ದರ್ಶನ್ ಆರೋಗ್ಯ ವಿಚಾರಿಸಿದ ಯಶ್, 'ಮರಿ ರಾಜಾಹುಲಿ'ಗೆ ಶುಭಕೋರಿದ ದಾಸ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ನೇರ ನುಡಿ ಮತ್ತು ನೇರ ವ್ಯಕ್ತಿತ್ವ. ಏನಾದರೂ ಇದ್ರೆ ಅದನ್ನ ಡೈರೆಕ್ಟ್ ಆಗಿ ಹೇಳುವ ಕಲಾವಿದ. ಇಂತಹ ದರ್ಶನ್ ಅವರಿಗೆ ಕೆಲವು ನಟರ ಜೊತೆ ಅಷ್ಟಾಗಿ ಸಂಬಂಧ ಚೆನ್ನಾಗಿಲ್ಲ ಎಂಬ ಮಾತಿದೆ.

ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಒಬ್ಬರು. ದರ್ಶನ್ ಮತ್ತು ಯಶ್ ನಡುವೆ ಸಂಬಂಧ ಉತ್ತಮವಾಗಿಲ್ಲ, ಇನ್ನು ಇವರಿಬ್ಬರ ಫ್ಯಾನ್ಸ್ ನಡುವೆ ಕೂಡ ಬಾಂಧವ್ಯ ಚೆನ್ನಾಗಿಲ್ಲ ಎಂಬುದು ಟಾಕ್.

ಆದ್ರೆ, ಇದೆಲ್ಲವೂ ಅಂತೆ ಕಂತೆಗಳು ಅಷ್ಟೇ. ದರ್ಶನ್ ಮತ್ತು ಯಶ್ ಚೆನ್ನಾಗಿದ್ದಾರೆ. ಅವರಿಬ್ಬರ ಪರಸ್ಪರ ಸಿಕ್ಕಾಗ ಖುಷಿಯಿಂದಲೇ ಮಾತನಾಡ್ತಾರೆ. ಕೆಲವರು ಹೇಳುವಂತೆ ಮನಸ್ತಾಪ, ಸ್ಟಾರ್ ವಾರ್ ಎಂಬುದು ಏನೂ ಇಲ್ಲ. ಇದೆಕ್ಕೆಲ್ಲಾ ಸ್ವರ್ತ ಡಿ-ಬಾಸ್ ಮತ್ತು ಯಶ್ ತೆರೆ ಎಳೆದಿದ್ದಾರೆ. ಇತ್ತೀಚಿಗೆ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಮತ್ತು ಯಶ್ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಅಷ್ಟಕ್ಕೂ, ಏನಿದು ಸ್ಪಷೆಲ್.? ಮುಂದೆ ಓದಿ.....

ಸರಸ್ವತಿ ಥಿಯೇಟರ್ ನಲ್ಲಿ ದರ್ಶನ್ ಸಿನಿಮಾ ನೋಡ್ತಿದ್ದೆ

ಸರಸ್ವತಿ ಥಿಯೇಟರ್ ನಲ್ಲಿ ದರ್ಶನ್ ಸಿನಿಮಾ ನೋಡ್ತಿದ್ದೆ

ಚಾಲೆಂಜಿಂಗ್ ಸ್ಟಾರ್ ಜೊತೆ ದೂರವಾಣಿಯ ಮೂಲಕ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮೈಸೂರಿನ ಹಳೆಯ ನೆನಪುಗಳನ್ನ ಹೇಳಿಕೊಂಡರು. 'ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ನಿಮ್ಮ ಸಿನಿಮಾಗಳನ್ನ ನೋಡ್ತಿದ್ವಿ. ನಿಮ್ಮ ಸಿನಿಮಾಗಳು ನಮಗೆ ಪ್ರೇರಣೆ. ನಮ್ಮ ಮೈಸೂರು ಹೀರೋ ಎಂಬ ಖುಷಿ. ನಿಮ್ಮ ಸಿನಿಮಾಗೆ ಥಿಯೇಟರ್ ಗೆ ಸಿದ್ಧ ಮಾಡುತ್ತಿದ್ದೆಲ್ಲವನ್ನ ನೋಡಿ ಖುಷಿಯಾಗ್ತಿತ್ತು ಸರ್' ಅಂತ ಯಶ್ ಹೇಳಿದರು.

ಈಗ ಅದೇ ಥಿಯೇಟರ್ ಮುಂದೆ ನಿಮ್ಮ ಕಟೌಟ್

ಈಗ ಅದೇ ಥಿಯೇಟರ್ ಮುಂದೆ ನಿಮ್ಮ ಕಟೌಟ್

ಯಶ್ ಅವರ ಈ ಮಾತು ಕೇಳಿದ ದರ್ಶನ್ 'ಈಗ ಅದೇ ಸರಸ್ವತಿ ಚಿತ್ರಮಂದಿರದ ಮುಂದೆ ನಿಮ್ಮ ಕಟೌಟ್ ನಿಲ್ಲುತ್ತಿದೆ ಅಲ್ವಾ. ಅದಕ್ಕಿಂತ ಖುಷಿ ಇನ್ನೇನಿದೆ ಹೀರೋ' ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗವನ್ನ ಎತ್ತರಕ್ಕೆ ಕರೆದುಕೊಂಡು ಹೋಗಲಿ

