ಮಂಡ್ಯ ಎಫೆಕ್ಟ್: ಒಂದೇ ಚಿತ್ರದಲ್ಲಿ ದರ್ಶನ್-ಯಶ್ ನಟನೆ.!

Recommended Video

Lok Sabha Elections 2019 : ಜೋಡೆತ್ತು ಟೈಟಲ್‍ಗಾಗಿ ಕಾದಾಟ | FILMIBEAT KANNADA

ಅದೊಂದು ಕಾಲವಿತ್ತು. ದರ್ಶನ್ ಮತ್ತು ಯಶ್ ಒಬ್ಬರನ್ನ ಕಂಡ್ರೆ ಮತ್ತೊಬ್ಬರಿಗೆ ಆಗಲ್ಲ. ಇವರಿಬ್ಬರು ಇಂಡಸ್ಟ್ರಿಯಲ್ಲಿ ಹಾವು-ಮುಂಗುಸಿ ಇದ್ದಂತೆ. ಪರಸ್ಪರ ಇಬ್ಬರು ಕೌಂಟರ್ ಡೈಲಾಗ್ ಗಳ ಮೂಲಕ ಕಿತ್ತಾಡುತ್ತಿದ್ದರು ಎಂಬ ವಿಷ್ಯಗಳನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಜಗಳವಾಡ್ತಿದ್ದರು.

ಆದ್ರೀಗ, ಕಾಲ ಬದಲಾಗಿದೆ. ಯಶ್ ಮತ್ತು ದರ್ಶನ್ ಅಭಿಮಾನಿಗಳು ನಾವು ಇನ್ಮುಂದೆ 'ಅಣ್ತಮ್ಮಾಸ್' ಎಂದು ಬೀಗುತ್ತಿದ್ದಾರೆ. ಇದಕ್ಕೆ ಕಾರಣ ಮಂಡ್ಯ ಚುನಾವಣೆಯಲ್ಲಿ ಅಂಬರೀಶ್ ಪತ್ನಿ ಪರ ಮನೆ ಮಕ್ಕಳಂತೆ ಇಬ್ಬರು ನಟರು ನಿಂತಿರುವುದು.

ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದ ಘೋಷಿಸಿದ ದಿನ, ಅದ್ಯಾವ ಸಮಯದಲ್ಲಿ ದರ್ಶನ್ 'ನಮ್ಮದು ಜೋಡಿ ಎತ್ತಿನ ಗಾಡಿ' ಅಂದ್ರೂ ಅಲ್ಲಿಂದ ಜೋಡೆತ್ತು ಎಂಬ ಪದ ಸಖತ್ ಸದ್ದು ಮಾಡ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಈಗ ಯಶ್ ಮತ್ತು ದರ್ಶನ್ ಒಟ್ಟಿಗೆ ಸಿನಿಮಾ ಮಾಡೋ ಮಟ್ಟಕ್ಕೆ ಕಾರಣವಾಗಿದೆ. ಹೌದಾ, ದರ್ಶನ್ ಮತ್ತು ಯಶ್ ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಮುಂದೆ ಓದಿ.....

'ಜೋಡೆತ್ತು' ಚಿತ್ರವಾದ್ರೆ ನಟಿಸುತ್ತೀರಾ?

'ಜೋಡೆತ್ತು' ಚಿತ್ರವಾದ್ರೆ ನಟಿಸುತ್ತೀರಾ?

ಜೋಡೆತ್ತು ಎಂಬ ಪದ ಮಂಡ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಸದ್ದು ಮಾಡ್ತಿದ್ದು, ಒಂದು ವೇಳೆ ಇದೇ ಟೈಟಲ್ ನಲ್ಲಿ ಸಿನಿಮಾ ಮಾಡಿದ್ರೆ, ಯಶ್ ಮತ್ತು ನೀವು ನಟಿಸುತ್ತೀರಾ ಎಂದು ದರ್ಶನ್ ಅವರನ್ನ ಸುದ್ದಿ ಮಾಧ್ಯಮವೊಂದು ಪ್ರಶ್ನಿಸಿದಾಗ, ದರ್ಶನ್ ಕೂಡ ಹುಂ ಮಾಡುವುದಾಗಿ ಹೇಳಿದ್ದಾರೆ.

