ದರ್ಶನ್-ಯಶ್ ತೆಗೆದುಕೊಂಡ ರಿಸ್ಕ್ ಇತಿಹಾಸದಲ್ಲಿ ಮತ್ಯಾರು ತಗೊಳಲ್ಲ-ರಾಕ್ ಲೈನ್
Recommended Video
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಗೆಲುವಿಗಾಗಿ ಶ್ರಮಿಸಿದವರು ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಕಾರ್ಯವೈಖರಿ ಮರೆಯುವಂತಿಲ್ಲ. ಸಾಮಾನ್ಯವಾಗಿ ಸಿನಿಮಾ ಸ್ಟಾರ್ ಗಳು ಪ್ರಚಾರಕ್ಕೆ ಬಂದ್ರೆ ಒಂದು ದಿನ ಅಥವಾ ಎರಡು ದಿನ ಹೀಗೆ ಬಂದು ಹಾಗೆ ಕೈಬೀಸಿ ಹೋಗ್ತಾರೆ.
ಬಹುಶಃ ಇಲ್ಲಿಯವರೆಗೂ ಸುಮಾರು ಹದಿನೈದರಿಂದ ಇಪ್ಪತ್ತು ದಿನ ದರ್ಶನ್-ಯಶ್ ಪ್ರಚಾರ ಮಾಡಿದ ರೀತಿ ಬೇರೆ ಯಾರೂ ಮಾಡಿಲ್ಲ, ಮುಂದೆ ಮಾಡಲ್ಲ ಎಂಬ ಮಾತುಗಳು ಇವೆ. ಜೋಡೆತ್ತುಗಳ ಕಮಿಟ್ ಮೆಂಟ್ ನಿಜಕ್ಕೂ ಶ್ಲಾಘನೀಯ.
ಈ ಬಗ್ಗೆ ರಾಕ್ ಲೈನ್ ವೆಂಕಟೇಶ್ ದರ್ಶನ್ ಮತ್ತು ಯಶ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿ ಬಾಸ್ ಮತ್ತು ರಾಕಿ ಭಾಯ್ ತೆಗೆದುಕೊಂಡ ಲೈಫ್ ಮತ್ತು ಕರಿಯರ್ ರಿಸ್ಕ್ ಬಗ್ಗೆ ನಿರ್ಮಾಪಕ ರಾಕ್ ಲೈನ್ ಮಂಡ್ಯದ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ಹಿಂದೆ ಮಾಡಿಲ್ಲ, ಮುಂದೆ ಮಾಡಲ್ಲ
''ಚಿತ್ರರಂಗದಲ್ಲಿ ಇಂತಹ ಸ್ಥಾನಮಾನ ಪಡೆದುಕೊಂಡಿರುವ ಸೂಪರ್ ಸ್ಟಾರ್ ನಟರು, ಯಾರೂ ಇಂತಹ ಲೈಫ್ ರಿಸ್ಕ್ ಅಥವಾ ಕರಿಯರ್ ರಿಸ್ಕ್ ತೆಗೆದುಕೊಂಡು ಕೆಲಸ ಮಾಡ್ತಿರಲಿಲ್ಲ. ಹಿಂದೆನೂ ಮಾಡಿಲ್ಲ, ಮುಂದೆನೂ ಯಾರೂ ಮಾಡಲ್ಲ. ಇದೊಂದು ರೀತಿ ಇತಿಹಾಸ ನಿರ್ಮಿಸಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮ ಕಾಲಿಗೆ ನಮಸ್ಕಾರ ಮಾಡ್ತಿದ್ದೆ
'ಎಲೆಕ್ಷನ್ ಆದ್ಮೇಲೆ ನಾನು ಅವರಿಗೆ ಹೇಳಿದೆ. ನಿಜವಾಗಲೂ ವಯಸ್ಸಿನಲ್ಲಿ ನನಗಿಂತ ನೀವಿಬ್ಬರು ದೊಡ್ಡವರಾಗಿದ್ದರೆ ನಿಮ್ಮ ಕಾಲಿಗೆ ನಮಸ್ಕಾರ ಮಾಡಿಕೊಳ್ಳುತ್ತಿದ್ದೆ'' ಎಂದು ಹೇಳುವ ಮೂಲಕ ಭಾವುಕರಾದರು.
'ಸ್ವಾಭಿಮಾನ' ವೇದಿಕೆಯಲ್ಲಿ ಮಂಡ್ಯ ಜನರ ಪಾದಕ್ಕೆ ನಮಸ್ಕರಿಸಿದ ದರ್ಶನ್

