twitter
    For Quick Alerts
    ALLOW NOTIFICATIONS  
    For Daily Alerts

    ಜೆಡಿಎಸ್ ಕಾರ್ಯಕ್ರಮದಲ್ಲಿ ದರ್ಶನ್-ಯಶ್ ಸಿನಿಮಾ ಹಾಡುಗಳು ಬ್ಯಾನ್

    |

    Recommended Video

    ರಾಮನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಯಶ್ ದರ್ಶನ್ ಹಾಡುಗಳಿಗೆ ಬ್ರೇಕ್ | FI:LMIBEAT KANNADA

    ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಸಿಟ್ಟು ಜೆಡಿಎಸ್ ಗೆ ಇನ್ನೂ ಕಮ್ಮಿ ಆದಂತೆ ಕಾಣುತ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಪರವಾಗಿ ಜೋಡೆತ್ತುಗಳು ನಡೆದ ಪ್ರಚಾರದ ಬಿಸಿ ಇನ್ನು ಆರಿಲ್ಲ. ನಿಖಿಲ್ ಕುಮಾರ್ ನನ್ನು ಸೋಲಿಸಿದ ಸೇಡನ್ನು ಜೆಡಿಎಸ್ ಬೇರೆ ಬೇರೆ ವಿಧಾನದ ಮೂಲಕ ತೀರಿಸಿಕೊಳ್ಳುತ್ತಿದೆ.

    ಇತ್ತೀಚಿಗೆ ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇದು ಹೆಚ್ ಡಿ ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ನಡೆದ ಕಾರ್ಯಕ್ರವಾದ್ದರಿಂದ ಇಲ್ಲಿ ದರ್ಶನ್ ಮತ್ತು ಯಶ್ ಚಿತ್ರಗಳ ಹಾಡುಗಳನ್ನು ಬ್ಯಾನ್ ಮಾಡಲಾಗಿತ್ತು.

    ದರ್ಶನ್ ಚಿತ್ರಕ್ಕೆ 'ಬಾಹುಬಲಿ' ಸಂಗೀತ ನಿರ್ದೇಶಕ ಸಾಥ್ದರ್ಶನ್ ಚಿತ್ರಕ್ಕೆ 'ಬಾಹುಬಲಿ' ಸಂಗೀತ ನಿರ್ದೇಶಕ ಸಾಥ್

    ಆಯೋಜಕರು ಮೊದಲೇ ಯಶ್ ಮತ್ತು ದರ್ಶನ್ ಚಿತ್ರಗಳ ಹಾಡುಗಳನ್ನು ಹಾಡಬಾರದೆಂದು ಗಾಯಕರಿಗೆ ತಾಕೀತು ಮಾಡಿದ್ದರಂತೆ. ಹಾಗಾಗಿ ಗಾಯಕರು ಜೋಡೆತ್ತುಗಳ ಚಿತ್ರಗಳ ಹಾಡನ್ನು ಬಿಟ್ಟು ಉಳಿದೆಲ್ಲ ಹಾಡುಗಳನ್ನು ಹಾಡುತ್ತಿದ್ದರು. ದರ್ಶನ್ ಮತ್ತು ಯಶ್ ಚಿತ್ರಗಳ ಹಾಡು ಈಗ ಬರಹುದು, ಕೆಲವೇ ಕ್ಷಣದಲ್ಲಿ ಹಾಡಬಹುದು ಎಂದು ಕಾದು ಕಾದು ಸುಸ್ತಾದ ಅಭಿಮಾನಿಗಳು ಡಿ ಬಾಸ್ ಮತ್ತು ಯಶ್ ಹಾಡುಗಳು ಎಂದು ಕೂಗಲು ಪ್ರಾರಂಭಿಸಿದರು.

    Darshan And Yash Movie Songs Banned In JDS Program At Ramanagara

    ಅಭಿಮಾನಿಗಳ ಕೂಗು ಮುಗಿಲು ಮುಟ್ಟಿತ್ತು. ಆದ್ರೂ ಕೂಡ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಜೋಡೆತ್ತುಗಳ ಹಾಡು ಕೇಳಿಸಲೇ ಇಲ್ಲ. ಇದರಿಂದ ಬೇಸರಗೊಂಡಂತಹ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. ನಟರಿಬ್ಬರ ವಿರುದ್ಧ ಪದೇ ಪದೇ ಅಸಮಾಧಾನ ಹೊರಹಾಕುತ್ತಿರುವುದು ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

    English summary
    Kannada actor Darshan and Yash movie songs banned in JDS program at Ramanagara.
    Sunday, July 28, 2019, 16:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X