ಡೈರೆಕ್ಟರ್ ಮನಸ್ಸು ಮಾಡಬೇಕು

ಡೈರೆಕ್ಟರ್ ಮನಸ್ಸು ಮಾಡಬೇಕು

'ಒಳ್ಳೆಯ ಡೈರೆಕ್ಟರ್ ಸಿಕ್ಕರೇ ಖಂಡಿತಾ ಮಾಡುತ್ತೇನೆ' ಎಂದು ನಟ ದರ್ಶನ್ ಹೇಳುವ ಮೂಲಕ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸೋ, ದರ್ಶನ್ ಈ ಬಗ್ಗೆ ಒಲವು ತೋರಿರುವ ಇಂತಹ ಸಮಯದಲ್ಲಿ ಯಾರಾದರೂ ನಿರ್ದೇಶಕರು ಈ ಪ್ರಾಜೆಕ್ಟ್ ಬಗ್ಗೆ ಯೋಚನೆ ಮಾಡಬಹುದು.

ದೊಡ್ಡ ಸಿನಿಮಾ ಆಗಬಹುದು

ದೊಡ್ಡ ಸಿನಿಮಾ ಆಗಬಹುದು

ಒಂದು ವೇಳೆ ದರ್ಶನ್ ಮತ್ತು ಯಶ್ ಒಟ್ಟಿಗೆ ಸಿನಿಮಾ ಮಾಡುವುದು ಪಕ್ಕಾ ಆದ್ರೆ, ಇದು ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಸಿನಿಮಾ ಆಗಬಹುದು. ಬಜೆಟ್ ವಿಷ್ಯದಲ್ಲೂ, ಕ್ರೇಜ್ ವಿಚಾರದಲ್ಲೂ ಈ ಚಿತ್ರ ದಾಖಲೆ ಸೃಷ್ಟಿಸಬಹುದು. ಇಂತಹ ಮೆಗಾ ಪ್ರಾಜೆಕ್ಟ್ ಗೆ ಯಾವ ನಿರ್ದೇಶಕ ಅಥವಾ ನಿರ್ಮಾಪಕರ ಧೈರ್ಯ ಮಾಡ್ತಾರೋ ಗೊತ್ತಿಲ್ಲ.

ಟೈಟಲ್ ಗಾಗಿ ಪೈಪೋಟಿ

ಟೈಟಲ್ ಗಾಗಿ ಪೈಪೋಟಿ

ಅಂದ್ಹಾಗೆ, ಜೋಡೆತ್ತು ಎಂಬ ಟೈಟಲ್ ಗಾಗಿ ಕೆಲವು ನಿರ್ದೇಶಕ ಹಾಗೂ ನಿರ್ಮಾಪಕರು ಮುಗಿಬಿದ್ದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮನವಿ ಸಲ್ಲಿಸಿದ್ದಾರಂತೆ. ಈ ಟೈಟಲ್ ನಮಗೆ ಬೇಕು, ನಮಗೆ ಬೇಕು ಎಂದು ಪೈಪೋಟಿ ಬಿದ್ದಿದ್ದಾರಂತೆ. ಬರಿ ಜೋಡೆತ್ತು ಮಾತ್ರವಲ್ಲ, ಕಳ್ಳೆತ್ತು, ಮಂಡ್ಯದ ಹೆಣ್ಣು, ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ಗೂ ಭಾರಿ ಡಿಮ್ಯಾಂಡ್ ಇದೆಯಂತೆ.

More from Filmibeat

English summary
If i get good director definitely i will act with rocking star yash said challenging star darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X