»   » ಡಿ ಬಾಸ್ ಮನವಿಯನ್ನ ಅಭಿಮಾನಿಗಳು ಪರಿಗಣಿಸಬೇಕಾಗಿದೆ

ಡಿ ಬಾಸ್ ಮನವಿಯನ್ನ ಅಭಿಮಾನಿಗಳು ಪರಿಗಣಿಸಬೇಕಾಗಿದೆ

Posted By:
Subscribe to Filmibeat Kannada
ಡಿ ಬಾಸ್ ನಿಂದ ಅಭಿಮಾನಿಗಳಲ್ಲಿ ಒಂದು ಮನವಿ | FIlmibeat Kannada

ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್ ವಾರ್ ಗಳು ಆಗಾಗ ಆಗುತ್ತಲೇ ಇರುತ್ತವೆ. ಹೊಸ ಚಿತ್ರಗಳು ಬಿಡುಗಡೆ ಆದಾಗ, ಚಿತ್ರದಲ್ಲಿ ಕೌಂಟರ್ ಡೈಲಾಗ್ ಗಳು ಇದ್ದಾಗ ಇಂತಹ ಕೋಳಿ ಜಗಳಗಳು ಆಗುವುದು ಕಾಮನ್ ವಿಚಾರ.

ಇತ್ತೀಚಿಗಷ್ಟೇ ದರ್ಶನ್ ಅಭಿಮಾನಿ ನಟ ಯಶ್ ಭಾವಚಿತ್ರಗಳನ್ನ ಬಳಸಿ ಅಸಹ್ಯವಾಗುವಂತಹ ರೀತಿಯಲ್ಲಿ ಟ್ರೋಲ್ ಮಾಡಿ ಫೇಸ್ ಬುಕ್ ನಲ್ಲಿ ಅಪ್ಡೇಟ್ ಮಾಡಿದ್ದರು. ಯಶ್ ಅಭಿಮಾನಿಗಳು ಕೂಡ ನಾವು ಕಮ್ಮಿ ಇಲ್ಲ ಎನ್ನುವ ಹಾಗೇ ದರ್ಶನ್ ಅವರ ಫೋಟೋಗಳನ್ನ ಬಳಸಿಕೊಂಡು ಟ್ರೋಲ್ ಮಾಡಿದ್ದರು.

ಕನ್ನಡದ ಈ ಎಲ್ಲ ಸ್ಟಾರ್ ಗಳು ಫಿಧಾ ಆಗಿರುವುದು ಈ ಒಂದು ಡ್ರೆಸ್ ನೋಡಿ

ಈ ವಿಚಾರ ಅತಿಯಾಗಿ ಮಾಧ್ಯಮಗಳಲ್ಲಿ ಸುದ್ದಿ ಕೂಡ ಆಗಿತ್ತು. ಆದರೆ ಡಿ ಬಾಸ್ ಅಭಿಮಾನಿಗಳು ಆತ ದರ್ಶನ್ ಅವರ ಅಭಿಮಾನಿಯೇ ಅಲ್ಲ ಒಮ್ಮೆ ದರ್ಶನ್ ಅವರು ಹೇಳುವ ಮಾತನ್ನ ಕೇಳಿಸಿಕೊಳ್ಳಿ ನಂತರ ನಿರ್ಧಾರ ನಿಮಗೆ ಬಿಟ್ಟಿದ್ದು ಎನ್ನುತ್ತಿದ್ದಾರೆ. ಹಾಗಾದರೆ ಫ್ಯಾನ್ಸ್ ವಾರ್ ಬಗ್ಗೆ ದರ್ಶನ್ ಹೇಳಿದ್ದಾದರು ಏನು ಅಂತೀರಾ ಮುಂದೆ ಓದಿ.

