ದರ್ಶನ್-ಸುದೀಪ್ ಮುಖಾಮುಖಿ: ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್.!

Recommended Video

ದರ್ಶನ್ vs ಸುದೀಪ್ | ಸದ್ಯದಲ್ಲೇ ಶುರುವಾಗಲಿದೆ ಚಿತ್ರಮಂದಿರದಲ್ಲಿ ಫೈಟ್

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸ್ಟಾರ್ ವಾರ್ ಗೆ ವೇದಿಕೆ ಸಿದ್ಧವಾಗುತ್ತಿದೆ. ಇಬ್ಬರು ಸ್ಟಾರ್ ನಟರ ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಎಂಟ್ರಿ ಕೊಡಲು ಸಜ್ಜಾಗಿವೆ. ಈ ಸ್ಟಾರ್ ವಾರ್ ಚಿತ್ರಮಂದಿರಲ್ಲಿ ಮಾತ್ರ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸಿನಿಮಾಗಳು ಒಂದೆ ದಿನ ಚಿತ್ರಮಂದಿರಕ್ಕೆ ಕಾಲಿಡುತ್ತಿವೆ ಎಂದು ಹೇಳಲಾಗುತ್ತಿದೆ.

ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದು ಸಾಮಾನ್ಯ ಆದ್ರೆ ದರ್ಶನ್ ಮತ್ತು ಸುದೀಪ್ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದು ಚಿತ್ರಪ್ರಿಯರಿಗೆ ತುಂಬಾನೆ ವಿಶೇಷ. ಒಂದು ವೇಳೆ ಚಿತ್ರತಂಡ ಪ್ಲಾನ್ ಮಾಡಿದ್ದಂತೆ ಇಬ್ಬರ ಸಿನಿಮಾಗಳು ಒಟ್ಟಿಗೆ ಬಂದ್ರೆ, ಮೊದಲ ಬಾರಿಗೆ ಈ ಮಾಜಿ ಗೆಳೆಯರು ಚಿತ್ರಮಂದಿರಲ್ಲಿ ಎದುರುಬದರಾಗಿ ಫೈಟ್ ಮಾಡಲಿದ್ದಾರೆ.

ಸುದೀಪ್ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಸಿನಿಮಾ ರಿಲೀಸ್ ಡೇಟ್ ಬಹಿರಂಗ ವಾಗಿದೆ. ಇದ್ರ ಜೊತೆಗೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ಸಿನಿಮಾ ಕೂಡ ಅಂದೇ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಹಾಗಾದ್ರೆ ಇಬ್ಬರು ಸ್ಟಾರ್ ನಟರು ಮುಖಾಮುಖಿಯಾಗುವ ಆ ದಿನ ಯಾವುದು? ಮುಂದೆ ಓದಿ..

ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಿದೆ ಪೈಲ್ವಾನ್

ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಿದೆ ಪೈಲ್ವಾನ್

ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಎಂಟ್ರಿ ಕೊಡುತ್ತಿದೆ. ಸಿನಿಮಾವನ್ನು ಆಗಸ್ಟ್ ನಲ್ಲಿ ತೆರೆಗೆ ತರುವ ಬಗ್ಗೆ ಬಹಿರಂಗ ಆಗಿದೆ. ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದಾರೆ. ಮೊದಲ ಬಾರಿಗೆ ದೇಹ ಹುರಿಗೊಳಿಸಿ ಖಡಕ್ 'ಪೈಲ್ವಾನ್' ಆಗಿ ಕಾಣಿಸಿಕೊಂಡಿರುವ ಕಿಚ್ಚ ಕುಸ್ತಿ ಅಖಾಡದಲ್ಲಿ ತೊಡೆತಟ್ಟಲಿದ್ದಾರೆ.

ಪೈಲ್ವಾನ್ ರಿಲೀಸ್ ದಿನವೆ ಕುರುಕ್ಷೇತ್ರ ಎಂಟ್ರಿ ಸಾದ್ಯತೆ

ಪೈಲ್ವಾನ್ ರಿಲೀಸ್ ದಿನವೆ ಕುರುಕ್ಷೇತ್ರ ಎಂಟ್ರಿ ಸಾದ್ಯತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾವನ್ನು ವರಮಾಹಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಡಲು ಪ್ಲಾನ್ ಮಾಡಿದೆಯಂತೆ ಚಿತ್ರತಂಡ. ಈಗಾಗಲೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿ ಇದೆ ಚಿತ್ರತಂಡ. ನಿರ್ದೇಶಕ ನಾಗಣ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕುರುಕ್ಷೇತ್ರ ಚಿತ್ರಕ್ಕೆ ನಿರ್ಮಾಪಕ ಮುನಿರತ್ನ ಬಂಡವಾಳ ಹೂಡಿದ್ದಾರೆ. ಸದ್ಯ ಚಿತ್ರತಂಡ ಅಂದುಕೊಂಡಂತೆ ಆದ್ರೆ 'ಕುರುಕ್ಷೇತ್ರ' ಆಗಸ್ಟ್ ನಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಪೈಲ್ವಾನ್ ಜೊತೆಗೆ ತೆರೆಗೆ ಬರಲಿದೆ.

