ಚಾಲೆಂಜಿಂಗ್ ಸ್ಟಾರ್ ದರ್ಶನ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಚಾಲೆಂಜ್ ಸ್ಟಾರ್ ದರ್ಶನ್ ಸದ್ಯ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ದರ್ಶನ್ ಸದ್ಯ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಈ ನಡುವೆ ದರ್ಶನ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು 17 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ | DBoss | Darshan Anniversary

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗೆ ಮರೆಯಲಾಗದ ದಿನವಿದು. ಮೇ 19 ದರ್ಶನ್ ಮತ್ತು ವಿಜಯಲಕ್ಷ್ಮಿ ಅವರಿಗೆ ವಿಶೇಷವಾದ ದಿನ. ಕೊರೊನಾ ಲಕ್ ಡೌನ್ ನಿಂದ ಈ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಿಲ್ಲ. ಆದರೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ. ಮುಂದೆ ಓದಿ...

17ನೇ ವಾರ್ಷಿಕೋತ್ಸವದ ಸಂಭ್ರಮ

17ನೇ ವಾರ್ಷಿಕೋತ್ಸವದ ಸಂಭ್ರಮ

ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿ ಇಂದು 17ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 16 ವರ್ಷ ಕಂಪ್ಲೀಟ್ ಆಗಿದೆ. 2003ನೇ ಇಸವಿಯಲ್ಲಿ ಇಬ್ಬರು ಹಸೆಮಣೆ ಏರಿದ್ದಾರೆ.

ಇವರದ್ದು ಲವ್ ಮ್ಯಾರೇಜ್

ಇವರದ್ದು ಲವ್ ಮ್ಯಾರೇಜ್

ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಮನೆಯವರ ಸಮ್ಮುಖದಲ್ಲಿ ಹಸೆಮಣೆ ಏರಿದ ಈ ಜೋಡಿ ಸಾಕಷ್ಟು ಏಳು ಬೀಳು ಇವರ ಜೀವನದಲ್ಲಿ ನಡೆದಿದೆ.

ಧರ್ಮಸ್ಥಳದಲ್ಲಿ ಮದುವೆ

ಧರ್ಮಸ್ಥಳದಲ್ಲಿ ಮದುವೆ

ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. ಕುಟುಂಬಸ್ಥರು, ಚಿತ್ರತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ವಿಶೇಷ ಅಂದ್ರೆ ಮದುವೆಯಾದ ವರ್ಷವೇ ದರ್ಶನ್ ಅಭಿನಯದ 9 ಸಿನಿಮಾಗಳು ತೆರೆಕಂಡಿದ್ದವು.

ದರ್ಶನ್ ದಂಪತಿಯ ಪುತ್ರ ವನೀಶ್

ದರ್ಶನ್ ದಂಪತಿಯ ಪುತ್ರ ವನೀಶ್

ನಟ ದರ್ಶನ್ ದಂಪತಿಗೆ ವಿನೀಶ್ ಮಗ ಇದ್ದಾರೆ. ವಿನೀಶ್ ದರ್ಶನ್, ಮೊದಲ ಬಾರಿಗೆ 'ಐರಾವತ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಕಳದ ವರ್ಷ ತೆರೆಕಂಡ ಸೂಪರ್ ಹಿಟ್ 'ಯಜಮಾನ' ಚಿತ್ರದಲ್ಲಿಯೂ ವಿನೀಶ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿಮಾನಿಗಳಿಂದ ಶುಭಾಶಯ

ಅಭಿಮಾನಿಗಳಿಂದ ಶುಭಾಶಯ

ತಮ್ಮ ನೆಚ್ಚಿನ ನಟನ ವಿವಾಹ ಮಹೋತ್ಸವಕ್ಕೆ ಅಭಿಮಾನಿಗಳು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷಿ ಫೋಟೋಗಳನ್ನು ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಇಬ್ಬರ ವಿವಾಹ ಮಹೋತ್ಸವಕ್ಕೆ ನಮ್ಮ ಕಡೆಯಿಂದಲೂ ಮದುವೆ ವಾರ್ಷಿಕೋತ್ಸವದ ಶುಭಾಶಯ.

More from Filmibeat

English summary
Kannada Actor Darshan And Vijayalakshmi Celebrating 17th wedding Anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X