For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 9 ರ ಆಟ: ದರ್ಶನ್ ಗೆ ಎದುರು ಗೆಲ್ಲುತ್ತಾರಾ ವಿಜಯ್?

  |

  ಏಪ್ರಿಲ್ 9 ರಂದು ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರು ಎದುರುಬದುರಾಗಲಿದ್ದಾರೆ. ಅಂದಿನ ಆಟದಲ್ಲಿ ಜಯ ಯಾರಪಾಲಾಗಲಿದೆ ಎಂಬುದು ಕುತೂಹಲ.

  ಏಪ್ರಿಲ್ 9 ರಂದು ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆರೆಕಾಣಲಿದೆ. ಸ್ಯಾಂಡಲ್‌ವುಡ್‌ನ ಇತ್ತೀಚಿನ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಈ ಚಿತ್ರ ಬಿಡುಗಡೆ ಆಗಲಿರುವ ದಿನದಂದೇ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಸಿನಿಮಾ ಸಹ ಬಿಡುಗಡೆ ಆಗಲಿದೆ.

  ಏಪ್ರಿಲ್ 9 ರಂದು ವಿಜಯ್ ಅಭಿನಯದ 'ಮಾಸ್ಟರ್' ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಆಂಡ್ರಿಯಾ ಮತ್ತು ಮಾಳವಿಕ ಮೋಹನನ್ ನಟಿಸಿದ್ದಾರೆ. 'ಖೈದಿ' ಸಿನಿಮಾ ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ಈ ಸಿನಿಮಾವನ್ನೂ ನಿರ್ದೇಶಿಸಿದ್ದಾರೆ.

  ದರ್ಶನ್-ವಿಜಯ್ ಸಿನಿಮಾ ನಡುವೆ ಪೈಪೋಟಿ

  ದರ್ಶನ್-ವಿಜಯ್ ಸಿನಿಮಾ ನಡುವೆ ಪೈಪೋಟಿ

  ಇತ್ತೀಚಿನ ದಿನಗಳಲ್ಲಿ ತಮಿಳು, ತೆಲುಗು ಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳು ಸಿಗುತ್ತಿರುವುದರಿಂದ ದರ್ಶನ್ ಮತ್ತು ವಿಜಯ್ ಸಿನಿಮಾ ನಡುವೆ ಪೈಪೋಟಿ ನಡೆಯುವುದಂತೂ ಗ್ಯಾರೆಂಟಿ.

  ವಿಜಯ್‌ ಗೂ ಇದ್ದಾರೆ ಸಾಕಷ್ಟು ಅಭಿಮಾನಿಗಳು

  ವಿಜಯ್‌ ಗೂ ಇದ್ದಾರೆ ಸಾಕಷ್ಟು ಅಭಿಮಾನಿಗಳು

  ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳಿಗೆ ಸಿಗುವ ಓಪನಿಂಗ್ ಬೇರೆ ಭಾಷೆಯ ಸಿನಿಮಾಗಳಿಗೆ ದೊರಕುವುದು ಬಹುತೇಕ ಅಸಾಧ್ಯ. ಆದರೆ ವಿಜಯ್ ಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು ಇರುವುದಂತೂ ಸುಳ್ಳಲ್ಲ.

  ವಿಜಯ್ ಸಿನಿಮಾಗೆ ಹೆಚ್ಚಿನ ಚಿತ್ರಮಂದಿರಗಳು ಸಿಗುತ್ತಿವೆ

  ವಿಜಯ್ ಸಿನಿಮಾಗೆ ಹೆಚ್ಚಿನ ಚಿತ್ರಮಂದಿರಗಳು ಸಿಗುತ್ತಿವೆ

  ವಿಜಯ್ ಸಿನಿಮಾಗಳು ಕರ್ನಾಟಕದಲ್ಲಿ ಹೆಚ್ಚಿನ ಥಿಯೇಟರ್‌ಗಳಲ್ಲಿ ತೆರೆ ಕಾಣುತ್ತಿವೆ. ಆದರೆ ಈ ಬಾರಿ ಎದುರಿಗೆ ದರ್ಶನ್ ಸಿನಿಮಾ ಇರುವ ಕಾರಣ, ಚಿತ್ರಮಂದಿರದ ಸಮಸ್ಯೆ ಮತ್ತೆ ಎದುರಾಗುವುದು ಪಕ್ಕಾ.

  ತೆರೆಗೆ ಬರಲಿವೆ ಸಾಲು-ಸಾಲು ಚಿತ್ರಗಳು

  ತೆರೆಗೆ ಬರಲಿವೆ ಸಾಲು-ಸಾಲು ಚಿತ್ರಗಳು

  ಏಪ್ರಿಲ್ 3 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಏಪ್ರಿಲ್ ಒಂದತ್ತರಂದು ರಾಬರ್ಟ್ ತೆರೆಗೆ ದಾಂಗುಡಿ ಇಟ್ಟರೆ ನಂತರದ ಸರದಿ ಕೋಟಿಗೊಬ್ಬ 2. ಆ ನಂತರ ಧೃವ ಸರ್ಜಾ ನಟನೆಯ ಪೊಗರು ತೆರೆಗೆ ಅಪ್ಪಳಿಸಲಿದೆ. ಒಟ್ಟಿನಲ್ಲಿ ಏಪ್ರಿಲ್ ಕನ್ನಡ ಸಿನಿ ಪ್ರೇಮಿಗಳ ಪಾಲಿಗೆ ಹಬ್ಬ.

  English summary
  Darshan's Robert and Vijay's master movie releasing on April 9. Fan fight may happen on that day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X