'ಗಜ' ಮತ್ತು 'ಗಜಕೇಸರಿ' ಹೆಸರಲ್ಲಿ ಹೆಚ್ಚಾಗ್ತಿವೆ ಫ್ಯಾನ್ಸ್ ಪೇಜ್ ಗಳು
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಸುಮಲತಾ ಎಡ ಬಲಕ್ಕೆ ನಿಂತು ಪರ ಪ್ರಚಾರ ಶುರು ಮಾಡಿದ್ದಾರೆ. ಅಂಬಿ ಮನೆ ಮಕ್ಕಳಂತೆ ಇರುವ ದರ್ಶನ್ ಮತ್ತು ಯಶ್ ಇಬ್ಬರೂ ಸುಮಲತಾ ಅವರ ಜೊತೆಯೆ ಇದ್ದು, ಪ್ರತಿ ಹೆಜ್ಜೆ ಹೆಜ್ಜೆಗೂ ಸಾಥ್ ಕೊಡ್ತಿದ್ದಾರೆ.
ಮಂಡ್ಯದಲ್ಲಿ ದರ್ಶನ್ ಮತ್ತು ಯಶ್ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಂತೆ, ಮತ್ತು ಒಂದೇ ವೇದಿಕೆಯಲ್ಲಿ ಅಮ್ಮ ಸುಮಲತಾ ಅವರ ಅಕ್ಕಪಕ್ಕದಲ್ಲೇ ಕೂಳಿತುಕೊಳ್ಳುತ್ತಿದಂತೆ, ಇತ್ತ ಡಿ-ಬಾಸ್ ಮತ್ತು ಯಶ್ ಫ್ಯಾನ್ಸ್ ಇಬ್ಬರು ಖುಷಿಯಾಗಿದ್ದಾರೆ. ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ಫ್ಯಾನ್ಸ್ ಈಗ ಒಂದೇ ಮನೆಯ ಮಕ್ಕಳು ನಾವು ಎಂದು ಒಂದಾಗಿದ್ದಾರೆ.
ಅದಕ್ಕೆ ತಾಜಾ ಉದಾಹರಣೆ, ಫೇಸ್ ಬುಕ್ ನಲ್ಲಿ ಹೊಸದಾಗಿ ಓಪನ್ ಆಗಿರುವ ಫ್ಯಾನ್ಸ್ ಪೇಜ್ ಗಳು. ಹೌದು, ದರ್ಶನ್ ಮತ್ತು ಯಶ್ ಹೆಸರಲ್ಲಿ ಹಲವು ಫ್ಯಾನ್ಸ್ ಪೇಜ್ ಗಳು ಓಪನ್ ಆಗ್ತಿವೆ. ಇಷ್ಟು ದಿನ ಯಶ್ ಮತ್ತು ದರ್ಶನ್ ಹೆಸರಿಲ್ಲಿ ಫ್ಯಾನ್ಸ್ ಪೇಜ್ ಕಂಡಿದ್ದು ಕಡಿಮೆ. ಇದ್ದರೂ ಕಣ್ಣಿಗೆ ಅಂತೂ ಬಿದ್ದಿರಲಿಲ್ಲ. ಆದ್ರೆ, ಸುಮಲತಾಗಾಗಿ ಇಬ್ಬರು ಒಂದಾಗಿ ನಿಂತಿರುವುದನ್ನ ನೋಡಿ ಈಗ ಹೊಸ ಹೊಸ ಫ್ಯಾನ್ಸ್ ಪೇಜ್ ಹುಟ್ಟಿಕೊಂಡಿದೆ.

ಈ ಹಿಂದೆ ದರ್ಶನ್ ಮತ್ತು ಸುದೀಪ್ ಹೆಸರಲ್ಲಿ ಸಾಕಷ್ಟು ಫ್ಯಾನ್ಸ್ ಪೇಜ್ ಗಳು ತೆರೆದಿದ್ದವು. ಆದ್ರೀಗ, ಇದೆ ಮೊದಲ ಬಾರಿಗೆ ಡಿ ಬಾಸ್ ಮತ್ತು ಯಶ್ ಫ್ಯಾನ್ಸ್ ಪೇಜ್ ಗಳು ಶುರುವಾಗುತ್ತಿವೆ. ಅಲ್ಲದೆ ಈ ಪೇಜ್ ಗಳಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಫೋಟೋಗಳ ಜೊತೆಗೆ ದರ್ಶನ್ ಮತ್ತು ಯಶ್ ಫೋಟೋಗಳನ್ನು ಅಪ್ ಲೋಡ್ ಮಾಡುವ ಮೂಲಕ ಅಂದು ಅವರಿಬ್ಬರು, ಇಂದು ಇವರಿಬ್ಬರು ಉತ್ತಮ ಗೆಳೆಯರು ಎನ್ನುವ ಅರ್ಥದಲ್ಲಿ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಇಬ್ಬರು ಸಿಂಹಗಳು ಎನ್ನುವ ರೀತಿ ದರ್ಶನ್ ಮತ್ತು ಯಶ್ ಅವರನ್ನು ಈ ಪೇಜ್ ಗಳಲ್ಲಿ ಬಿಂಬಿಸಲಾಗಿದೆ. ಈ ಹಿಂದೆ ಸಾಕಷ್ಟು ಬಾರಿ ದಚ್ಚು ಮತ್ತು ಯಶ್ ಫ್ಯಾನ್ಸ್ ಕಿತ್ತಾಡಿಕೊಂಡಿರುವ ಉದಾಹರಣೆಗಳಿವೆ. ಆದರೀಗ ಇಬ್ಬರು ನಟರ ಫ್ಯಾನ್ಸ್ ಒಂದಾಗಿದ್ದಲ್ಲದೆ ಇವರಿಬ್ಬರ ಹೆಸರಲ್ಲಿ ಫ್ಯಾನ್ಸ್ ಪೇಜ್ ಕೂಡ ಶುರುವಾಗಿರುವುದು ಅಚ್ಚರಿ ಮೂಡಿಸಿದೆ.


Click it and Unblock the Notifications











