ವೈರಲ್ ವಿಡಿಯೋ: ಮಗನ ಅಭಿನಯ ಕಂಡು ದರ್ಶನ್ ದಂಪತಿ ಸಂತಸ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಚಿತ್ರೀಕರಣದ ಸೆಟ್ ನಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ದರ್ಶನ್ ಅಭಿನಯದ ಯಜಮಾನ ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು ವಿಜಯಲಕ್ಷ್ಮಿ.

ದರ್ಶನ್ ದಂಪತಿಯನ್ನು ಒಟ್ಟಿಗೆ ನೋಡಿ ಕಣ್ತುಂಬಿಕೊಂಡ ಡಿ ಬಾಸ್ ಅಭಿಮಾನಿಗಳು ಸಹ ಫುಲ್ ಖುಷಿಯಾಗಿದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ಬಹಳ ವಿರಳ. ಹಾಗಾಗಿ ದರ್ಶನ್ ದಂಪತಿ ಒಟ್ಟಿಗೆ ದರ್ಶನ ನೀಡಿದ್ರೆ ಸಾಕು ಅಭಿಮಾನಿಗಳಿಗೆ ದೊಡ್ಡ ಹಬ್ಬ.

ಯಜಮಾನ ಚಿತ್ರೀಕರಣ ಸೆಟ್ ಗೆ ವಿಜಯಲಕ್ಷ್ಮಿ ಆಗಾಗ ಭೇಟಿ ನೀಡುತ್ತಿದ್ದ ಕಾರಣ ಮಗ ವಿನೀಶ್ ಗಾಗಿ. ಚಿತ್ರದಲ್ಲಿ ಮಗ ವಿನೀಶ್ ಸಹ ಕಾಣಿಸಿಕೊಂಡ ಕಾರಣ ವಿಜಯಲಕ್ಷ್ಮಿ ಹೆಚ್ಚಾಗಿ ಯಜಮಾನ ಸೆಟ್ ನಲ್ಲಿ ಹಾಜರಿರುತ್ತಿದ್ದರು.

Darshan and wife vijayalakshmi watching their son vinish acting

ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಮಗ ವಿನೀಶ್ ಅವರ ಅಭಿನಯ ನೋಡಿ ದರ್ಶನ್ ದಂಪತಿ ಸಖತ್ ಎಂಜಾಯ್ ಮಾಡಿದ್ದಾರೆ. ಮಗ ವಿನೀಶ್ ಕ್ಯಾಮೆರಾ ಮುಂದೆ ನಿಂತು ಅಭಿನಯಿಸುತ್ತಿದ್ದರೆ, ಇತ್ತ ವಿಜಯಲಕ್ಷ್ಮಿ ಪತಿಯ ಪಕ್ಕದಲ್ಲಿ ಕುಳಿತು ಮಗನ ನಟನೆಯನ್ನು ವೀಕ್ಷಿಸುತ್ತಿದ್ದರು.

ದರ್ಶನ್ ದಂಪತಿ ಜಾಲಿಯಾಗಿ ಕುಳಿತು ಮಗನ ನಟನೆ ನೋಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಸಹ ಈ ಮುದ್ದಾದ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಇನ್ನು ಯಜಮಾನ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಕೆಲವು ಚಿತ್ರಮಂದಿರದ ಮುಂದೆ ದರ್ಶನ್ ಮಗ ವಿನೀಶ್ ಅವರ ಕಟೌಟ್ ಹಾಕಿ ಇಂಡಸ್ಟ್ರಿಗೆ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ ಫ್ಯಾನ್ಸ್.

More from Filmibeat

English summary
Challenging star Darshan and his wife vijayalakshmi both are watching their son vinish acting at yajamana shooting spot. this video is now viral in social network.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X