ಜೋಡೆತ್ತು ತೆಗೆದುಕೊಂಡ ಅಂತಹ ರಿಸ್ಕ್ ಏನು?
ದರ್ಶನ್ ಮತ್ತು ಯಶ್ ಮಂಡ್ಯ ಚುನಾವಣೆಗಾಗಿ ಅಂತಹ ರಿಸ್ಕ್ ತೆಗೆದುಕೊಂಡರಾ ಎಂದು ನೋಡುವುದಾರೆ, ಹೌದು ಇದು ನಿಜಕ್ಕೂ ರಿಸ್ಕ್ ಆಗಿತ್ತು. ಒಂದೆರಡು ದಿನ ಆದ್ರೆ ಏನೂ ನಷ್ಟವಿಲ್ಲ. ಆದರೆ ಸುಮಾರು ಇಪ್ಪತ್ತು ದಿನ ತಮ್ಮ ಶೂಟಿಂಗ್, ಪರ್ಸನಲ್ ಕೆಲಸ ಬಿಟ್ಟು ಪ್ರಚಾರ ಮಾಡಿದ್ದು ನಿಜಕ್ಕೂ ಚಾಲೆಂಜ್ ಆಗಿತ್ತು.

ಮೊದಲೇ ಕಮಿಟ್ ಮೆಂಟ್ ಇತ್ತು
ಹಾಗ್ನೋಡಿದ್ರೆ, ಒಡೆಯ, ರಾಬರ್ಟ್ ಸಿನಿಮಾಗಳಲ್ಲಿ ತೊಡಗಿಕೊಳ್ಳಬೇಕಿದ್ದ ದರ್ಶನ್ ಮೊದಲೇ ಕಾಲ್ ಶೀಟ್ ಕೊಟ್ಟಿದ್ದರು. ಅದಕ್ಕೆ ತಕ್ಕಂತೆ ಶೂಟ್ ಪ್ಲಾನ್ ಕೂಡ ಮಾಡಲಾಗಿತ್ತು. ಈ ನಡುವೆ ಎಲೆಕ್ಷನ್ ಬಂದ್ಮೇಲೆ ಆ ದಿನಾಂಕವನ್ನ ಹಿಂದಕ್ಕೆ ಮುಂದಕ್ಕೆ ತಳ್ಳಲಾಯಿತು. ನಿರ್ಮಾಪಕರು ಕೂಡ ದರ್ಶನ್ ಗೆ ನೆರವಾದರು. ಅದೇ ರೀತಿ ಕೆಜಿಎಫ್ 2 ಚಿತ್ರಕ್ಕಾಗಿ ತಯಾರಾಗಿದ್ದ ಯಶ್ ಕೂಡ ಚುನಾವಣೆಗಾಗಿ ಮತ್ತಷ್ಟು ಸಮಯ ತೆಗೆದುಕೊಂಡರು. ಸ್ಟಾರ್ ನಟರ ಮಟ್ಟಿಗೆ ಒಂದೊಂದು ದಿನವೂ ಮುಖ್ಯವಾಗಿರುತ್ತೆ. ಅಂತಹದ್ರಲ್ಲಿ ಇಪ್ಪತ್ತು ದಿನ ಕೆಲಸ ಬಿಟ್ಟು ಪ್ರಚಾರ ಮಾಡಿದ್ದು ಒಂದು ರೀತಿ ರಿಸ್ಕ್.

ಕೆಲವರು ಹಿಂದೆ ಸರಿದರು
ಅಂಬರೀಶ್ ಅವರ ಪತ್ನಿ ಎಂಬ ಕಾರಣಕ್ಕಾಗಿ ಚಿತ್ರರಂಗದಿಂದ ಹಲವರು ಮಂಡ್ಯ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಮಾಡಬೇಕಿತ್ತು. ಆದ್ರೆ ನಿರೀಕ್ಷೆ ಮಾಡಿದವರು ಯಾರೂ ಕೂಡ ಬರಲಿಲ್ಲ. ಕೊನೆಗೆ ದರ್ಶನ್-ಯಶ್ ಇಬ್ಬರೇ ನಿಂತು ಪ್ರಚಾರ ಮಾಡಿದರು. ನೆನಪಿರಲಿ ಪ್ರೇಮ್ ಕೂಡ ಸಾಥ್ ಕೊಟ್ಟಿದ್ದರು.


Click it and Unblock the Notifications











