twitter
    For Quick Alerts
    ALLOW NOTIFICATIONS  
    For Daily Alerts

    ರಾಮನ ಸೆಟ್‌ ಹಿಂದಿನ ರೋಚಕ ಕಹಾನಿ ಬಿಚ್ಚಿಟ್ಟ ರಾಬರ್ಟ್ ಮಾಸ್ಟರ್

    |

    ರಾಬರ್ಟ್ ಚಿತ್ರದಲ್ಲಿ ನಟ ದರ್ಶನ್ ಆಂಜನೇಯನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗೆಟಪ್ ಏಕೆ, ಏನಿದರ ಹಿಂದಿನ ಗುಟ್ಟು ಎಂದು ಸಿನಿಮಾದಲ್ಲಿ ನೋಡಬೇಕಿದೆ. ವಾಯಪುತ್ರನ ವೇಷದಲ್ಲಿ ನಟ ದರ್ಶನ್ ಅವರ ಲುಕ್ ಬಹಳ ಇಷ್ಟವಾಗುತ್ತದೆ. ಇದೇ ಗೆಟಪ್‌ನಲ್ಲಿ ಜೈ ಶ್ರೀರಾಮ್ ಎಂಬ ಹಾಡು ಸಹ ಮೂಡಿ ಬಂದಿದೆ.

    Recommended Video

    ಡಿ ಬಾಸ್ ನಮ್ಮ ಅಮ್ಮನ್ನ ಯಾವಾಗ್ಲು ಹಂಗೆ ಮಾತಾಡ್ಸೋದು | Tharun Sudhir | Roberrt | Filmibeat Kannada

    ಹಾಡೊಂದು ಮತ್ತು ಒಂದು ದೃಶ್ಯಕ್ಕಾಗಿ ದಾಸ ಆಂಜನೇಯನ ಗೆಟಪ್ ಹಾಕಿದ್ದು ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದೆ. ಇನ್ನು ಈ ಹಾಡಿನಲ್ಲಿ ಬರುವ ಸೆಟ್‌ ಬಗ್ಗೆ ಹೇಳಲೇಬೇಕು. ಇಡೀ ರಾಬರ್ಟ್ ಚಿತ್ರದಲ್ಲಿ ಬಹಳ ವಿಶೇಷವಾಗಿ ಗಮನ ಸೆಳೆಯುವುದು ರಾಮನ ಈ ಸೆಟ್ ಎಂದು ಸ್ವತಃ ದರ್ಶನ್ ಹಾಗೂ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ಸೆಟ್‌ ಹಾಕಿದ್ದು ಯಾರು? ಈ ಸೆಟ್ ಹಿಂದಿನ ಕಥೆ ಏನು? ಮುಂದೆ ಓದಿ...

    ಹೊಸ ನಿರ್ದೇಶಕರ ಕನಸು ಭಗ್ನಗೊಳಿಸಿದ ನಟ ದರ್ಶನ್ ನಿರ್ಧಾರ!ಹೊಸ ನಿರ್ದೇಶಕರ ಕನಸು ಭಗ್ನಗೊಳಿಸಿದ ನಟ ದರ್ಶನ್ ನಿರ್ಧಾರ!

    ಸೆಟ್ ನೋಡಿ ದರ್ಶನ್ ಅಚ್ಚರಿ

    ಸೆಟ್ ನೋಡಿ ದರ್ಶನ್ ಅಚ್ಚರಿ

    ರಾಮನ ಸೆಟ್‌ ನೋಡಿ ನಟ ದರ್ಶನ್ ಅವರು ಅಚ್ಚರಿಯಾದರಂತೆ. ''ನಿರ್ಮಾಪಕರೇ ಎಲ್ಲಿಂದ ತರ್ತೀರಾ ದುಡ್ಡು, ಬಾಡಿಗೆ ಕಟ್ಟುವುದು ಹೇಗೆ'' ಎಂದು ಕೇಳಿದ್ದರಂತೆ. ಅದಕ್ಕೆ ಉಮಾಪತಿ ಶ್ರೀನಿವಾಸ್ ತಲೆನೇ ಕೆಡಿಸಿಕೊಳ್ಳಬೇಡಿ ಬಾಸ್, ನಾನು ಮಾಡ್ತೇನೆ'' ಎಂದು ಧೈರ್ಯ ತೋರಿದರಂತೆ. ನಿರ್ಮಾಪಕರ ಈ ಹುಮ್ಮಸ್ಸಿನ ಬಗ್ಗೆ ದರ್ಶನ್ ಶ್ಲಾಘಿಸಿದಾರೆ.

