ಪವಿತ್ರಾ ಗೌಡ-ವಿಜಯಲಕ್ಷ್ಮಿ ವಿವಾದದ ಬಳಿಕ ಮತ್ತೊಂದು ಫೋಟೊ ವೈರಲ್; ಏನಿದು ಫೋಟೊ ಕಹಾನಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋದಲ್ಲಿ, ಕೂತಲ್ಲಿ, ಎದ್ದಲ್ಲಿ ವಿವಾದಗಳು ಅವರನ್ನು ಸುತ್ತಿಕೊಳ್ಳುತ್ತಿವೆ. ಬೇಡ ಅಂತ ಅದೆಷ್ಟೇ ಜಾಗರೂಕರಾಗಿದ್ದರೂ, ವಿವಾದಗಳು ಮಾತ್ರ ಅವರನ್ನು ಬಿಟ್ಟು ಹೋಗುತ್ತಿಲ್ಲ. ಕೆಲವು ದಿನಗಳ ಹಿಂದಷ್ಟೇ ಅವರ ಮನೆಯ ಕೌಟುಂಬಿಕ ವಿಷಯ ಮತ್ತೆ ಬೀದಿಗೆ ಬಂದಿತ್ತು. ಅದು ತಣ್ಣಗಾಗುತ್ತಲೇ ಮತ್ತೊಂದು ಫೋಟೊವನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
ನಟಿ ಪವಿತ್ರಾ ಗೌಡ ತಮ್ಮ ಹಾಗೂ ದರ್ಶನ್ ಅವರ ಫೋಟೊಗಳನ್ನು ಹಂಚಿಕೊಂಡಿದ್ದರು. ತಮ್ಮಿಬ್ಬರ ಸಂಬಂಧಕ್ಕೆ 10 ವರ್ಷ ಅಂತ ಕೂಡ ಹೇಳಿಕೊಂಡಿದ್ದರು. ಒಂದು ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ತಿರುಗಿಬಿದ್ದಿದ್ದರು. ಅಲ್ಲಿಂದ ಇಬ್ಬರ ನಡುವೆ ಸೋಶಿಯಲ್ ಮೀಡಿಯಾಗಳಲ್ಲೇ ಪೋಸ್ಟ್ ವಾರ್ ನಡೆದಿತ್ತು.

ಒಂದಿಷ್ಟು ದಿನ ಟಕ್ಕರ್ ಕೊಡುವ ಕೆಲಸ ನಡೆಯುತ್ತಿದ್ದಂತೆ ಇತ್ತ ಪವಿತ್ರಾ ಗೌಡ. ಅತ್ತ ವಿಜಯಲಕ್ಷ್ಮಿ ಇಬ್ಬರೂ ಸೈಲೆಂಟ್ ಆಗಿದ್ದರು. ಪವಿತ್ರಾ ಗೌಡ ಆಗಾಗ ತಮ್ಮ ಫೋಟೊಗಳನ್ನು, ಕೆಲವು ತಮ್ಮ ಕೆಲಸಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರಷ್ಟೇ. ಆದರೆ, ವಿಜಯಲಕ್ಷ್ಮಿ ಮಾತ್ರ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿಲ್ಲ.
ಇತ್ತೀಚೆಗೆ ಹೇರ್‌ಸ್ಟೈಲಿಷ್ಟ್ ಒಬ್ಬರ ಮದುವೆಗೆ ಹೋಗಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಆಗಲೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆ ಫೋಟೊಗಳನ್ನು ಶೇರ್ ಮಾಡಿಕೊಂಡಿರಲಿಲ್ಲ. ಆದ್ರೀಗ ವಿಜಯಲಕ್ಷ್ಮಿ ಹಾಗೂ ಆಪ್ತರು ದರ್ಶನ್ ಜೊತೆಗಿರುವ ಫೋಟೊವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಸಲಿಗೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಫೋಟೊದಲ್ಲಿ ವಿಜಯಲಕ್ಷ್ಮಿ ಖುಷಿ ಖುಷಿಯಾಗಿದ್ದಾರೆ. ಎಲ್ಲಾ ಮರೆತು ಆರಾಮಾಗಿದ್ದಾರಾ? ಇಂತಹದ್ದೊಂದು ಪ್ರಶ್ನೆಗೆ ಈ ಫೋಟೊ ಉತ್ತರ ಇದೇನಾ? ಇದು ದರ್ಶನ್ ಕೆಲವು ಅಭಿಮಾನಿಗಳಿಗೆ ಕುತೂಹಲ. ಆದರೆ, ಈ ಫೋಟೊ ಈ ಎಲ್ಲಾ ಗಲಾಟೆ ಆದ ಮೇಲೆ ತೆಗೆದಿದ್ದಾ? ಅಥವಾ ಬೇರೆ ಸಮಯದಲ್ಲಿ ತೆಗೆದಿದ್ದನ್ನು ಈಗ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರಾ? ಅನ್ನೋದು ಕ್ಲಾರಿಟಿ ಇಲ್ಲ.
ದರ್ಶನ್ ಅವರ ಕೆಲವು ಫ್ಯಾನ್ ಪೇಜ್‌ಗಳು ಈ ಫೋಟೊವನ್ನು ಹಂಚಿಕೊಂಡಿವೆ. ಜೊತೆಗೆ "ಅಣ್ಣಾ ಅತ್ತಿಗೆ ಯಾರ ದೃಷ್ಟಿಯೂ ಬೀಳದೆ ಇರ್ಲಿ" ಅಂತ ಫೋಟೊ ಜೊತೆಗೆ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಫೋಟೊದಲ್ಲಿರುವ ಉಳಿದ ಇಬ್ಬರು ಯಾರು ಅನ್ನೋ ಮಾಹಿತಿ ಕೂಡ ಇಲ್ಲ. ಆದರೆ, ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಹ್ಯಾಪಿಯಾಗಿರುವ ಫೋಟೊ ಮಾತ್ರ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ದರ್ಶನ್ ಹಂಪಿ ಉತ್ಸವದಲ್ಲಿ ಕಾಣಿಸಿಕೊಂಡಿದ್ದರು. ವೇದಿಕೆ ಮೇಲೆ ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್‌ರನ್ನು ಹಾಡಿ ಹೊಗಳಿದ್ದರು. ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. ಅದು ಬಿಟ್ಟರೆ, 'ಕಾಟೇರ' ಸಿನಿಮಾದ ಮೆಗಾ ಯಶಸ್ಸಿನ ಖುಷಿಯಲ್ಲಿರೋ ದರ್ಶನ್ 'ಡೆವಿಲ್'ಗೆ ತಯಾರಿ ನಡೆಸಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.


Click it and Unblock the Notifications











