀವಂತ '' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸುದೀಪ್ ''ದೇಶದ ಶ್ರೇಷ್ಠ ನಟರಲ್ಲಿ ಒಬ್ಬರಾದ ಡಾ.ರಾಜ್ ಕುಮಾರ್ ಅವರು ನಮ್ಮನ್ನು ರಂಜಿಸಿದ್ದು ನಿಜಕ್ಕೂ ನಮ್ಮ ಅದೃಷ್ಟ. ಈ ನೆಲ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ'' ಎಂದು ಸುದೀಪ್ ಟ್ವೀಟಿಸಿದ್ದಾರೆ.
ಅಂದಹಾಗೆ, ಸುದೀಪ್, ದರ್ಶನ್ ಜೊತೆಗೆ ನಟ ಉಪೇಂದ್ರ, ಜಗ್ಗೇಶ್, ಧನಂಜಯ್, ರವಿಶಂಕರ್, ಶರಣ್, ರಾಗಿಣಿ ದ್ವಿವೇದಿ, ಶಾನ್ವಿ, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ಸಿನಿ ಗಣ್ಯರು ಟ್ವಿಟ್ಟರ್ ಖಾತೆಯಲ್ಲಿ ಶುಭಕೋರಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ರಕ್ತದಾನ ಹಾಗೂ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. 'ನಟ ಸಾರ್ವಭೌಮ'ನ ಜನ್ಮದಿನವನ್ನು ಅಭಿಮಾನಿಗಳು ಇಂದು ಅರ್ಥಪೂರ್ಣವಾಗಿ ಆಚರಿಸಿದರು.
ಡಾ.ರಾಜ್ ಕುಮಾರ್ ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಇನ್ನೂ ಅಜರಾಮರ ಅನ್ನೋದಕ್ಕೆ ಇದೇ ಸಾಕ್ಷಿ.


Click it and Unblock the Notifications