    ಅತ್ಯಂತ ಸವಾಲಿನ ಸೆಟ್

    ಅತ್ಯಂತ ಸವಾಲಿನ ಸೆಟ್

    'ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಈ ಸೆಟ್ ಹಾಕಲಾಗಿತ್ತು. ಸುಮಾರು 5 ಸಾವಿನ ಜನರು ಈ ವೇಳೆ ಕೆಲಸ ಮಾಡಬೇಕಾಗಿತ್ತು' ಎಂದು ಉಮಾಪತಿ ತಿಳಿಸಿದರೆ, 'ರಾಮನ ಸೆಟ್ ಅತ್ಯಂತ ಸವಾಲು ಆಗಿತ್ತು' ಎಂದು ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. 'ಜನರನ್ನು ಕರೆದುಕೊಂಡು ಹೋಗಬೇಕು, ಸಾಮಗ್ರಿಗಳನ್ನು ಟ್ರಾನ್ಸ್‌ಫರ್ಟ್ ಮಾಡಬೇಕಿತ್ತು. ಆದರೆ, ಸಮಯವಕಾಶ ಕಡಿಮೆ ಇತ್ತು' ಎಂದು ತರುಣ್ ಅನುಭವ ಹಂಚಿಕೊಂಡಿದ್ದಾರೆ.

    ಶಂಕರ್‌ನಾಗ್ ಚಿತ್ರಮಂದಿರ, ಜೆಪಿ ನಗರದಲ್ಲಿ ದಾಖಲೆ ಬರೆದ ಡಿ ಬಾಸ್ ಕಟೌಟ್ಶಂಕರ್‌ನಾಗ್ ಚಿತ್ರಮಂದಿರ, ಜೆಪಿ ನಗರದಲ್ಲಿ ದಾಖಲೆ ಬರೆದ ಡಿ ಬಾಸ್ ಕಟೌಟ್

    ಆರು ದಿನಗಳು ರಾತ್ರಿ-ಹಗಲು ಕೆಲಸ

    ಆರು ದಿನಗಳು ರಾತ್ರಿ-ಹಗಲು ಕೆಲಸ

    ರಾಮನ ಸೆಟ್ ಹಾಕಲು ಸುಮಾರು ಆರು ದಿನಗಳ ಕಾಲ ರಾತ್ರಿ-ಹಗಲು ಶ್ರಮ ಹಾಕಲಾಗಿದೆ. ಮಳೆ ಬಂದರೂ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಚಿತ್ರದ ಬಹುಮುಖ್ಯ ದೃಶ್ಯಗಳು ಈ ಸೆಟ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಬಹುಶಃ ಇದು ಆ ದೇವರ ಆಶೀರ್ವಾದ ಎಂದು ನಿರ್ದೇಶಕ ತರುಣ್ ಸುಧೀರ್ ಖುಷಿ ವ್ಯಕ್ತಪಡಿಸಿದ್ದಾರೆ.

    ಮೋಹನ್ ಬಿ ಕೆರೆ ಕೆಲಸಕ್ಕೆ ಮೆಚ್ಚುಗೆ

    ಮೋಹನ್ ಬಿ ಕೆರೆ ಕೆಲಸಕ್ಕೆ ಮೆಚ್ಚುಗೆ

    ತರುಣ್ ಸುಧೀರ್ ಕಲ್ಪನೆಯನ್ನು ತೆರೆಮೇಲೆ ತರುವಲ್ಲಿ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಹಾಗೂ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಬರ್ಟ್ ಚಿತ್ರಕ್ಕೆ ಇವರಿಬ್ಬರು ಡೆಡಿಕೇಶನ್‌ಗೆ ದರ್ಶನ್, ನಿರ್ಮಾಪಕ ಹಾಗೂ ನಿರ್ದೇಶಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    English summary
    Challenging star Darshan and Tharun sudhir has appreciate to Mohan B Kere and Sudhakar S Raj.
    Tuesday, March 9, 2021, 18:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X