ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಿಗೆ ಆಘಾತ ತಂದ ದಿನವಿದು

ಮಾರ್ಚ್ 5. ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿದೆ. ಅದರಲ್ಲೂ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ದಿನವನ್ನು ಎಂದು ಮರೆಯಲು ಸಾಧ್ಯವಿಲ್ಲ. ಬಹುಶಃ ಇದು ಚಾಲೆಂಜಿಂಗ್ ಸ್ಟಾರ್ ಮತ್ತು ಕಿಚ್ಚ ಸುದೀಪ್ ಪಾಲಿಗೆ ಇದು ಕರಾಳ ದಿನ ಎಂದರು ತಪ್ಪಾಗಲ್ಲ.

ಯಾಕಂದ್ರೆ, ಇದೇ ದಿನ ಸ್ಯಾಂಡಲ್ ವುಡ್ ಯುವ ದಿಗ್ಗಜರ ಸ್ನೇಹ ಮುರಿದುಬಿದ್ದಿತ್ತು. ಮಾರ್ಚ್ 5 ರಂದು ದರ್ಶನ್ ಮಾಡಿದ ಒಂದೇ ಒಂದು ಟ್ವೀಟ್ ಇಡೀ ಕನ್ನಡ ಚಿತ್ರರಂಗವನ್ನೇ ಒಂದು ಕ್ಷಣ ದಿಗ್ಬ್ರಮೆಗೊಳಿಸಿತ್ತು.

ದರ್ಶನ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕುವವರೆಗೂ ಇಬ್ಬರ ಸ್ನೇಹ ಚೆನ್ನಾಗಿದೆ, ಇಬ್ಬರು ಕುಚಿಕುಗಳಾಗಿದ್ದಾರೆ ಅಂತನೇ ಅಂದುಕೊಂಡಿದ್ದರು. ಆದರೆ ಒಂದು ಟ್ವೀಟ್ ಎಲ್ಲವನ್ನು ಬದಲಾಯಿತು. ಅಷ್ಟಕ್ಕೂ, ದಾಸ ದರ್ಶನ್ ಮಾಡಿದ್ದ ಟ್ವೀಟ್ ಏನು? ಈ ಟ್ವೀಟ್ ನಿಂದ ಏನೆಲ್ಲಾ ಬೆಳವಣಿಗೆ ಆಯ್ತು.?ಮುಂದೆ ಓದಿ...

ಮಾರ್ಚ್ 5, 2017

ಮಾರ್ಚ್ 5, 2017

ಕನ್ನಡ ಚಿತ್ರರಂಗದ ಕುಚಿಕು ಗೆಳೆಯರಂತಿದ್ದ ದರ್ಶನ್ ಮತ್ತು ಸುದೀಪ್ ಸ್ನೇಹ ಮಾರ್ಚ್ 5, 2017 ರ ರಾತ್ರಿ ಅಧಿಕೃತವಾಗಿ ಅಂತ್ಯವಾಗಿತ್ತು. ಸ್ವತಃ ದರ್ಶನ್ ಅವರೇ ಟ್ವೀಟ್ ಮೂಲಕ ತಮ್ಮಿಬ್ಬರ ಸ್ನೇಹಕ್ಕೆ ಕೊನೆ ಹಾಡಿದ್ದರು. ದರ್ಶನ್ ಅವರಿಂದ ಈ ಟ್ವೀಟ್ ಅನ್ನು ಯಾರೊಬ್ಬರು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ, ಅನಿರೀಕ್ಷಿತವಾಗಿ ಡಿ ಬಾಸ್ ಕಡೆಯಿಂದ ಬಂದ ಟ್ವೀಟ್ ಅಭಿಮಾನಿಗಳಿಗೆ ಆಘಾತ ನೀಡಿತ್ತು.

ನಾನು ಮತ್ತು ಸುದೀಪ್ ಸ್ನೇಹಿತರಲ್ಲ

ನಾನು ಮತ್ತು ಸುದೀಪ್ ಸ್ನೇಹಿತರಲ್ಲ

'ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ. ಇದು ಮುಗಿದು ಹೋದ ಕಥೆ' ಎಂದು ರಾತ್ರಿ 8.15 ಕ್ಕೆ ದರ್ಶನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿದ ದರ್ಶನ್ ಮತ್ತು ಕಿಚ್ಚನ ಅಭಿಮಾನಿಗಳಿಗೆ ಒಂದು ಕ್ಷಣ ಏನಾಗುತ್ತಿದೆ ಎನ್ನುವುದೇ ಗೊತ್ತಾಗದಂತೆ ಆಗಿತ್ತು.

ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಸಮಾರಂಭ

ಮುನಿಸಿಗೆ ಕಾರಣವಾಗಿತ್ತು ಸುದೀಪ್ ಮಾತು

ಮುನಿಸಿಗೆ ಕಾರಣವಾಗಿತ್ತು ಸುದೀಪ್ ಮಾತು

ನಂತರ ಸರಣಿ ಟ್ವೀಟ್ ಮಾಡಿದ್ದ ದರ್ಶನ್, ತಮ್ಮ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್' ಕುರಿತು ಸುದೀಪ್ ತಪ್ಪು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ದರ್ಶನ್ ಅವರ ಕೋಪಕ್ಕೆ ಕಾರಣವಾಗಿತ್ತು. 'ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್ ಅವರನ್ನು ನಾನೇ ಸೂಚಿಸಿದ್ದು' ಎಂದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಸುದೀಪ್ ಈ ಮಾತಿನಿಂದ ಅಸಮಾಧಾನಗೊಂಡ ದರ್ಶನ್ ಈ ಟ್ವೀಟ್ ಮಾಡಿದ್ದರು.

ಸ್ನೇಹ ಸಮರಕ್ಕೆ ಕಾರಣವಾದ 'ಮೆಜೆಸ್ಟಿಕ್'

ಸ್ನೇಹ ಸಮರಕ್ಕೆ ಕಾರಣವಾದ 'ಮೆಜೆಸ್ಟಿಕ್'

ದರ್ಶನ್ ಮತ್ತು ಸುದೀಪ್ ಅವರ ನಡುವಿನ ಸ್ನೇಹ ಸಮರ ಕಾರಣವಾಗಿದ್ದು, 'ಮೆಜೆಸ್ಟಿಕ್' ಚಿತ್ರಕ್ಕೆ ನಾಯಕನ ಆಯ್ಕೆ ವಿಚಾರ. ಆ ಚಿತ್ರದ ನಿರ್ಮಾಪಕ ಎಂ.ಜಿ ರಾಮಮೂರ್ತಿ, ನಿರ್ದೇಶಕ ಪಿ.ಎನ್ ಸತ್ಯ, ಭಾ ಮಾ ಹರೀಶ್ ಎಲ್ಲರೂ ವಾದ-ವಾಗ್ವಾದ ನಡೆಸಿದ್ದರು. ಅದು ಸತ್ಯ, ಇದು ಸತ್ಯ ಎಂದು ಒಬ್ಬರ ಪರ ಇನ್ನೊಬ್ಬರು ಸಮರ್ಥಿಸಿಕೊಂಡರು.

Recommended Video

ರಾಬರ್ಟ್ ಹಾಡಿನ ತೆಲುಗು ಗಾಯಕಿಗೆ ಕನ್ನಡಿಗರು ಫಿದಾ | Filmibeat Kannada
ಇಬ್ಬರ ಸ್ನೇಹ ಮುರಿದು 4 ವರ್ಷಗಳಾಗಿದೆ

ಇಬ್ಬರ ಸ್ನೇಹ ಮುರಿದು 4 ವರ್ಷಗಳಾಗಿದೆ

ಈ ಬೆಳವಣಿಗೆ ಬಳಿಕ ಬಳಿಕ ದರ್ಶನ್ ಮತ್ತು ಸುದೀಪ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರ ಸ್ನೇಹ ಮುರಿದು 4 ವರ್ಷಗಳೇ ಕಳೆದಿವೆ. ಈ 4 ವರ್ಷಗಳಲ್ಲಿ ಒಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದಿರಲಿ, ಒಬ್ಬರ ಹೆಸರನ್ನು ಮತ್ತೊಬ್ಬರು ಹೇಳುವುದಿಲ್ಲ ಅಷ್ಟರ ಮಟ್ಟಿಗೆ ವೈಮನಸ್ಸು ಬೆಳೆಸಿಕೊಂಡಿದ್ದಾರೆ.

More from Filmibeat

English summary
Actor Darshan and Sudeep's friendship broke up in March 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X