8 ಭಾಷೆಯಲ್ಲಿ ಪೈಲ್ವಾನ್, 5 ಭಾಷೆಯಲ್ಲಿ ಕುರುಕ್ಷೇತ್ರ

8 ಭಾಷೆಯಲ್ಲಿ ಪೈಲ್ವಾನ್, 5 ಭಾಷೆಯಲ್ಲಿ ಕುರುಕ್ಷೇತ್ರ

ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ರೊಬ್ಬರಿ 8 ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಬೋಜ್ ಪುರಿ ಮತ್ತು ಮರಾಠಿ ಭಾಷೆಯಲ್ಲಿ 'ಪೈಲ್ವಾನ್' ಕಿಚ್ಚ ಅಬ್ಬರಿಸಲಿದ್ದಾರೆ. ಮತ್ತೊಂದೆಡೆ ಚಾಲೆಂಜ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ದಕ್ಷಿಣ ಭಾರತೀಯ ಭಾಷೆಯ ಜೊತೆಗೆ ಹಿಂದಿಯಲ್ಲೂ ದರ್ಶನ್ 'ಕುರುಕ್ಷೇತ್ರ' ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಬೇರೆ ಬೇರೆ ಭಾಷೆಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು ಚಿತ್ರತಂಡ.

ಕುರುಕ್ಷೇತ್ರ ಚಿತ್ರದ ಬಗ್ಗೆ ಮುನಿರತ್ನ ಹೇಳಿದ್ದೇನು?

ಕುರುಕ್ಷೇತ್ರ ಚಿತ್ರದ ಬಗ್ಗೆ ಮುನಿರತ್ನ ಹೇಳಿದ್ದೇನು?

'ಕುರುಕ್ಷೇತ್ರ' ಸಿನಿಮಾ ಇನ್ನು ರಿಲೀಸ್ ಆಗಿಲ್ಲ ಎಂದು ಡಿ ಬಾಸ್ ಅಭಿಮಾನಿಗಳು ಮುನಿರತ್ನ ಅಭಿಯಾನ ಶುರು ಮಾಡಿದ್ದಾರೆ. 'ಕುರುಕ್ಷೇತ್ರ' ರಿಲೀಸ್ ಬಗ್ಗೆ ಸ್ವತಹ ಮುನಿರತ್ನ ಅವರೆ ಹೇಳಿದ್ದಾರೆ ಸಿನಿಮಾ ಈಗಾಗಲೆ ನಾಲ್ಕು ಭಾಷೆಯಲ್ಲಿ ಸಿದ್ದವಾಗಿದೆಯಂತೆ. ಕನ್ನಡ ಭಾಷೆಯ ಸೆನ್ಸಾರ್ ಕೂಡ ಆಗಿದೆಯಂತೆ. ಇನ್ನು ಉಳಿದ ಮೂರು ಭಾಷೆಯ ಚಿತ್ರಗಳು ಮುಂದಿನ ವಾರ ಸೆನ್ಸಾರ್ ಆಗಲಿದೆ. ಆದ್ರೆ ಹಿಂದಿ ಮಾತ್ರ ಸ್ವಲ್ಪ ತಡವಾಗುವ ಸಾಧ್ಯತೆ ಇದೆಯಂತೆ. ಎಲ್ಲಾ ಭಾಷೆಯ ಪ್ರಿಂಟ್ ಸಂಪೂರ್ಣವಾಗಿ ಮುನಿರತ್ನ ಕೈ ಸೇರಿದ ಮೇಲೆಯೆ ಅಧಿಕೃತವಾಗಿ ಚಿತ್ರದ ರಿಲೀಸ್ ಡೇಟನ್ನು ಅನೌನ್ಸ್ ಮಾಡಲಿದ್ದಾರಂತೆ.

More from Filmibeat

English summary
Challenging star Darshan starrer Kurukshetra and Sudeep starrer Pailwan will be entering on same day in August. It will be big box office clash in sandalwood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X