ಕನ್ನಡ ಚಿತ್ರರಂಗವನ್ನ ಎತ್ತರಕ್ಕೆ ಕರೆದುಕೊಂಡು ಹೋಗಲಿ

'ನವದುರ್ಗಿಗಳ ಆಶೀರ್ವಾದ ಅವರ ಮೇಲೆ ಇರಲಿ. ಇನ್ನು ಒಳ್ಳೊಳ್ಳೆ ಚಿತ್ರಗಳನ್ನ ಮಾಡಲಿ, ನಮ್ಮ ಕನ್ನಡ ಚಿತ್ರರಂಗವನ್ನ ಮತ್ತಷ್ಟು ಮೇಲಕ್ಕೆ ಕರೆದುಕೊಂಡು ಹೋಗಲಿ ಅಂತ ಹೇಳ್ತೀನಿ'' ಎಂದು ದರ್ಶನ್ ರಾಕಿಂಗ್ ಸ್ಟಾರ್ ಗೆ ಶುಭಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಶ್ 'ಸರ್ ನೀವೆಲ್ಲಾ ನಮಗೆ ಪ್ರೇರಣೆ. ನಿಮ್ಮ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ ಅಷ್ಟೆ' ಎಂದು ಥ್ಯಾಂಕ್ಸ್ ತಿಳಿಸಿದರು.

ಬೇಗ ಕಂಬ್ಯಾಕ್ ಮಾಡಿ ಸರ್

ಬೇಗ ಕಂಬ್ಯಾಕ್ ಮಾಡಿ ಸರ್

'ಕಲಾವಿದರಿಗೆ ಯಾವತ್ತೂ ಗಾಯಗಳು ಇದ್ದೇ ಇರುತ್ತೆ. ಅದೇನ್ ಆದರೂ ಜನಗಳನ್ನ ರಂಜಿಸಲು ನಾವು ರೆಡಿಯಾಗ್ಬಿಡ್ತೀವಿ. ಸರ್ ಆದಷ್ಟೂ ಬೇಗ ನೀವು ರೆಡಿಯಾಗಿ ಬರ್ತೀರಾ, ಜಿಮ್ ಗೆ ಹೋಗಿ ಟಫ್ ಆಗಿ ಕಂಬ್ಯಾಕ್ ಆಗ್ತೀರಾ ಸರ್. ಗೆಟ್ ವೆಲ್ ಸೂನ್ ಸರ್' ಎಂದು ದರ್ಶನ್ ಅವರಿಗೆ ರಾಜಾಹುಲಿ ವಿಶ್ ಮಾಡಿದ್ರು.

ಗುಡ್ ನ್ಯೂಸ್ ಬೇಗ ಕೊಡಿ ಹೀರೋ

ಗುಡ್ ನ್ಯೂಸ್ ಬೇಗ ಕೊಡಿ ಹೀರೋ

'ನಮ್ಮ ಹೀರೋ ಅವರು ಹೊಸ ಸುದ್ದಿ ಕೊಡ್ತೀದ್ದಾರೆ. ಆದಷ್ಟೂ ಬೇಗ ಕೊಡಿ' ಎಂದರು. ಇದನ್ನ ಕೇಳಿ ಯಶ್ ಅವರು 'ಖಂಡಿತಾ ಸರ್ ಎಂದು ಥ್ಯಾಂಕ್ಸ್' ಹೇಳಿದ್ರು. ದರ್ಶನ್ ಮತ್ತು ಯಶ್ ಅವರ ಈ ಸಂಭಾಷಣೆ ನೋಡಿದ್ಮೇಲೆ ಡಿ ಬಾಸ್ ಅಭಿಮಾನಿಗಳು ಮತ್ತು ಯಶ್ ಅಭಿಮಾನಿಗಳು ಬನ್ನಿ ನಾವೆಲ್ಲಾ ಅಣ್ತಮ್ಮಂದಿರು ಎಂದು ಖುಷಿಯಾಗಿದ್ದಾರೆ.

ಇಂಡಸ್ಟ್ರಿ ಆರೋಗ್ಯ ಚೆನ್ನಾಗಿದೆ, ಆದ್ರೆ...?

ಇಂಡಸ್ಟ್ರಿ ಆರೋಗ್ಯ ಚೆನ್ನಾಗಿದೆ, ಆದ್ರೆ...?

ದರ್ಶನ್-ಯಶ್ ಮಾತು, ಸುದೀಪ್ ಮತ್ತು ಶಿವರಾಜ್ ಕುಮಾರ್ ಸಿನಿಮಾ, ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಇಡೀ ಸ್ಯಾಂಡಲ್ ವುಡ್ ಸ್ಟಾರ್...ಇದೆಲ್ಲವೂ ನೋಡಿದ್ರೆ ಇಂಡಸ್ಟ್ರಿ ಹಾಗೂ ಸ್ಟಾರ್ ನಟರ ನಡುವೆ ಆರೋಗ್ಯಕರ ಸಂಬಂಧವಿದೆ ಎಂಬುದು ಗೊತ್ತಾಗುತ್ತಿದೆ. ಆದ್ರೆ, ಅಭಿಮಾನಿಗಳು ಸ್ಟಾರ್ ವಾರ್ ಎಂಬ ಪರಿಕಲ್ಪನೆಯಿಂದ ಹೊರಬರಬೇಕಿದೆ.

More from Filmibeat

English summary
Challenging star Darshan and Rocking star yash phone conversation about mysore dasara in tv channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X