For Quick Alerts
  ALLOW NOTIFICATIONS  
  For Daily Alerts

  ದರ್ಶನ್ ದಂಪತಿಯ ವಿವಾಹ ವಾರ್ಷಿಕೋತ್ಸವ: ಹೇಗಿದೆ ನೋಡಿ ಡಿ ಬಾಸ್ ಮದುವೆ ಆಮಂತ್ರಣ ಪತ್ರಿಕೆ?

  |

  ಚಾಲೆಂಜ್ ಸ್ಟಾರ್ ದರ್ಶನ್ ರಾಬರ್ಟ್ ಸಕ್ಸಸ್ ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಸಿನಿಮಾದಲ್ಲಿ ದರ್ಶನ್ ನಟಿಯಲಿದ್ದಾರೆ, ಇನ್ನೇನು ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವಷ್ಟೊತ್ತಿಗೆ ಕೊರೊನಾ ಹಾವಳಿ ಹೆಚ್ಚಾಗಿ, ಲಾಕ್ ಡೌನ್ ಮಾಡಲಾಯಿತು. ಸದ್ಯ ದರ್ಶನ್ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ.

  D Boss ವಿವಾಹ ವಾರ್ಷಿಕೋತ್ಸವದ ದಿನ ವೈರಲ್ ಆಯ್ತು ಮದುವೆ ಪತ್ರಿಕೆ | Filmibeat Kannada

  ಇಂದು (ಮೇ 19) ದರ್ಶನ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಮೇ 19 ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗೆ ಮರೆಯಲಾಗದ ದಿನ. 2003ರಲ್ಲಿ ದರ್ಶನ್ ವಿಜಯಲಕ್ಷ್ಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದರ್ಶನ್ ದಂಪತಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ. ಮದುವೆ ವಾರ್ಷಿಕೋತ್ಸವದ ವಿಶೇಷ ದಿನ ದರ್ಶನ್ ಅವರ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ದರ್ಶನ್ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ? ಮುಂದೆ ಓದಿ...

  18ನೇ ವರ್ಷದ ವಿವಾಹ ವಾರ್ಷಿಕೋತ್ಸವ

  18ನೇ ವರ್ಷದ ವಿವಾಹ ವಾರ್ಷಿಕೋತ್ಸವ

  ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿ ಇಂದು (ಮೇ 19) 18ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ದರ್ಶನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 17 ವರ್ಷಗಳು ಪೂರೈಸಿದೆ. ಮೇ 19, 2003ನೇ ಇಸವಿಯಲ್ಲಿ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್, ವಿಜಯಲಕ್ಷ್ಮಿ ಜೊತೆ ಹಸೆಮಣೆ ಏರಿದರು.

  ಇವರದ್ದು ಪ್ರೇಮ ವಿವಾಹ

  ಇವರದ್ದು ಪ್ರೇಮ ವಿವಾಹ

  ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಮನೆಯವರ ಒಪ್ಪಿಗೆ ಪಡೆದ ಕುಟುಂಬದವರ ಸಮ್ಮುಖದಲ್ಲಿ ಇಬ್ಬರು ಹಸೆಮಣೆ ಏರಿದ್ದರು. ತಮ್ಮ 17 ವರ್ಷದ ದಾಂಪತ್ಯ ಜೀವನದಲ್ಲಿ ಈ ಜೋಡಿ ಸಾಕಷ್ಟು ಏಳು ಬೀಳನ್ನು ಕಂಡಿದ್ದಾರೆ.

  ಧರ್ಮಸ್ಥಳದಲ್ಲಿ ಮದುವೆ

  ಧರ್ಮಸ್ಥಳದಲ್ಲಿ ಮದುವೆ

  ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ಪವಿತ್ರ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. ಕುಟುಂಬಸ್ಥರು, ಚಿತ್ರತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ದರ್ಶನ್ ದಂಪತಿಗೆ ವಿನೀಶ್ ಮಗನಿದ್ದಾನೆ. ವಿನೀಶ್ ಈಗಾಗಲೇ ಐರಾವತ ಮತ್ತು ಯಜಮಾನ ಸಿನಿಮಾದ ಚಿಕ್ಕ ದೃಶ್ಯದಲ್ಲಿ ನಟಿಸಿದ್ದಾನೆ.

  ವೈರಲ್ ಆಗಿದೆ ದರ್ಶನ್ ಮದುವೆ ಆಮಂತ್ರಣ ಪತ್ರಿಕೆ

  ವೈರಲ್ ಆಗಿದೆ ದರ್ಶನ್ ಮದುವೆ ಆಮಂತ್ರಣ ಪತ್ರಿಕೆ

  ದರ್ಶನ್ ಮದುವೆ ಆಮಂತ್ರಣ ಪತ್ರಿಕೆ ಹೇಗಿತ್ತು ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಸರಳವಾಗಿ ಆಮಂತ್ರಣ ಪತ್ರಿಕೆ ಮಾಡಿಸಲಾಗಿತ್ತು. ಇಂದು ವಿವಾಹ ವಾರ್ಷಿಕೋತ್ಸವದ ಈ ಸಮಯದಲ್ಲಿ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಬೆಳಗ್ಗೆ 9.10 ರಿಂದ 9.50ರ ಮುಹೂರ್ತದಲ್ಲಿ ಮದುವೆ

  ಬೆಳಗ್ಗೆ 9.10 ರಿಂದ 9.50ರ ಮುಹೂರ್ತದಲ್ಲಿ ಮದುವೆ

  ಬೆಳಗ್ಗೆ 9.10ರಿಂದ 9.50ರ ವರೆಗಿನ ಮಿಥುನ ಲಗ್ನದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಧರ್ಮಸ್ಥಳದ ವಸಂತ್ ಮಹಲ್ ನಲ್ಲಿ ಇವರ ಮದುವೆ ನೆರವಾಗಿದೆ. 17 ವರ್ಷಗಳನ್ನು ಪೂರೈಸಿ 18 ವರ್ಷದ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

  English summary
  Kannada Actor Darshan And Vijayalakshmi Celebrating 18th wedding Anniversary. Here is the Darshan's wedding invitation card.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X