ದರ್ಶನ್ ಮನವಿಯನ್ನ ಮತ್ತೆ ನೆನಪಿಸದ ಅಭಿಮಾನಿ

2015 ರಲ್ಲಿ ದರ್ಶನ್ ಅಭಿಮಾನಿಗಳಿಗೂ ಹಾಗೂ ಯಶ್ ಅಭಿಮಾನಿಗಳಿಗೂ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸ್ಟಾರ್ ವಾರ್ ಶುರುವಾಗಿತ್ತು. ಆ ಸಂದರ್ಭದಲ್ಲಿ ಡಿ ಬಾಸ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಆ ಮನವಿಯನ್ನ ಮತ್ತೆ ಫೇಸ್ ಬುಕ್ ನಲ್ಲಿ ರೀ ಪೋಸ್ಟ್ ಮಾಡುತ್ತಿದ್ದಾರೆ ಡಿ ಕಂಪನಿಯ ಸದಸ್ಯರು

ನನಗೆ ನೋವಾಗುವಂತ ಕೆಲಸ ಮಾಡಬೇಡಿ

ನನ್ನ ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ. ಫೇಸ್ಬುಕ್, ಟ್ವಿಟ್ಟರ್ ಗಳಲ್ಲಿ ಬೇರೆ ಸಹನಟರನ್ನು ನಿಂದಿಸಿ ಮಾತನಾಡುವುದು ಇವು ಯಾವುದು ಒಳಿತಲ್ಲ. ನನ್ನ ನಿಜವಾದ ಅಭಿಮಾನಗಳಾಗಿದ್ದಲ್ಲಿ ಅದನ್ನು ನಿಲ್ಲಿಸಬೇಕು. ಯಾರಾದರೂ ಅಂತ ಕೆಲಸಗಳಲ್ಲಿ ಭಾಗವಹಿಸಿದರೆ ನನಗೆ ನೋವಾಗುವುದಂತು ನಿಜ. ಬೇರೆಯವರು ಮಾಡ್ತಾರೆ ಅಂತ, ನಾವು ಅವರ ವಿರುದ್ಧ ಅದೇ ರೀತಿ ವರ್ತಿಸಿದರೆ ನಮಗೂ ಬೇರೆಯವರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಎಲ್ಲರನ್ನೂ ಪ್ರೀತಿಸಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ. -ನಿಮ್ಮ ದಾಸ ದರ್ಶನ್

ಯಾರದ್ದೋ ತಪ್ಪಿಗೆ ಮತ್ಯಾರಿಗೋ ಶಿಕ್ಷೆ

ಸ್ಟಾರ್ ನಟರ ಹೆಸರಿನಲ್ಲಿ ಅಭಿಮಾನಿಗಳು ಎಂದು ಹೇಳಿಕೊಂಡು ಮತ್ತೊಬ್ಬ ನಟರನ್ನ ನಿಂದಿಸುತ್ತಾ ಸ್ಟಾರ್ ಗಳ ಹೆಸರಿಗೆ ಕಳಂಕ ತರುವಂತಹ ಕೆಲಸವನ್ನ ಕೆಲ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಇಂತಹ ಕೆಲಸಗಳು ಯಾವತ್ತಿಗೂ ಚಿತ್ರರಂಗಕ್ಕಾಗಲಿ ಕಲಾವಿದರಿಗಾಗಲಿ ಒಳ್ಳೆಯ ಹೆಸರನ್ನು ತಂದು ಕೊಡುವುದಿಲ್ಲ.

ಸ್ಟಾರ್ ವಾರ್ ನಿಲ್ಲಿಸಿ ಕನ್ನಡ ಸಿನಿಮಾ ಗೆಲ್ಲಿಸಿ

ಕನ್ನಡ ಸಿನಿಮಾರಂಗ ಬೆಳೆದಿದೆ. ಅಭಿಮಾನಿಗಳು ಬದಲಾಗುತ್ತಿದ್ದಾರೆ ಸ್ಟಾರ್ ಕಲಾವಿದರುಗಳೇ ನಂಬರ್ ಒನ್ ಪಟ್ಟ ಬಿಟ್ಟು ಉತ್ತಮ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸ್ಟಾರ್ ವಾರ್ ಗಳನ್ನ ಬಿಟ್ಟು ಒಳ್ಳೆ ಚಿತ್ರಗಳನ್ನ ಗೆಲ್ಲಿಸಲು ಮುಂದಾಗಿ ಎನ್ನುವುದು ಕಲಾವಿದರ ಮನವಿ ಆಗಿದೆ.

English summary
Kannada actor Darshan and Yash fans have started fighting in the social networking site, Darshan had earlier appealed not to blame the other artist.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada