Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ನಟ ದರ್ಶನ್ ದಂಪತಿಯ ಪ್ರೇಮ ವಿವಾಹಕ್ಕೆ 22 ವರ್ಷ!
ಮೇ 19, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮರೆಯಲಾಗದ ದಿನ. ಅದೇ ರೀತಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಇದು ಮರೆಯಲಾಗದ ದಿನ. ಮೇ 19 ದರ್ಶನ್ ದಂಪತಿಗೆ ವಿಶೇಷ ದಿನ. ಯಾಕಂದ್ರೆ, ಇದು ಇವರಿಬ್ಬರು ಮದುವೆಯಾದ ಶುಭ ದಿನ.
ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಈ ನಡುವೆ ಸಾಕಷ್ಟು ಏಳು-ಬೀಳುಗಳು ಇವರ ಜೀವನದಲ್ಲಿ ನಡೆದಿದೆ. ಅದೇನೆ ಇರಲಿ, ಈ ಶುಭ ದಿನವನ್ನು ವಿಶೇಷವಾಗಿ ಆಚರಿಸಲಿದ್ದಾರೆ ದರ್ಶನ್ ಮತ್ತು ವಿಜಯಲಕ್ಷ್ಮಿ.
ಅದ್ಧೂರಿಯಾಗಿ
ನಡೆದ
ನಿಕ್ಕಿ
ಗಲ್ರಾನಿ,
ಆದಿ
ಪಿನಿಶೆಟ್ಟಿ
ಮದುವೆ!

ದರ್ಶನ್ ಮತ್ತು ವಿಜಯಲಕ್ಷ್ಮಿ ಈ ಶುಭ ದಿನಕ್ಕೆ ಅಭಿಮಾನಿಗಳು ಮತ್ತು ಸಿನಿಮಾ ಮಿತ್ರರಿಂದ ಶುಭಾಶಯದ ಮಹಾಪೂರವೇ ಹರಿದು ಬರ್ತಿದೆ. ಈ ಜೋಡಿಯ ಲವ್ ಸ್ಟೋರಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಮುಂದೆ ಓದಿ.

22ನೇ ವರ್ಷದ ವಿವಾಹ ವಾರ್ಷಿಕೋತ್ಸವ!
ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಮದುವೆಯಾಗಿ ಇಂದಿಗೆ (ಮೇ 19) 21 ವರ್ಷ ಕಂಪ್ಲೀಟ್ ಆಗಿದ್ದು, 22ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೇ 19, 2000ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್. ಹಾಗಾಗಿ ಈ ಜೋಡಿ, ಈ ಸಂಭ್ರಮವನ್ನು ಹೇಗೆ ಆಚರಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಮಲೈಕಾ
ಅರೋರ,
ಅರ್ಜುನ್
ಕಪೂರ್
ರಿಜಿಸ್ಟರ್
ಮದುವೆ
ಆಗ್ತಿದ್ದಾರಂತೆ!

ದರ್ಶನ್, ವಿಜಯಲಕ್ಷ್ಮಿರದ್ದು ಲವ್ ಮ್ಯಾರೇಜ್!
ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಪ್ರೇಮ ವಿವಾಹ. ಪರಸ್ಪರ ಪ್ರೀತಿಸಿದ ಈ ಜೋಡಿ, ಮನೆಯವರ ಒಪ್ಪಿಗೆಯ ಮೇರಿಗೆ ವಿವಾಹವಾಗಿದ್ದರು. ಮದುವೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. ಕುಟುಂಬಸ್ಥರು, ಸಿನಿಮಾ ತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.

ದರ್ಶನ್ ಕುಟುಂಬದ ಫೋಟೊ ವೈರಲ್!
ನಟ ದರ್ಶನ್ ದಂಪತಿಗೆ ವಿನೀಶ್ ಎಂದ ಒಬ್ಬ ಮಗ ಇದ್ದಾರೆ. ವಿನೀಶ್ ದರ್ಶನ್ 'ಐರಾವತ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿನೀಶ್ ಮತ್ತು ವಿಜಯಲಕ್ಷ್ಮಿಯ ಹೊಸ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿನೀಶ್ ಲುಕ್ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ವಿನೀಶ್ ಮುಂದಿನ ಹೀರೊ ಎಂದು ದರ್ಶನ್ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
'ರಂಗನಾಯಕಿ'
ಖ್ಯಾತಿಯ
ನಟಿ
ಪ್ರೇರಣಾ
ಕಂಬಂ
ಸೈಕಾಲಜಿ
ಟೀಚರ್
ಆಗಿದ್ದೇಗೆ..?

ಅಭಿಮಾನಿಗಳಿಂದ ಶುಭಾಶಯ
ತಮ್ಮ ನೆಚ್ಚಿನ ನಟನ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಹಲವು ಫೋಟೊಗಳನ್ನು ಹಂಚಿಕೊಂಡು, ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇನ್ನೂ ಇದೇ ವೇಳೆ ದರ್ಶನ್ ಮದುವೆ ಫೋಟೊ ವೈರಲ್ ಆಗಿದೆ.