ಕೊಡಗು ಜನತೆಯ ನೆರವಿಗೆ ನಿಂತ 'ಡಿ-ಬಾಸ್' ಮತ್ತು 'ಕಿಚ್ಚ ಸುದೀಪ್'

By Bharath Kumar

Recommended Video

ಕೊಡಗು ಪರಿಸ್ಥಿತಿ ಬಗ್ಗೆ ಕಿಚ್ಚ-ದಚ್ಚು ಹೇಳಿದ್ದೇನು..? | Filmibeat Kannada

ಧಾರಾಕಾರ ಮಳೆ ಹಾಗೂ ಜಲಾಶಯಗಳು ಭರ್ತಿಯಾಗಿರುವುದರ ಪರಿಣಾಮ ಕೊಡಗು ಜಿಲ್ಲೆ ಸಂಪೂರ್ಣವಾಗಿ ಜಲಾವೃತವಾಗುತ್ತಿದೆ. ಮನೆಗಳು ಕುಸಿಯುತ್ತಿದೆ. ಗುಡ್ಡಗಳು ಉರುಳುತ್ತಿದೆ.

ಕೊಡಗಿನ ಜನರು ಮನೆ ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಜನರ ಪ್ರಾಣಹಾನಿ ಕೂಡ ಆಗಿದೆ. ಈಗ ಕೊಡಗಿನ ಜನರ ನೆರವಿಗೆ ಕರ್ನಾಟಕದ ವಿವಿಧ ಭಾಗದಲ್ಲಿರುವ ಜನರು ನೆರವಾಗುತ್ತಿದ್ದಾರೆ.

ಆಹಾರ, ಬಟ್ಟೆ, ಹಣಕಾಸು ಹೀಗೆ ಎಲ್ಲವನ್ನು ಸೇರಿಸಿ ಕೊಡಗಿನವರಿಗೆ ತಲುಪಿಸುವಂತಹ ಕೆಲಸವನ್ನ ಮಾಡುತ್ತಿದ್ದಾರೆ. ಇಂತಹ ಒಳ್ಳೆಯ ಕೆಲಸಕ್ಕೆ ಸ್ಯಾಂಡಲ್ ವುಡ್ ಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಕೈ ಜೋಡಿಸಿರುವುದು ನಿಜಕ್ಕೂ ವಿಶೇಷ. ಮುಂದೆ ಓದಿ.....

ಕೊಡಗಿನ ಜನತೆಗೆ ಬೆಂಬಲ ನೀಡಿದ ಸ್ಟಾರ್ಸ್

ಕೊಡಗಿನ ಜನತೆಗೆ ಬೆಂಬಲ ನೀಡಿದ ಸ್ಟಾರ್ಸ್

ಕೊಡಗು ಜಿಲ್ಲೆ ಪೂರ್ತಿ ಮಳೆಯಿಂದಾಗಿ ಜಲಾವೃತವಾಗಿದೆ. ದಿನನಿತ್ಯ ಜೀವನ ಕಷ್ಟಕರವಾಗಿದೆ. ಹೀಗಾಗಿ, ಅವರಿಗೆ ನೆರವಾಗಿ, ಸಹಾಯ ಮಾಡಿ ಎಂದು ತಮ್ಮ ಅಭಿಮಾನಿಗಳನ್ನ ಮನವಿ ಮಾಡಿಕೊಂಡಿದ್ದಾರೆ ಕನ್ನಡ ಸ್ಟಾರ್ ನಟರು. ದರ್ಶನ್ ಮತ್ತು ಸುದೀಪ್ ಇಬ್ಬರು ಕೊಡಗಿನ ಜನತೆಗೆ ನೆರವು ನೀಡಿ ಎಂದು ಟ್ವಿಟ್ಟರ್ ನಲ್ಲಿ ಕೇಳಿಕೊಂಡಿದ್ದಾರೆ.

ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ

ಡಿ ಬಾಸ್ ದರ್ಶನ್ ಮನವಿ

ಡಿ ಬಾಸ್ ದರ್ಶನ್ ಮನವಿ

''ಕೊಡಗಿನ ಎಲ್ಲ ಜನರಿಗೆ ನಮ್ಮ ಸಹಾಯ ಮತ್ತು ಬೆಂಬಲ ಅಗತ್ಯವಿದೆ. ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ನೆರವಾಗೋಣ. ನನ್ನ ಸಂಪೂರ್ಣ ಬೆಂಬಲ ಕೊಡಗಿನ ಜನರಿಗೆ ಇದೆ'' ಎಂದು ಟ್ವೀಟ್ ಮಾಡಿರುವ ದರ್ಶನ್ ಬೆಂಗಳೂರು ಮತ್ತು ಗೋಣಿಕೊಪ್ಪಲ್ ಪ್ರದೇಶದಲ್ಲಿರುವ ಸಹಾಯ ಕೇಂದ್ರಗಳ ವಿಳಾಸ ಹಂಚಿಕೊಂಡಿದ್ದಾರೆ. ಸಹಾಯ ಮಾಡಲು ಬಯಸುವವರು ದಯವಿಟ್ಟು ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಡಿಕೇರಿ ಮಳೆಯಲ್ಲಿ ಸಿಲುಕಿದವರ ಕರುಣಾಜನಕ ಕಥೆ

ಅಭಿಮಾನಿಗಳಲ್ಲಿ ಸುದೀಪ್ ಮನವಿ

ಅಭಿಮಾನಿಗಳಲ್ಲಿ ಸುದೀಪ್ ಮನವಿ

''ನನ್ನ ಎಲ್ಲ ಅಭಿಮಾನಿ ಸಂಘಟನೆಗಳಿಗೂ ನನ್ನದೊಂದು ಕೋರಿಕೆ. ಮಳೆಯಲ್ಲಿ ಸಿಲುಕಿರುವ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿ. ಇದು ನೀವು ನನಗೆ ನೀಡುವ ಬಹುದೊಡ್ಡ ಉಡುಗೊರೆ ಎಂದುಕೊಳ್ಳುತ್ತೇನೆ. ಅವರೆಲ್ಲರೂ ನಮ್ಮ ಜನ. ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಸರ್ಕಾರ ಕೂಡ ಈ ಬಗ್ಗೆ ಗಮನಿಸಿ ನೆರವು ನೀಡಿ'' ಎಂದು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.

ಸಂಘಟನೆಗಳು ಮನಸ್ಸು ಮಾಡಿದ್ರೆ ಸಾಧ್ಯ

ಸಂಘಟನೆಗಳು ಮನಸ್ಸು ಮಾಡಿದ್ರೆ ಸಾಧ್ಯ

ದರ್ಶನ್ ಮತ್ತು ಸುದೀಪ್ ಇಬ್ಬರು ಕರ್ನಾಟಕದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟರು. ಸ್ವತಃ ನಟರೇ ಮನವಿ ಮಾಡಿಕೊಂಡಿರುವುದರಿಂದ ಖಂಡಿತವಾಗಿಯೂ ಅವರ ಅಭಿಮಾನಿ ಸಂಘಟನೆಗಳು ಕೊಡಗಿನ ಜನತೆಗೆ ನೆರವಾಗಲಿದ್ದಾರೆ. ದರ್ಶನ್ ಮತ್ತು ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಫ್ಯಾನ್ಸ್ ''ನೀವು ಹೇಳಿದ ಪಕ್ಕಾ ಮಾಡ್ತೀವಿ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಯಾವ ನಟರ ಅಭಿಮಾನಿಗಳು ಎನ್ನದೇ ಚಿತ್ರರಂಗದ ಎಲ್ಲ ನಟರು ಅಭಿಮಾನಿಗಳು ಕೊಡಗು ಜನರ ನೆರವಿಗೆ ಬರಬೇಕಿದೆ.

More from Filmibeat

English summary
Kannada actor darshan and kiccha sudeep has taken their twitter account to support kodagu people. and both stars are requested to their fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X